ಪ್ರತಿಭಟನಾಕಾರರ ಮೇಲೆ ಅಶ್ರುವಾಯು, ರಬ್ಬರ್ ಗುಂಡು ಹಾರಿಸಿದ ಹರಿಯಾಣ ಪೊಲೀಸರು; ಘರ್ಷಣೆಯಲ್ಲಿ ರೈತ ಸಾವು

ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖನೌರಿಯಲ್ಲಿ ಹರಿಯಾಣ ಪೊಲೀಸರು ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು, ರಬ್ಬರ್ ಗುಂಡು ಹಾರಿಸಿದ್ದು, ಘರ್ಷಣೆಯಲ್ಲಿ 21 ವರ್ಷದ ರೈತ ಸಾವನ್ನಪ್ಪಿದ್ದಾರೆ.
ಫೈರ್ ಮಾಡಿದ ನಂತರ ಸ್ಫೋಟಗೊಂಡ ಅಶ್ರುವಾಯು
ಫೈರ್ ಮಾಡಿದ ನಂತರ ಸ್ಫೋಟಗೊಂಡ ಅಶ್ರುವಾಯು

ಚಂಡೀಗಢ: ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖನೌರಿಯಲ್ಲಿ ಹರಿಯಾಣ ಪೊಲೀಸರು ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು, ರಬ್ಬರ್ ಗುಂಡು ಹಾರಿಸಿದ್ದು, ಘರ್ಷಣೆಯಲ್ಲಿ 21 ವರ್ಷದ ರೈತ ಸಾವನ್ನಪ್ಪಿದ್ದಾರೆ ಮತ್ತು ಇನ್ನು ಕೆಲವರು ಗಾಯಗೊಂಡಿದ್ದಾರೆ.

ಫೆಬ್ರವರಿ 13 ರಂದು 'ದೆಹಲಿ ಚಲೋ' ಮೆರವಣಿಗೆ ಪ್ರಾರಂಭವಾದ ನಂತರ ನಡೆದ ಘರ್ಷಣೆಯಲ್ಲಿ ಮೊದಲ ಬಾರಿ ಸಾವು ಸಂಭವಿಸಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.

ಶಂಭು ಮತ್ತು ಖನೌರಿ ಗಡಿ ಬಿಂದುಗಳಲ್ಲಿ ಪಂಜಾಬ್‌ನ ರೈತರನ್ನು ಚದುರಿಸಲು ಹರಿಯಾಣ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ ನಂತರ ರೈತರು ಬ್ಯಾರಿಕೇಡ್‌ಗಳ ಕಡೆಗೆ ಹೋಗಲು ಪ್ರಯತ್ನಿಸಿದಾಗ ಮಾರಣಾಂತಿಕ ಘರ್ಷಣೆ ಸಂಭವಿಸಿದೆ. ಯುವ ರೈತನ ಸಾವಿನಿಂದಾಗಿ ದೆಹಲಿ ಚಲೋ ಸ್ಥಗಿತಗೊಳಿಸಲಾಗಿದೆ.

ಫೈರ್ ಮಾಡಿದ ನಂತರ ಸ್ಫೋಟಗೊಂಡ ಅಶ್ರುವಾಯು
ದೆಹಲಿ ಚಲೋ: ರೈತರ ಬಳಿ ಇರುವ ಜೆಸಿಬಿ, ಬೃಹತ್ ಯಂತ್ರೋಪಕರಣ ವಶಕ್ಕೆ ಪಡೆಯಲು ಹರ್ಯಾಣ ಡಿಜಿಪಿ ಸೂಚನೆ

ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಐದನೇ ಸುತ್ತಿನ ಮಾತುಕತೆಗೆ ರೈತರ ಮುಖಂಡರನ್ನು ಆಹ್ವಾನಿಸಿದ್ದಾರೆ. ಅಲ್ಲದೆ ಶಾಂತಿ ಕಾಪಾಡಲು ಮತ್ತು ಚರ್ಚೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ.

ಇಂದು ಘರ್ಷಣೆಯಲ್ಲಿ ಮೃತಪಟ್ಟ ರೈತನನ್ನು ಪಂಜಾಬ್‌ನ ಬಟಿಂಡಾ ಜಿಲ್ಲೆಯ ಬಲೋಕೆ ಗ್ರಾಮದ ನಿವಾಸಿ ಸುಭಕರನ್ ಸಿಂಗ್(21) ಎಂದು ಗುರುತಿಸಲಾಗಿದೆ ಎಂದು ರೈತ ಮುಖಂಡ ಬಲದೇವ್ ಸಿಂಗ್ ಸಿರ್ಸಾ ಅವರು ತಿಳಿಸಿದ್ದಾರೆ.

ಘರ್ಷಣೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಖನೌರಿ ಗಡಿ ಭಾಗದಿಂದ ಆಸ್ಪತ್ರೆಗೆ ಕರೆತರಲಾಗಿತ್ತು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಅವರ(ಸಿಂಗ್) ತಲೆಗೆ ಗಂಭೀರ ಗಾಯವಾಗಿತ್ತು. ಉಳಿದ ಇಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ಪಟಿಯಾಲ ಮೂಲದ ರಾಜೀಂದ್ರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಎಚ್‌ಎಸ್ ರೇಖಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಂಜಾಬ್-ಹರಿಯಾಣ ಗಡಿಯಲ್ಲಿರುವ ಎರಡು ಪ್ರತಿಭಟನಾ ಸ್ಥಳಗಳಲ್ಲಿ ಒಂದಾದ ಖನೌರಿಯ ರೈತರು, ಪ್ರತಿಭಟನಾಕಾರರನ್ನು ಚದುರಿಸಲು ಹರಿಯಾಣ ಪೊಲೀಸರು ಅಶ್ರುವಾಯು ಶೆಲ್‌ಗಳ ಜೊತೆಗೆ ರಬ್ಬರ್ ಬುಲೆಟ್‌ಗಳನ್ನು ಹಾರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com