ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝೆಡ್ ಪ್ಲಸ್ ಸೆಕ್ಯುರಿಟಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭದ್ರತೆ ಹೆಚ್ಚಳವಾಗಿದ್ದು, ಕಳೆದ ಮೂರು ದಿನದಿಂದ ಖರ್ಗೆಗೆ Z+ ಸೆಕ್ಯುರಿಟಿ ನೀಡಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝೆಡ್ ಪ್ಲಸ್  ಸೆಕ್ಯುರಿಟಿ
Updated on

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭದ್ರತೆ ಹೆಚ್ಚಳವಾಗಿದ್ದು, ಕಳೆದ ಮೂರು ದಿನದಿಂದ ಖರ್ಗೆಗೆ Z+ ಸೆಕ್ಯುರಿಟಿ ನೀಡಲಾಗಿದೆ.

ಸ್ಟೇಟ್ ಸೆಕ್ಯುರಿಟಿ ಜೊತೆಗೆ ಸಿಆರ್ ಪಿಎಫ್ Z+ ಸಕ್ಯೂರಿಟಿ ಸಹ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ 8 ಜನ ಸಿಆರ್‌ಪಿಎಫ್ (CRPF) ಗನ್ ಮ್ಯಾನ್ ಗಳ ನಿಯೋಜಿಸಲಾಗಿದೆ.

ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಆ ಕಾರಣಕ್ಕೆ ಕಳೆದ ಮೂರು ದಿನದಿಂದ Z+ ಸೆಕ್ಯುರಿಟಿ ನೀಡಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝೆಡ್ ಪ್ಲಸ್  ಸೆಕ್ಯುರಿಟಿ
ಇಳಿ ವಯಸ್ಸಿನಲ್ಲಿ ಏಕಾಏಕಿ ದೇವೇಗೌಡರಿಗೆ ಏನಾಯಿತೋ ತಿಳಿಯದು: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು ನಿವಾಸಕ್ಕೂ z+ ಸೆಕ್ಯುರಿಟಿ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 8 ಜನ ಸಿಆರ್ ಪಿಎಫ್ ಗನ್ ಮ್ಯಾನ್ ಗಳ ನಿಯೋಜನೆ ಮಾಡಲಾಗಿದೆ. ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆಗೆ ಜೀವ ಬೆದರಿಕೆ ಬಂದಿದೆ ಎನ್ನಲಾಗಿದೆ. ಆ ಕಾರಣಕ್ಕೆ Z+ ಸೆಕ್ಯುರಿಟಿ ನೀಡಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com