ಕುನೋದಲ್ಲಿ ಚೀತಾಗಳ ಸಾವಿಗೆ ಕಾರಣ ತಿಳಿಸಿದ ಕೇಂದ್ರ ಸಚಿವ ಭೂಪೇಂದರ್ ಯಾದವ್!

ಚೀತಾ ಯೋಜನೆಯಡಿಯಲ್ಲಿ ಭಾರತಕ್ಕೆ ಬಂದಿದ್ದ ನಮೀಬಿಯಾದ ಚಿರತೆಗಳ ಸಾವಿನ ಕುರಿತು ಕೇಂದ್ರ ಸರ್ಕಾರ ಶುಕ್ರವಾರ ಮಾಹಿತಿ ನೀಡಿದ್ದು, ಸೆಪ್ಟಿಸೆಮಿಯಾದಿಂದ ಚೀತಾಗಳ ಸಾವಾಗಿದೆ ಎಂದು ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚೀತಾ ಯೋಜನೆಯಡಿಯಲ್ಲಿ ಭಾರತಕ್ಕೆ ಬಂದಿದ್ದ ನಮೀಬಿಯಾದ ಚಿರತೆಗಳ ಸಾವಿನ ಕುರಿತು ಕೇಂದ್ರ ಸರ್ಕಾರ ಶುಕ್ರವಾರ ಮಾಹಿತಿ ನೀಡಿದ್ದು, ಸೆಪ್ಟಿಸೆಮಿಯಾದಿಂದ ಚೀತಾಗಳ ಸಾವಾಗಿದೆ ಎಂದು ಹೇಳಿದೆ.

ಇತ್ತೀಚೆಗೆ ಇದೇ ಸೆಪ್ಟಿಸೆಮಿಯಾದಿಂದ ನಮೀಬಿಯಾದ ಚಿರತೆ ಶೌರ್ಯ ಸಾವನ್ನಪ್ಪಿದ್ದು, ಈ ಸ್ಥಿತಿಯಿಂದ ಸಾವನ್ನಪ್ಪಿದ ನಾಲ್ಕನೇ ಚೀತಾ ಇದಾಗಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ರಾಜ್ಯಸಭೆಗೆ ತಿಳಿಸಿದರು. ಶೌರ್ಯ ಹೆಸರಿನ ಚೀತಾ ಜನವರಿ 16 ರಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಮೃತಪಟ್ಟಿತ್ತು. ಇದು 2022 ರಲ್ಲಿ ಭಾರತದಲ್ಲಿ ಆಫ್ರಿಕಾದ ಬಿಗ್ ಕ್ಯಾಟ್ ಪುನಃ ಪರಿಚಯ ಯೋಜನೆ ಜಾರಿಯಾದ ನಂತರ ಸಾವನ್ನಪ್ಪಿದ 10ನೇ ಚೀತಾ ಆಗಿದೆ.

ಸೆಪ್ಟಿಸೆಮಿಯಾಗೆ 4 ಬಲಿ
ಇನ್ನು ಇತ್ತೀಚೆಗೆ ಸಾವನ್ನಪ್ಪಿದ ಶೌರ್ಯ ಚೀತಾ ಸೇರಿದಂತೆ ಸೆಪ್ಟಿಸೆಮಿಯಾ ಈ ವರೆಗೂ ಒಟ್ಟು 4 ಚೀತಾಗಳು ಸಾವನ್ನಪ್ಪಿವೆ. ಇದಕ್ಕೂ ಮೊದಲು ಟಿಬಿಲಿಸಿ ಎಂಬ ಹೆಣ್ಣು (ನಮೀಬಿಯಾದಿಂದ ಬಂದಿದ್ದು) ಮತ್ತು ಎರಡು ದಕ್ಷಿಣ ಆಫ್ರಿಕಾದ ತೇಜಸ್ ಮತ್ತು ಸೂರಜ್ ಎಂಬ ಚೀತಾಗಳೂ ಕೂಡ ಕಳೆದ ವರ್ಷ ಇದೇ ಸೆಪ್ಟಿಸೆಮಿಯಾದಿಂದ ಸಾವನ್ನಪ್ಪಿದ್ದವು.

ಏನಿದು ಸೆಪ್ಟಿಸೆಮಿಯಾ?
ಇನ್ನು ಸೆಪ್ಟಿಸೆಮಿಯಾ ಕುರಿತೂ ಮಾಹಿತಿ ನೀಡಿರುವ ಪರಿಸರ ಸಚಿವಾಲಯ "ಈ ಸ್ಥಿತಿಯು ಅವರ ದಟ್ಟವಾದ ಚಳಿಗಾಲದ ಕೋಟ್‌ನ ಹಿಂಭಾಗ ಮತ್ತು ಕುತ್ತಿಗೆಯ ಪ್ರದೇಶಗಳಲ್ಲಿ ಗಾಯಗಳಿಂದ ಹುಟ್ಟಿಕೊಳ್ಳುತ್ತದೆ. ಈ ಗಾಯಗಳಲ್ಲಿ ಹುಳುಗಳು (maggots)ದ ಮುತ್ತಿಕೊಂಡು ಬಳಿಕ ಅದು ಸೆಪ್ಟಿಸೆಮಿಯಾಕ್ಕೆ ಕಾರಣವಾಗುತ್ತದೆ ಎಂದು ಹೇಳಿದೆ. ಈ ಕುರಿತ ಮಾಹಿತಿಯನ್ನು ಕಳೆದ ವರ್ಷ ಪ್ರಾಜೆಕ್ಟ್ ಚೀತಾದ ವಾರ್ಷಿಕ ವರದಿಯಲ್ಲಿ ನೀಡಲಾಗಿತ್ತು. ಆದರೆ ಇತ್ತೀಚೆಗೆ ಸಾವನ್ನಪ್ಪಿದ್ದ ಶೌರ್ಯ ಚೀತಾ ಕೂಡ ಅದೇ ರೀತಿ ಸಾವನ್ನಪ್ಪಿದ್ದಾನೆಯೇ ಎಂಬುದು ಸ್ಪಷ್ಟವಾಗಿರಲಿಲ್ಲ. ಇದೀಗ ಅದರ ಸಾವಿನ ಮೂಲ ಸ್ಪಷ್ಟವಾಗಿದೆ ಎಂದು ಹೇಳಿದೆ.

ಇದೇ ವೇಳೆ ಪ್ರಾಣಿಗಳ ಲಭ್ಯತೆ ಮತ್ತು ಪರಿಚಯಿಸಲಾದ ಚಿರತೆಗಳ ಸ್ಥಿತಿಯನ್ನು ಅವಲಂಬಿಸಿ, ಮುಂದಿನ ಐದು ವರ್ಷಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾ ಅಥವಾ ಇತರ ಆಫ್ರಿಕನ್ ದೇಶಗಳಿಂದ 12-14 ಚೀತಾಗಳನ್ನು ತರಲು ಉದ್ದೇಶಿಸಲಾಗಿದೆ. ಮಧ್ಯಪ್ರದೇಶದ ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯದಲ್ಲಿ ಚೀತಾಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ತರಲಾದ 20 ವಯಸ್ಕ ಚೀತಾಗಳಲ್ಲಿ ಏಳು ಮತ್ತು ಭಾರತದಲ್ಲಿ ಜನಿಸಿದ 11 ಮರಿಗಳಲ್ಲಿ ಮೂರು ಸಾವನ್ನಪ್ಪಿವೆ. 11 ಮರಿಗಳಲ್ಲಿ ಏಳು ಕಳೆದ ತಿಂಗಳು ಜನಿಸಿದ್ದವು ಎಂದು ಯಾದವ್ ಗುರುವಾರ ಮೇಲ್ಮನೆಗೆ ತಿಳಿಸಿದರು. 

ಅಧಿಕಾರಿಗಳ ಪ್ರಕಾರ, ಭಾರತದಲ್ಲಿ ಚೀತಾಗಳನ್ನು ನಿರ್ವಹಿಸುವ ಮೊದಲ ವರ್ಷದಲ್ಲಿ ಎದುರಿಸಿದ ದೊಡ್ಡ ಸವಾಲುಗಳೆಂದರೆ, ಭಾರತದ ಬೇಸಿಗೆ ಮತ್ತು ಮಾನ್ಸೂನ್ ಸಮಯದಲ್ಲಿ, ಆಫ್ರಿಕನ್ ಚಳಿಗಾಲದ (ಜೂನ್ ನಿಂದ ಸೆಪ್ಟೆಂಬರ್) ನಿರೀಕ್ಷೆಯಲ್ಲಿ ಚೀತಾಗಳು ಚಳಿಗಾಲದ ಕೋಟು ಅಂದರೆ ಚಳಿಗಾಲಕ್ಕೆ ಹೊಂದುವ ದೈಹಿಕ ಬದಲಾವಣೆಗಳನ್ನು ಅನಿರೀಕ್ಷಿತವಾಗಿ ಅಭಿವೃದ್ಧಿಪಡಿಸಿಕೊಂಡಿದ್ದು ಕಾರಣ ಎನ್ನಲಾಗಿದೆ.

ಚಳಿಗಾಲದ ಕೋಟ್, ಹೆಚ್ಚಿನ ಆರ್ದ್ರತೆ ಮತ್ತು ತಾಪಮಾನದೊಂದಿಗೆ ಸೇರಿ, ತುರಿಕೆಗೆ ಕಾರಣವಾಗುತ್ತದೆ. ಇದೇ ವೇಳೆ ಚೀತಾಗಳು ಮರದ ಕಾಂಡಗಳು ಅಥವಾ ನೆಲದ ಮೇಲೆ ತಮ್ಮ ಕುತ್ತಿಗೆಯನ್ನು ಉಜ್ಜಿಕೊಳ್ಳಲು ಈ ಪರಿಸ್ಥಿತಿ ಪ್ರಾಣಿಗಳನ್ನು ಪ್ರೇರೇಪಿಸುತ್ತದೆ. ಇದು ಮೂಗೇಟುಗಳು ಮತ್ತು ಚರ್ಮದ ಗಾಯಕ್ಕೆ  ಕಾರಣವಾಗುತ್ತದೆ. ಈ ಗಾಯಗಳಲ್ಲಿ ನೊಣಗಳು ಮೊಟ್ಟೆಗಳನ್ನು ಇಡುತ್ತವೆ. ಇದರ ಪರಿಣಾಮವಾಗಿ ಹುಳುಗಳು ರೂಪುಗೊಳ್ಳುತ್ತವೆ. ಅಂತಿಮವಾಗಿ, ಈ ಹುಳುಗಳ ಕಾರಣದಿಂದ ಬ್ಯಾಕ್ಟೀರಿಯಾ ಸೋಂಕುಗಳು ಸಂಭವಿಸಿ ಸೆಪ್ಟಿಸೆಮಿಯಾಗೆ ಕಾರಣವಾಗುತ್ತದೆ. ಇದೇ ಸೆಪ್ಟಿಸೆಮಿಯಾ ಮೂರು ಚೀತಾಗಳ ಸಾವಿಗೆ ಕಾರಣವಾಯಿತು ಎಂದು ಅಧಿಕಾರಿಯೊಬ್ಬರು ವಿವರಿಸಿದರು. 

ಅಲ್ಲದೆ ಮುಂದಿನ ದಿನಗಳಲ್ಲಿ ದಪ್ಪವಾದ ಚಳಿಗಾಲದ ಕೋಟ್‌ಗಳನ್ನು ಅಭಿವೃದ್ಧಿಪಡಿಸದ ಚೀತಾಗಳನ್ನು ಆಮದು ಮಾಡಿಕೊಳ್ಳಲು ಭಾರತ ಯೋಜಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com