2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡುವುದು ಸರ್ಕಾರದ ಗುರಿ: ನಿರ್ಮಲಾ ಸೀತಾರಾಮನ್

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸರ್ಕಾರ ಶ್ರಮಿಸುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸರ್ಕಾರ ಶ್ರಮಿಸುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.

2024-25 ರ ಮಧ್ಯಂತರ ಬಜೆಟ್ ನ್ನು ಇಂದು ಲೋಕಸಭೆಯಲ್ಲಿ ಮಂಡಿಸಿ ಮಾತನಾಡಿ ನಿರ್ಮಲಾ ಸೀತಾರಾಮನ್, 'ಅನ್ನದಾತ' (ರೈತರು)ರಿಗಾಗಿ ಕನಿಷ್ಠ ಬೆಂಬಲ ಬೆಲೆಗಳನ್ನು ನಿಯತಕಾಲಿಕವಾಗಿ ಮತ್ತು ಸೂಕ್ತವಾಗಿ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಸರ್ಕಾರಕ್ಕೆ ಸಾಮಾಜಿಕ ನ್ಯಾಯವು ಪರಿಣಾಮಕಾರಿ ಮತ್ತು ಅಗತ್ಯ ಮಾದರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು. ಸರ್ಕಾರವು ವ್ಯವಸ್ಥಿತ ಅಸಮಾನತೆಗಳನ್ನು ನಿವಾರಿಸಲು ಗಮನಹರಿಸುತ್ತಿದೆ, ಸಾಮಾಜಿಕ-ಆರ್ಥಿಕ ರೂಪಾಂತರವನ್ನು ಸಾಧಿಸಲು ಫಲಿತಾಂಶಗಳ ಮೇಲೆ ಒತ್ತು ನೀಡಲಾಗಿದೆ ಎಂದರು. 

ನಾವು ಫಲಿತಾಂಶಗಳ ಮೇಲೆ ಕೇಂದ್ರೀಕರಿಸುತ್ತೇವೆ ಹೊರತು ವೆಚ್ಚಗಳ ಮೇಲೆ ಅಲ್ಲ. ಸರ್ಕಾರಕ್ಕೆ ಬಡವರು, ಮಹಿಳೆಯರು, ಯುವಕರು ಮತ್ತು ರೈತರು ನಾಲ್ಕು ಜಾತಿಗಳು ಮುಖ್ಯವಾಗಿದೆ. ಇವರ ಅಭಿವೃದ್ಧಿಯಿಂದಲೇ ದೇಶ ಮುನ್ನಡೆಯುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com