ರೇಡಿಯೋ ನಿರೂಪಕ ಅಮೀನ್​ ಸಯಾನಿ ನಿಧನ: 'ಬಿನಾಕಾ ಗೀತ್​ ಮಾಲಾ' ಹಿಂದಿನ ಧ್ವನಿ ಇನ್ನಿಲ್ಲ!

ಖ್ಯಾತ ರೇಡಿಯೊ ಉದ್ಘೋಷಕ ಅಮೀನ್‌ ಸಯಾನಿ ಅವರು ಹೃದಯಾಘಾತದಿಂದ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಅಮೀನ್‌ ಸಯಾನಿ
ಅಮೀನ್‌ ಸಯಾನಿ

ಮುಂಬೈ: ಖ್ಯಾತ ರೇಡಿಯೊ ಉದ್ಘೋಷಕ ಅಮೀನ್‌ ಸಯಾನಿ ಅವರು ಹೃದಯಾಘಾತದಿಂದ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಆಲ್​ ಇಂಡಿಯಾ ರೇಡಿಯೋದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಮೀನ್​ ಸಯಾನಿ ಅವರು ನಿಧನರಾಗಿದ್ದಾರೆ. ಪುತ್ರ ರಾಜಿಲ್​ ಸಯಾನಿ ಅವರು ತಂದೆಯ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಮಂಗಳವಾರ (ಫೆಬ್ರವರಿ 20) ರಾತ್ರಿ ಅಮೀನ್​ ಸಯಾನಿ ಅವರಿಗೆ ಹಾರ್ಟ್​ ಅಟ್ಯಾಕ್​ ಆಯಿತು. ಕೂಡಲೇ ಅವರನ್ನು ಮುಂಬೈನ ಎಚ್​ಎನ್​ ರಿಲಯನ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಯಿತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ‘ಬಿನಾಕಾ ಗೀತ್​ ಮಾಲಾ’ ರೀತಿಯ ಜನಪ್ರಿಯ ಶೋಗಳನ್ನು ನಡೆಸಿಕೊಡುವ ಮೂಲಕ ಅಮೀನ್​ ಸಯಾನಿ ಅವರು ಜನರ ಮೆಚ್ಚುಗೆ ಗಳಿಸಿದ್ದರು.

ಇಂದು (ಫೆಬ್ರವರಿ 21) ಅಮೀನ್​ ಸಯಾನಿ ಅವರ ಅಂತ್ಯಕ್ರಿಯೆ ಮುಂಬೈನಲ್ಲಿ ನಡೆಯಲಿದೆ. ಕೆಲವು ಸಂಬಂಧಿಕರು ಅಂತಿಮ ದರ್ಶನಕ್ಕೆ ಬರುವುದರಿಂದ ಕಾಯಲಾಗುತ್ತಿದೆ. ಜನ ಸಾಮಾನ್ಯರಿಂದ ಸೆಲೆಬ್ರಿಟಿಗಳ ತನಕ ಅನೇಕರು ಅಮೀನ್​ ಸಯಾನಿ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.

1932ರಲ್ಲಿ ಜನಿಸಿದ ಅಮೀನ್​ ಸಯಾನಿ ಅವರು 1951ರಲ್ಲಿ ರೇಡಿಯೋದಲ್ಲಿ ಕೆಲಸ ಮಾಡಲು ಆರಂಭಿಸಿದರು. ಹಲವು ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದರು.

1952ರಿಂದ 42 ವರ್ಷಗಳ ಕಾಲ ‘ಬಿನಾಕಾ ಗೀತ್​ ಮಾಲಾ’ ಕಾರ್ಯಕ್ರಮ ಪ್ರಸಾರವಾಯಿತು. ಮೊದಲು ‘ರೆಡಿಯೋ ಸಿಲೋನ್’​ನಲ್ಲಿ ಹಾಗೂ ನಂತರ ‘ವಿವಿಧ್​ ಭಾರತಿ’ಯಲ್ಲಿ ಈ ಕಾರ್ಯಕ್ರಮ ಬಿತ್ತರವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com