ಎಲ್ ನಿನೊ ಸ್ಥಿತಿ ದುರ್ಬಲ: ಸಮೃದ್ಧ ಮುಂಗಾರು ನಿರೀಕ್ಷೆ: ಹವಾಮಾನಶಾಸ್ತ್ರಜ್ಞರು

2023 ರಲ್ಲಿ ಕ್ಷೀಣಿಸಿದ್ದ ಮುಂಗಾರು ಈ ವರ್ಷ ಸಮೃದ್ಧವಾಗಿ ಮಳೆ ಸುರಿಸಲಿದೆ ಎಂದು ಹವಾಮಾನಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on

ನವದೆಹಲಿ: 2023 ರಲ್ಲಿ ಕ್ಷೀಣಿಸಿದ್ದ ಮುಂಗಾರು ಈ ವರ್ಷ ಸಮೃದ್ಧವಾಗಿ ಮಳೆ ಸುರಿಸಲಿದೆ ಎಂದು ಹವಾಮಾನಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ.

ಜಗತ್ತಿನಾದ್ಯಂತ ಹವಾಮಾನದ ಮೇಲೆ ಪರಿಣಾಮ ಬೀರುವ ಸಮಭಾಜಕ ಪೆಸಿಫಿಕ್ ಸಾಗರದ ಉಷ್ಣತೆ "ಎಲ್ ನಿನೊ ಸ್ಥಿತಿ" ದುರ್ಬಲವಾಗಿದ್ದು ಜೂನ್ ವೇಳೆಗೆ ಉತ್ತಮ ಮಳೆಯಾಗಲಿದೆ ಎಂದು ಕನಿಷ್ಟ ಎರಡು ಜಾಗತಿಕ ಮಟ್ಟದ ಏಜೆನ್ಸಿಗಳು ಹೇಳಿವೆ.

ಭಾರತದಲ್ಲಿನ ಹವಾಮಾನ ವಿಜ್ಞಾನಿಗಳು, ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಾ, ಜೂನ್-ಆಗಸ್ಟ್ ವೇಳೆಗೆ ಲಾ ನಿನಾ ಪರಿಸ್ಥಿತಿಗಳು ಸುಧಾರಿಸಲಿದ್ದು ಕಳೆದ ವರ್ಷಕ್ಕಿಂತ ಈ ವರ್ಷ ಮಾನ್ಸೂನ್ ಮಳೆ ಉತ್ತಮವಾಗಿರಬಹುದು ಎಂದು ಹೇಳಿದ್ದಾರೆ.

ಆದಾಗ್ಯೂ, ಹವಾಮಾನ ಮಾದರಿಗಳು ನಿಖರವಾದ ಮುನ್ಸೂಚನೆಗಳನ್ನು ಮಾಡಲು ಕಷ್ಟಕರವಾದ ಸಮಯವನ್ನು ಹೊಂದಿರುವ ಕಾರಣ ಮುನ್ಸೂಚನೆಯ ತಲೆನೋವು ಎಂದು ಪರಿಗಣಿಸಲಾದ 'ವಸಂತ ಋತುವಿನ ಮುನ್ಸೂಚನೆ ತಡೆಗೋಡೆ' ಯನ್ನು ಉಲ್ಲೇಖಿಸಿ ಹವಾಮಾನಶಾಸ್ತ್ರಜ್ಞರು ಎಚ್ಚರಿಕೆನ್ನು ನೀಡಿದ್ದಾರೆ.

ಭೂ ವಿಜ್ಞಾನ ಸಚಿವಾಲಯದ ಮಾಜಿಕಾರ್ಯದರ್ಶಿ ಮಾಧವನ್ ರಾಜೀವನ್ ಮಾತನಾಡಿ, ಜೂನ್-ಜುಲೈ ವೇಳೆಗೆ ಲಾ ನಿನಾ ಅಭಿವೃದ್ಧಿಗೊಳ್ಳುವ ಉತ್ತಮ ಸಂಭವನೀಯತೆ ಇದೆ. "ಎಲ್ ನಿನೋ ENSO- ತಟಸ್ಥ ಪರಿಸ್ಥಿತಿಗಳಿಗೆ ಪರಿವರ್ತನೆಯಾದರೂ, ಈ ವರ್ಷ ಮಾನ್ಸೂನ್ ಕಳೆದ ವರ್ಷಕ್ಕಿಂತ ಉತ್ತಮವಾಗಿರಬೇಕು" ಎಂದು ಅವರು ಹೇಳಿದ್ದಾರೆ.

ನೈಋತ್ಯ ಮುಂಗಾರು ಭಾರತದ ವಾರ್ಷಿಕ ಮಳೆಯ ಸುಮಾರು 70 ಪ್ರತಿಶತವನ್ನು ನೀಡುತ್ತದೆ, ಇದು ಜಿಡಿಪಿಯ ಸುಮಾರು 14 ಪ್ರತಿಶತವನ್ನು ಹೊಂದಿರುವ, ಮತ್ತು 1.4 ಶತಕೋಟಿ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕೃಷಿ ಕ್ಷೇತ್ರಕ್ಕೆ ನಿರ್ಣಾಯಕವಾಗಿದೆ.

ಯುನೈಟೆಡ್ ಸ್ಟೇಟ್ಸ್‌ನ ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (NOAA) ಕಳೆದ ವಾರ ಏಪ್ರಿಲ್-ಜೂನ್ ವೇಳೆಗೆ ಎಲ್ ನಿನೋ ENSO-ತಟಸ್ಥವಾಗಿ ಪರಿವರ್ತನೆಯಾಗುವ ಸಾಧ್ಯತೆ 79 ಪ್ರತಿಶತವಿದೆ ಮತ್ತು ಜೂನ್-ಆಗಸ್ಟ್‌ನಲ್ಲಿ ಲಾ ನಿನಾ ಅಭಿವೃದ್ಧಿಗೊಳ್ಳುವ ಸಾಧ್ಯತೆ 55 ಪ್ರತಿಶತವಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com