ಹಿಂಸಾಚಾರದ ಮಾರ್ಗ ಬೇಡ, ಸರ್ಕಾರ ಮಾತುಕತೆಗೆ ಸಿದ್ಧವಿದೆ: ಪ್ರತಿಭಟನಾ ನಿರತ ರೈತರಿಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್- ಹರ್ಯಾಣ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅನುರಾಗ್ ಠಾಕೂರ್ ಹಿಂಸಾಚಾರದ ಮಾರ್ಗ ಹಿಡಿಯಬೇಡಿ ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್
ಕೇಂದ್ರ ಸಚಿವ ಅನುರಾಗ್ ಠಾಕೂರ್PTI

ನವದೆಹಲಿ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್- ಹರ್ಯಾಣ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅನುರಾಗ್ ಠಾಕೂರ್ ಹಿಂಸಾಚಾರದ ಮಾರ್ಗ ಹಿಡಿಯಬೇಡಿ ಎಂದು ಮನವಿ ಮಾಡಿದ್ದಾರೆ. ರೈತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಮಾತುಕತೆಗೆ ಸಿದ್ಧವಿದೆ ಎಂದು ಅನುರಾಗ್ ಠಾಕೂರ್ ಇದೇ ವೇಳೆ ತಿಳಿಸಿದ್ದಾರೆ.

ಇದೇ ವೇಳೆ ರೈತರ ವಿಷಯವಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ವಿರುದ್ಧ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ. ಎಂಎಸ್ ಪಿಗೆ ಕಾನೂನಾತ್ಮಕ ಗ್ಯಾರೆಂಟಿ ಹಾಗೂ ಸಾಲಮನ್ನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ರೈತರಿಗಾಗಿ ಏನನ್ನೂ ಮಾಡಿಲ್ಲ. ಪಂಜಾಬ್ ನಲ್ಲಿ ರೈತರಿಗೆ ಎಂಎಸ್ ಪಿ ಘೋಷಿಸುವುದಕ್ಕೆ ಆಮ್ ಆದ್ಮಿ ಪಕ್ಷ ಈ ಹಿಂದಿನ ಸಿಎಂ ಅಮರಿಂದರ್ ಸಿಂಗ್ ಗೆ ಒತ್ತಾಯಿಸಿತ್ತು. ಆದರೆ ಪಂಜಾಬ್ ನಲ್ಲಿ ಅಧಿಕಾರ ಸಿಕ್ಕಾಗ ಆಮ್ ಆದ್ಮಿ ಪಕ್ಷವೂ ಈ ನಿಟ್ಟಿನಲ್ಲಿ ಏನೂ ಮಾಡಿಲ್ಲ ಎಂದು ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.

ಕೇಂದ್ರ ಸಚಿವ ಅನುರಾಗ್ ಠಾಕೂರ್
ಪ್ರತಿಭಟನಾ ನಿರತ ರೈತ ಸಾವು: ದೆಹಲಿ ಚಲೋ ಮೆರವಣಿಗೆ 2 ದಿನ ಮುಂದೂಡಿಕೆ

"ಹಿಂಸಾಚಾರದ ಹಾದಿಯನ್ನು ಅನುಸರಿಸಬೇಡಿ ಎಂದು ಎಲ್ಲಾ ಪ್ರತಿಭಟನಾಕಾರರಲ್ಲಿ ನನ್ನ ವಿನಂತಿಯಾಗಿದೆ. ಅವರ ಸಂಘಟನೆಗಳು ಚರ್ಚಿಸಲು ಬಯಸುವ ಯಾವುದೇ ವಿಷಯದ ಬಗ್ಗೆ ರೈತರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಯಾವಾಗಲೂ ಸಿದ್ಧವಾಗಿದೆ" ಎಂದು ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.

ರೈತರ ಕಲ್ಯಾಣ ಮತ್ತು ಪ್ರಗತಿಗಾಗಿ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸಚಿವರು ಮಾಧ್ಯಮಗಳೆದುರು ಉಲ್ಲೇಖಿಸಿದರು. ''ಕಬ್ಬಿನ ದರವನ್ನು ಕ್ವಿಂಟಾಲ್‌ಗೆ 315 ರೂ.ಗಳಿಂದ ಹೆಚ್ಚಿಸಿ ಕ್ವಿಂಟಲ್‌ಗೆ 340 ರೂ.ಗೆ ಖರೀದಿಸಿದ್ದೇವೆ, ಇದು ಕಳೆದ ವರ್ಷಕ್ಕಿಂತ 8 ಶೇಕಡಾ ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com