ಕಾಶ್ಮೀರದಿಂದ ಪಂಜಾಬ್ ವರಗೆ ಚಾಲಕನಿಲ್ಲದೇ ಚಲಿಸಿದ ರೈಲು, ವೇಗ ನೋಡಿ ಬೆಚ್ಚಿಬಿದ್ದ ಜನ!

ಜಮ್ಮು ಮತ್ತು ಕಾಶ್ಮೀರದ ಕಥುವಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ರೈಲು ಏಕಾಏಕಿ ಚಲಿಸಿದ ಘಟನೆ ನಡೆದಿದ್ದು, ಚಾಲಕನಿಲ್ಲದಿದ್ದರೂ ರೈಲು ಚಲಿಸುತ್ತಿದ್ದ ವೇಗನೋಡಿ ಜನ ಬೆಚ್ಚಿಬಿದ್ದಿದ್ದಾರೆ.
ಲೋಕೋ ಪೈಲಟ್ ಇಲ್ಲದೇ ಚಲಿಸಿದ ರೈಲು
ಲೋಕೋ ಪೈಲಟ್ ಇಲ್ಲದೇ ಚಲಿಸಿದ ರೈಲು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ರೈಲು ಏಕಾಏಕಿ ಚಲಿಸಿದ ಘಟನೆ ನಡೆದಿದ್ದು, ಚಾಲಕನಿಲ್ಲದಿದ್ದರೂ ರೈಲು ಚಲಿಸುತ್ತಿದ್ದ ವೇಗನೋಡಿ ಜನ ಬೆಚ್ಚಿಬಿದ್ದಿದ್ದಾರೆ.

ಹೌದು.. ಲೋಕೊ ಪೈಲಟ್ ಇಲ್ಲದೆಯೇ ಈ ರೈಲು ಗಂಟೆಗೆ 100 ಕಿ.ಮೀ ವೇಗದಲ್ಲಿ ರೈಲು ಸಂಚರಿಸಿತ್ತು. ರೈಲಿನ ವೇಗ ನೋಡಿ ಜನ ಬೆಚ್ಚಿಬಿದ್ದಿದ್ದು, ರೈಲು ಈ ಪರಿ ವೇಗವಾಗಿ ಚಲಿಸಲು ಇಳಿಜಾರು ಇದ್ದುದೇ ಕಾರಣ ಎಂದು ಹೇಳಲಾಗಿದೆ. ಅದೃಷ್ಟಕ್ಕೆ ಅದು ಸರಕು ಸಾಗಣೆ ರೈಲಾಗಿದ್ದ ಹಿನ್ನೆಲೆಯಲ್ಲಿ ಅಷ್ಟೊಂದು ಜನರು ರೈಲಿನಲ್ಲಿರಲಿಲ್ಲ, ರೈಲ್ವೆ ಅಧಿಕಾರಿಗಳ ಪ್ರಯತ್ನದಿಂದಾಗಿ ಪಂಜಾಬ್​ನ ಮುಕೇರಿಯನ್ ರೈಲು ನಿಲ್ದಾಣ(Railway Station)ದಲ್ಲಿ ರೈಲನ್ನು ನಿಲ್ಲಿಸಲಾಯಿತು.

ಲೋಕೋ ಪೈಲಟ್ ಇಲ್ಲದೇ ಚಲಿಸಿದ ರೈಲು
ಚಾಲಕರಿಂದಲೇ ಚಾಲಕ ರಹಿತ ರೈಲು ಓಡಾಟ, ಯಾವ ಮಾರ್ಗದಲ್ಲಿ ಗೊತ್ತಾ?: BMRCL

ರೈಲಿನ ಪ್ರಯಾಣಿಕರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ರೈಲ್ವೆ ಇನ್ನೂ ಬಿಡುಗಡೆ ಮಾಡಿಲ್ಲ. ಕಥುವಾ ನಿಲ್ದಾಣದಲ್ಲಿ ನಿಲುಗಡೆಯಲ್ಲಿದ್ದ ಸರಕು ರೈಲು ಹಠಾತ್ತನೆ ಪಠಾಣ್‌ಕೋಟ್ ಕಡೆಗೆ ಇಳಿಜಾರಾದ ಕಾರಣ ಚಾಲಕ ಇಲ್ಲದೆ ಓಡಲು ಪ್ರಾರಂಭಿಸಿತು. ಮುಕೇರಿಯನ್ ಪಂಜಾಬ್‌ನ ಉಚ್ಚಿ ಬಸ್ಸಿ ಬಳಿ ರೈಲನ್ನು ನಿಲ್ಲಿಸಲಾಗಿದೆ. ಈ ವಿಷಯದ ಬಗ್ಗೆ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಲೋಕೊ ಪೈಲಟ್​ ಇಲ್ಲದೆ ಓಡುತ್ತಿರುವ ರೈಲಿನ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಹೇಗಾಯ್ತು ಘಟನೆ?

ಭಾನುವಾರ ಬೆಳಗ್ಗೆ 7.10ರ ಸುಮಾರಿಗೆ ಈ ಘಟನೆ ನಡೆದಿದ್ದು, ಲೋಕೊ ಪೈಲಟ್​ ಜಮ್ಮುವಿನ ಕಥುವಾದಲ್ಲಿ ಗೂಡ್ಸ್​ ರೈಲು ಸಂಖ್ಯೆ 14806 ಆರ್ ಅನ್ನು ನಿಲ್ಲಿಸಿದ್ದರು. ಬಳಿಕ ಚಾಲಕ ಹ್ಯಾಂಡ್‌ಬ್ರೇಕ್‌ ಹಾಕದೆ ರೈಲಿನಿಂದ ಇಳಿದು ಟೀ ಕುಡಿಯಲು ತೆರಳಿದ್ದರು. ಏತನ್ಮಧ್ಯೆ, ರೈಲು ಇದ್ದಕ್ಕಿದ್ದಂತೆ ಚಲಿಸಲು ಪ್ರಾರಂಭಿಸಿತು. ಇಳಿಜಾರಾದ್ದರಿಂದ ಕ್ರಮೇಣ ರೈಲು ವೇಗ ಪಡೆದುಕೊಂಡಿದ್ದು, ಅಂತಿಮವಾಗಿ ವೇಗವನ್ನು ಪಡೆದ ನಂತರ ಓಡಲು ಪ್ರಾರಂಭಿಸಿತು. ಆದರೆ, ರೈಲು ಜಾಲದಲ್ಲಿ ಇಳಿಜಾರಿನ ಕಾರಣ ರೈಲು ಚಲಿಸಲು ಪ್ರಾರಂಭಿಸಿತ್ತು ಎಂದು ಹೇಳಿದ್ದಾರೆ.

ಲೊಕೊ ಪೈಲಟ್ ಅಥವಾ ಇತರ ಯಾವುದೇ ರೈಲ್ವೇ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಆದಾಗ್ಯೂ, ಘಟನೆಗೆ ನಿಖರವಾದ ಕಾರಣವನ್ನು ನಿರ್ಧರಿಸಲು ಈ ವಿಷಯದಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com