ಮಧ್ಯಪ್ರದೇಶ: ಆರ್‌ಎಸ್‌ಎಸ್ ಕಚೇರಿಯಲ್ಲಿ ಸ್ಫೋಟಕ ಸಾಧನ ಪತ್ತೆ, ನಿಷ್ಕ್ರಿಯ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭೋಪಾಲ್: ಮಧ್ಯ ಪ್ರದೇಶದ ಭಿಂಡ್ ಜಿಲ್ಲೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಚೇರಿಯಲ್ಲಿ ಸ್ಫೋಟಕ ಸಾಧನ ಪತ್ತೆಯಾಗಿರುವುದಾಗಿ ಮಧ್ಯಪ್ರದೇಶ ಪೊಲೀಸರು ಭಾನುವಾರ ಹೇಳಿದ್ದಾರೆ. ನಂತರ ಅದನ್ನು ನಿಷ್ಕ್ರಿಯಗೊಳಿಸಲಾಗಿದೆ. ಜಿಲ್ಲೆಯ ಹನುಮಾನ್ ಬಜಾರಿಯಾ ಎಂಬ ವಸತಿ ಕಾಲೋನಿಯಲ್ಲಿರುವ ಆರ್ ಎಸ್ ಎಸ್ ಕಚೇರಿಯಲ್ಲಿ ಶನಿವಾರ ರಾತ್ರಿ ಅಟೆಂಡೆಂಟ್ ರಾಮ್ ಮೋಹನ್ ಸ್ಫೋಟಕ ಸಾಧನವನ್ನು ಗಮನಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಅಲ್ ಖೈದಾ ಜೊತೆ ಮುಸ್ಕಾನ್ ಸಂಪರ್ಕ: ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್

ಸ್ಥಳೀಯ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಲಾಗಿದ್ದು, ಭಿಂಡ್ ಎಸ್ಪಿ ಆಶಿತ್ ಯಾದವ್ ಮತ್ತು ಇತರ ಪೊಲೀಸ್ ಸಿಬ್ಬಂದಿ ಮಧ್ಯರಾತ್ರಿಯ ಸುಮಾರಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಪಕ್ಕದ ಜಿಲ್ಲೆ ಮೊರೆನಾದಿಂದ ಬಾಂಬ್ ನಿಷ್ಕ್ರಿಯ ದಳವೂ ಸ್ಥಳಕ್ಕೆ ಆಗಮಿಸಿದ್ದು, ಸಾಧನವನ್ನು ನಿಷ್ಕಿಯ ಗೊಳಿಸಲಾಗಿದೆ. ಸಂಘದ ಕಚೇರಿ ಆವರಣದಲ್ಲಿ ಧ್ವಜ (ಧ್ವಜ) ಅಳವಡಿಸಿರುವ ಸ್ಥಳದಲ್ಲಿ ಪಿನ್ ಬಾಂಬ್ ಪತ್ತೆಯಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

'ಪ್ರಚಾರಕರು' ಮತ್ತು 'ವಿಸ್ತಾರಕರು' ಸಭೆಯಲ್ಲಿ ಪಾಲ್ಗೊಳ್ಳಲು ಇಂದೋರ್‌ಗೆ ತೆರಳಿದ್ದರಿಂದ ಆರ್‌ಎಸ್‌ಎಸ್ ಕಚೇರಿ ಖಾಲಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com