ಭಾರತ- ಇಂಗ್ಲೆಂಡ್ ಟೆಸ್ಟ್ ಅಡ್ಡಿ ಪಡಿಸುವ ಬೆದರಿಕೆ: ಖಲಿಸ್ಥಾನಿ ಪ್ರತ್ಯೇಕತಾವಾದಿ ಪನ್ನುನ್ ವಿರುದ್ಧ FIR

ರಾಂಚಿಯಲ್ಲಿ ಭಾರತ- ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಅಡ್ಡಿ ಪಡಿಸುವ ಬೆದರಿಕೆಯೊಡ್ಡಿದ್ದ ಖಲಿಸ್ಥಾನಿ ಪ್ರತ್ಯೇಕತಾವಾದಿ ಗುರ್ಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಯುಎಪಿಎ, ಐಟಿ ಕಾಯ್ದೆಯ ಹಲವು ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಸಿಖ್‌ ಪ್ರತ್ಯೇಕತಾವಾದಿ ಗುರುಪತ್‌ವಂತ್‌ ಸಿಂಗ್‌ ಪನ್ನುನ್
ಸಿಖ್‌ ಪ್ರತ್ಯೇಕತಾವಾದಿ ಗುರುಪತ್‌ವಂತ್‌ ಸಿಂಗ್‌ ಪನ್ನುನ್TNIE
Updated on

ರಾಂಚಿ: ಫೆ.23 ರಿಂದ 27 ವರೆಗೆ ಜೆಎಸ್ ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂ ನಲ್ಲಿ ಭಾರತ- ಇಂಗ್ಲೆಂಡ್ ಟೆಸ್ಟ್ ಪಂದ್ಯ ನಡೆಯಲಿದೆ. ಎಸ್ಐ ಮದನ್ ಕುಮಾರ್ ಮಹ್ತೋ ಅವರು ದಾಖಲಿಸಿರುವ ಎಫ್ಐಆರ್ ಪ್ರಕಾರ, ಪನ್ನೂನ್ ಭಾರತೀಯರಲ್ಲಿ ಭಯವನ್ನು ಹುಟ್ಟುಹಾಕಲು ಮತ್ತು ಸರ್ಕಾರದ ವಿರುದ್ಧ ಬುಡಕಟ್ಟು ಸಮುದಾಯಗಳಲ್ಲಿ ದ್ವೇಷವನ್ನು ಹುಟ್ಟುಹಾಕಲು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಯತ್ನಗಳನ್ನು ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಪನ್ನುನ್ ಯುಟ್ಯೂಬ್‌ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ನಿಷೇಧಿತ ರಾಜಕೀಯ ಸಂಘಟನೆ ಮತ್ತು ಉಗ್ರಗಾಮಿ ಸಂಘಟನೆಯಾದ ಸಿಪಿಐ (ಮಾವೋವಾದಿ)ಗೆ ರಾಂಚಿಯಲ್ಲಿ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೆ ಅಡ್ಡಿಪಡಿಸಲು ಮತ್ತು ತಡೆಯಲು ಒತ್ತಾಯಿಸಿದ್ದಾನೆ ಎಂದು ಎಫ್‌ಐಆರ್ ನಲ್ಲಿ ಆರೋಪಿಸಲಾಗಿದೆ.

ಸಿಖ್‌ ಪ್ರತ್ಯೇಕತಾವಾದಿ ಗುರುಪತ್‌ವಂತ್‌ ಸಿಂಗ್‌ ಪನ್ನುನ್
ಏರ್ ಇಂಡಿಯಾ ವಿಮಾನ ಸ್ಫೋಟಿಸುವ ಬೆದರಿಕೆ: ಖಲಿಸ್ತಾನಿ ಉಗ್ರ ಪನ್ನು ವಿರುದ್ಧ ಪ್ರಕರಣ ದಾಖಲಿಸಿದ ಎನ್ಐಎ!

ಇದಲ್ಲದೆ, ಟೆಸ್ಟ್ ಪಂದ್ಯ ನಿಗದಿಯಾಗಿರುವ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣವನ್ನು ಬುಡಕಟ್ಟು ಜನಾಂಗದವರ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಪನ್ನುನ್ ತಮ್ಮ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

“ಬುಡಕಟ್ಟು ಜನಾಂಗದವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕ್ರೀಡಾಂಗಣವನ್ನು ನಿರ್ಮಿಸುವುದು ಬುಡಕಟ್ಟು ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಆದ್ದರಿಂದ ಈ ಕ್ರೀಡಾಂಗಣದಲ್ಲಿ ಯಾವುದೇ ರೀತಿಯ ಪಂದ್ಯಗಳನ್ನು ನಡೆಸಬಾರದು ಎಂದು ಪನ್ನುನ್ ತನ್ನ ವೀಡಿಯೊದಲ್ಲಿ ಹೇಳಿದ್ದಾನೆ.

ಸಿಖ್‌ ಪ್ರತ್ಯೇಕತಾವಾದಿ ಗುರುಪತ್‌ವಂತ್‌ ಸಿಂಗ್‌ ಪನ್ನುನ್
ವಿದೇಶಿ ನ್ಯಾಯಾಲಯಗಳನ್ನು ಗೌರವಿಸಬೇಕು: ಪನ್ನುನ್ ಪ್ರಕರಣದಲ್ಲಿ ಭಾರತೀಯನ ಅರ್ಜಿ ವಜಾಗೊಳಿಸಿದ 'ಸುಪ್ರೀಂ'

ಎರಡು ರಾಷ್ಟ್ರಗಳ ನಡುವೆ ಶಾಂತಿ ಕದಡಲು ಪನ್ನುನ್ ಪ್ರಯತ್ನಿಸಿದ್ದಾನೆ ಮತ್ತು ಆತ ವೀಡಿಯೊ ಜನರಲ್ಲಿ ಭೀತಿಯನ್ನು ಉಂಟುಮಾಡಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದ್ದು ಇದು ಬಿಸಿಸಿಐ ಮತ್ತು ಭಾರತಕ್ಕೆ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು ಎಂಬ ಅಂಶವನ್ನೂ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com