ಬಿಹಾರ: ಗೃಹ ಖಾತೆ ಉಳಿಸಿಕೊಂಡ ನಿತೀಶ್ ಕುಮಾರ್, ಬಿಜೆಪಿಯ ಸಾಮ್ರಾಟ್ ಚೌಧರಿಗೆ ಹಣಕಾಸು

ಇತ್ತೀಚಿಗೆ 9ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ನಿತೀಶ್ ಕುಮಾರ್ ಅವರು ಶನಿವಾರ ಖಾತೆ ಹಂಚಿಕೆ ಮಾಡಿದ್ದು, ಗೃಹ ಖಾತೆಯನ್ನು ತಾವೇ ಉಳಿಸಿಕೊಂಡಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್
ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಇತ್ತೀಚಿಗೆ 9ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ನಿತೀಶ್ ಕುಮಾರ್ ಅವರು ಶನಿವಾರ ಖಾತೆ ಹಂಚಿಕೆ ಮಾಡಿದ್ದು, ಗೃಹ ಖಾತೆಯನ್ನು ತಾವೇ ಉಳಿಸಿಕೊಂಡಿದ್ದಾರೆ.

ಅಧಿಸೂಚನೆಯ ಪ್ರಕಾರ, ಈ ಹಿಂದೆ ಜೆಡಿ-ಯು ಹೊಂದಿದ್ದ ಹಣಕಾಸು ಖಾತೆಯನ್ನು ಹೊಸ ಮಿತ್ರ ಪಕ್ಷ ಬಿಜೆಪಿಗೆ ನೀಡಲಾಗಿದೆ.

ಇಬ್ಬರು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಬಿಜೆಪಿಯ ಸಾಮ್ರಾಟ್ ಚೌಧರಿ ಅವರಿಗೆ ಹಣಕಾಸು ಖಾತೆ ಹಂಚಿಕೆ ಮಾಡಲಾಗಿದೆ.

ಮತ್ತೊಬ್ಬ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರಿಗೆ ಪ್ರಮುಖ ಖಾತೆಗಳಾದ ಕೃಷಿ ಮತ್ತು ರಸ್ತೆ ನಿರ್ಮಾಣ ನೀಡಲಾಗಿದೆ ಎಂದು ಅಧಿಸೂಚನೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com