ರೈತನ ಸಾವು ಖಂಡಿಸಿ ಟ್ರ್ಯಾಕ್ಟರ್ ಮೆರವಣಿಗೆ: ಹರಿಯಾಣ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಎಸ್‌ಕೆಎಂ ಆಗ್ರಹ

ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾನಿರತ ರೈತನ ಸಾವಿಗೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರ ವಿರುದ್ಧ "ಕೊಲೆ" ಪ್ರಕರಣ ದಾಖಲಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಗುರುವಾರ ಒತ್ತಾಯಿಸಿದೆ.
ರೈತ ಮುಖಂಡರು
ರೈತ ಮುಖಂಡರು

ನವದೆಹಲಿ: ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾನಿರತ ರೈತನ ಸಾವಿಗೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರ ವಿರುದ್ಧ "ಕೊಲೆ" ಪ್ರಕರಣ ದಾಖಲಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಗುರುವಾರ ಒತ್ತಾಯಿಸಿದೆ ಮತ್ತು ಮುಂದಿನ ವಾರ ಟ್ರ್ಯಾಕ್ಟರ್ ಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ.

ಹರಿಯಾಣ ಪೊಲೀಸರು ಮತ್ತು ಪಂಜಾಬ್ ರೈತರ ನಡುವಿನ ಘರ್ಷಣೆಯಲ್ಲಿ 21 ವರ್ಷದ ರೈತ ಸುಭಕರನ್ ಸಿಂಗ್ ಅವರು ಬುಧವಾರ ಸಾವನ್ನಪ್ಪಿದ್ದು, ದೆಹಲಿ ಚಲೋ ಮೆರವಣಿಗೆಯನ್ನು ಎರಡು ದಿನ ಸ್ಥಗಿತಗೊಳಿಸಲಾಗಿದೆ.

ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧ 2020–21ರಲ್ಲಿ ನಡೆದ ಉಗ್ರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್‌ಕೆಎಂ, ಯುವ ರೈತನ ಸಾವಿಗೆ ಸಂತಾಪ ಸೂಚಿಸಲು ಶುಕ್ರವಾರ ‘ಕರಾಳ ದಿನ’ ಆಚರಿಸುವುದಾಗಿ ಘೋಷಿಸಿದೆ.

ರೈತ ಮುಖಂಡರು
ಪ್ರತಿಭಟನಾಕಾರರ ಮೇಲೆ ಅಶ್ರುವಾಯು, ರಬ್ಬರ್ ಗುಂಡು ಹಾರಿಸಿದ ಹರಿಯಾಣ ಪೊಲೀಸರು; ಘರ್ಷಣೆಯಲ್ಲಿ ರೈತ ಸಾವು

ರೈತನ ಸಾವು ಖಂಡಿಸಿ ಫೆಬ್ರವರಿ 26 ರಂದು ರೈತರು ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್ ಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ ಮತ್ತು ಮಾರ್ಚ್ 14 ರಂದು ದೆಹಲಿಯಲ್ಲಿ ಮಹಾಪಂಚಾಯತ್ ನಡೆಸಲಿದ್ದಾರೆ ಎಂದು ಎಸ್ ಕೆಎಂ ಹೇಳಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಕೆಎಂ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್, ಖಾನೌರಿ ಗಡಿಯಲ್ಲಿ ರೈತನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಬೇಕು ಮತ್ತು ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದಲ್ಲದೆ, ಹರಿಯಾಣ ಪೊಲೀಸರು, ಪಂಜಾಬ್‌ಗೆ ಆಗಮಿಸಿ ಪ್ರತಿಭಟನಾ ನಿರತ ರೈತರ ಮೇಲೆ ಗುಂಡು ಹಾರಿಸಿದ್ದಾರೆ ಮತ್ತು ರೈತರ ಟ್ರ್ಯಾಕ್ಟರ್‌ಗಳಿಗೆ ಹಾನಿ ಮಾಡಿದ್ದಾರೆ ಎಂದು ರಾಜೇವಾಲ್ ಆರೋಪಿಸಿದ್ದಾರೆ.

"ಹರಿಯಾಣ ಪೊಲೀಸರು ಪಂಜಾಬ್‌ ಪ್ರವೇಶಿಸಿ, ನಮ್ಮ ಮೇಲೆ ಗುಂಡು ಹಾರಿಸಿದರು ಮತ್ತು ನಮ್ಮ ಟ್ರ್ಯಾಕ್ಟರ್‌ಗಳನ್ನು ಸಹ ಹಾನಿ ಮಾಡಿದ್ದಾರೆ. ಈ ಸಂಬಂಧ ಹರಿಯಾಣ ಸಿಎಂ ಮತ್ತು ಹರಿಯಾಣ ಗೃಹ ಸಚಿವರ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ರೈತನ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರಾಜೇವಾಲ್ ಒತ್ತಾಯಿಸಿದ್ದಾರೆ. ಅಲ್ಲದೆ ಈ ಸಂಬಂಧ ಮಾರ್ಚ್ 14 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರೈತರ 'ಮಹಾಪಂಚಾಯತ್' ನಡೆಯಲಿದೆ" ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com