ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್ ಮೈಂಡ್ ದೆಹಲಿಯಲ್ಲಿ ಬಂಧನ

ಹಲ್ದ್ವಾನಿ ಹಿಂಸಾಚಾರ ಪ್ರಕರಣದ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್ ನನ್ನು ಶನಿವಾರ ದೆಹಲಿಯಲ್ಲಿ ಬಂಧಿಸಲಾಗಿದೆ.
Uttarakhand: 6 more people held in connection with Haldwani violence
Uttarakhand: 6 more people held in connection with Haldwani violence

ನವದೆಹಲಿ: ಹಲ್ದ್ವಾನಿ ಹಿಂಸಾಚಾರ ಪ್ರಕರಣದ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್ ನನ್ನು ಶನಿವಾರ ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ನೈನಿತಾಲ್ ಎಸ್ ಎಸ್ ಪಿ ಪ್ರಹ್ಲಾದ್ ನಾರಾಯಣ ಅವರು ಮೀನಾ ತಿಳಿಸಿದ್ದಾರೆ.

ಗುಜರಾತ್, ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಲಿಕ್ ಹಾಗೂ ಅವರ ಮಗ ಅಬ್ದುಲ್ ಮೊಯ್ದ್ ಬಂಧನಕ್ಕೆ ಆರು ತಂಡಗಳನ್ನು ರಚಿಸಲಾಗಿತ್ತು ಎಂದು ಎಸ್ಎಸ್ ಪಿ ಹೇಳಿದ್ದಾರೆ.

ಈ ಆರು ತಂಡಗಳಲ್ಲಿ ಒಂದು ತಂಡ ದೆಹಲಿಯಿಂದ ಮಲಿಕ್ ನನ್ನು ಬಂಧಿಸಿದೆ. ಆದರೆ ಅವರ ಮಗ ಇನ್ನೂ ಪರಾರಿಯಾಗಿದ್ದಾನೆ ಎಂದು ಮೀನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

Uttarakhand: 6 more people held in connection with Haldwani violence
ಉತ್ತರಾಖಂಡ: ಹಲ್ದ್ವಾನಿ ಹಿಂಸಾಚಾರ 'ಕೋಮು ಗಲಭೆ ಅಲ್ಲ'

ಮಲಿಕ್, ಹಲ್ದ್ವಾನಿಯ ಬನ್‌ಭೂಲ್‌ಪುರ ಪ್ರದೇಶದಲ್ಲಿ "ಕಾನೂನುಬಾಹಿರವಾಗಿ" ಮದರಸಾವನ್ನು ನಿರ್ಮಿಸಿದ್ದು, ಸ್ಥಳೀಯ ಆಡಳಿತ ಅದನ್ನು ಫೆಬ್ರವರಿ 8 ರಂದು ತೆರವುಗೊಳಿಸಲು ಮುಂದಾದಾಗ ಘರ್ಷಣೆ ನಡೆದಿತ್ತು. ಈ ಹಿಂಸಾಚಾರದಲ್ಲಿ 6 ಮಂದಿ ಸಾವನ್ನಪ್ಪಿದ್ದು, ಪೊಲೀಸರು ಮತ್ತು ಪತ್ರಕರ್ತರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com