ಕಲ್ಕಿಧಾಮ ಭಾರತೀಯ ನಂಬಿಕೆಯ ಕೇಂದ್ರವಾಗಲಿದೆ: ಪ್ರಧಾನಿ ಮೋದಿ

ಸಂಭಾಲ್ ಜಿಲ್ಲೆಯಲ್ಲಿ ಕಲ್ಕಿ ಧಾಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷ ಆಚಾರ್ಯ ಪ್ರಮೋದ್ ಕೃಷ್ಣಂ ಉಪಸ್ಥಿತರಿದ್ದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿPTI

ಉತ್ತರ ಪ್ರದೇಶ: ಸಂಭಾಲ್ ಜಿಲ್ಲೆಯಲ್ಲಿ ಕಲ್ಕಿ ಧಾಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು. ಇದರ ಭಾಗವಾಗಿ ಪೂಜಾ ವಿಧಿ ವಿಧಾನಗಳಲ್ಲಿ ಪ್ರಧಾನಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷ ಆಚಾರ್ಯ ಪ್ರಮೋದ್ ಕೃಷ್ಣಂ ಉಪಸ್ಥಿತರಿದ್ದರು.

ಪ್ರಧಾನಿ ಮೋದಿ
ಜೈನ ಮಠದ ʻಆಚಾರ್ಯ ವಿದ್ಯಾಸಾಗರ್ ಮಹಾರಾಜ್ʼ ನಿಧನ: ಪ್ರಧಾನಿ ಮೋದಿ ಸಂತಾಪ

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸಂತರ ಭಕ್ತಿ ಮತ್ತು ಸಾರ್ವಜನಿಕರ ಉತ್ಸಾಹದಿಂದ ಇಂದು ಮತ್ತೊಂದು ಪವಿತ್ರವಾದ ಸ್ಥಳಕ್ಕೆ ಶಿಲಾನ್ಯಾಸ ಮಾಡಲಾಗುತ್ತಿದೆ. ಆಚಾರ್ಯರು ಮತ್ತು ಸಂತರ ಉಪಸ್ಥಿತಿಯಲ್ಲಿ ಭವ್ಯವಾದ ಕಲ್ಕಿ ಧಾಮಕ್ಕೆ ಶಂಕುಸ್ಥಾಪನೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಕಲ್ಕಿಧಾಮವು ಭಾರತೀಯ ನಂಬಿಕೆಯ ಮತ್ತೊಂದು ಮಹಾನ್ ಕೇಂದ್ರವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವಿದೆ ಎಂದರು.

ಈ ಅವಧಿಯಲ್ಲಿ ಕಾಶಿಯ ಪುನರುಜ್ಜೀವನವನ್ನು ನಾವು ನೋಡುತ್ತಿದ್ದೇವೆ. ವಿಶ್ವನಾಥ ಧಾಮ ವಿಜೃಂಭಿಸುತ್ತಿರುವುದನ್ನು ನಾವು ನೋಡಿದ್ದೇವೆ. ಮಹಾಕಾಲದ ಮಹಾಲೋಕದ ಮಹಿಮೆ ನೋಡಿದ್ದೇವೆ. ಸೋಮನಾಥದ ಅಭಿವೃದ್ಧಿ ಮತ್ತು ಕೇದಾರ್ ಕಣಿವೆಯ ಪುನರ್ ನಿರ್ಮಾಣವನ್ನು ನೋಡಿದ್ದೇವೆ. ಅಭಿವೃದ್ಧಿಯ ಮಂತ್ರ ಹಾಗೂ ಪರಂಪರೆಯನ್ನು ಮೈಗೂಡಿಸಿಕೊಳ್ಳುತ್ತಿದ್ದೇವೆ. ಇಂದು ಒಂದೆಡೆ ನಮ್ಮ ಯಾತ್ರಾಸ್ಥಳಗಳು ಅಭಿವೃದ್ಧಿಯಾಗುತ್ತಿದ್ದು, ಮತ್ತೊಂದೆಡೆ ನಗರಗಳಲ್ಲಿ ಹೈಟೆಕ್ ಮೂಲಸೌಕರ್ಯವೂ ಸೃಷ್ಟಿಯಾಗುತ್ತಿದೆ. ಇಂದು ದೇವಸ್ಥಾನಗಳು ನಿರ್ಮಾಣವಾಗುತ್ತಿದ್ದರೆ, ದೇಶಾದ್ಯಂತ ಹೊಸ ವೈದ್ಯಕೀಯ ಕಾಲೇಜುಗಳೂ ನಿರ್ಮಾಣವಾಗುತ್ತಿವೆ. ಇಂದು ನಮ್ಮ ಪ್ರಾಚೀನ ಶಿಲ್ಪಗಳನ್ನು ವಿದೇಶದಿಂದ ತರಿಸಲಾಗುತ್ತಿದೆ ಮತ್ತು ವಿದೇಶಿ ಬಂಡವಾಳವೂ ದಾಖಲೆ ಪ್ರಮಾಣದಲ್ಲಿ ಬರುತ್ತಿದೆ ಎಂದು ಪ್ರಧಾನಿ ತಿಳಿಸಿದರು.

ಶಂಕುಸ್ಥಾಪನೆಗೂ ಮುನ್ನ ಮಾತನಾಡಿದ ಆಚಾರ್ಯ ಪ್ರಮೋದ್ ಕೃಷ್ಣಂ "ಲಕ್ಷಾಂತರ ಭಕ್ತರು ಉಪಸ್ಥಿತರಿರುತ್ತಾರೆ. ಕಲ್ಕಿ ಧಾಮದಿಂದ ಪ್ರಧಾನಿ ಮೋದಿಯವರ ಮಾತನ್ನು ಕೇಳಲು ಜಗತ್ತು ಕಾಯುತ್ತಿದೆ. ಇದು ನಮ್ಮ ದೇಶ ಮತ್ತು 'ಸನಾತನ ಧರ್ಮ'ಕ್ಕೆ ಹೆಮ್ಮೆಯ ಕ್ಷಣ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com