ಹರಿಯಾಣ: ಅಪರಿಚಿತ ದುಷ್ಕರ್ಮಿಗಳಿಂದ ಐಎನ್‌ಎಲ್‌ಡಿ ಅಧ್ಯಕ್ಷನ ಗುಂಡಿಕ್ಕಿ ಹತ್ಯೆ

ಭಾರತೀಯ ರಾಷ್ಟ್ರೀಯ ಲೋಕದಳದ ಹರಿಯಾಣ ಘಟಕದ ಅಧ್ಯಕ್ಷ ನಫ್ ಸಿಂಗ್ ರಾಥೀ ಅವರನ್ನು ಜಜ್ಜರ್ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಭಾನುವಾರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಹತ್ಯೆಯಾದ ನಪ್ ಸಿಂಗ್ ರಾಥೀ
ಹತ್ಯೆಯಾದ ನಪ್ ಸಿಂಗ್ ರಾಥೀ
Updated on

ಹರಿಯಾಣ: ಭಾರತೀಯ ರಾಷ್ಟ್ರೀಯ ಲೋಕದಳದ ಹರಿಯಾಣ ಘಟಕದ ಅಧ್ಯಕ್ಷ ನಫ್ ಸಿಂಗ್ ರಾಥೀ ಅವರನ್ನು ಜಜ್ಜರ್ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಭಾನುವಾರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಮಾಜಿ ಶಾಸಕ ರಾಥೀ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಜಜ್ಜರ್‌ನ ಬಹದ್ದೂರ್‌ಗಢ ಪಟ್ಟಣದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ. ಈ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಐಎನ್‌ಎಲ್‌ಡಿ ನಾಯಕ ಅಭಯ್ ಚೌತಾಲಾ, ಝಜ್ಜರ್ ಜಿಲ್ಲೆಯಲ್ಲಿ ರಾಥೀ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಹತ್ಯೆಯಾದ ನಪ್ ಸಿಂಗ್ ರಾಥೀ
ಅಮೆರಿಕಾದಲ್ಲಿ ಗುಂಡಿಕ್ಕಿ ಭಾರತೀಯ ಮೂಲದ ವೃದ್ಧನ ಹತ್ಯೆ

ರಾಥೀ ಅವರಿಗೆ ಜೀವ ಬೆದರಿಕೆ ಇದ್ದರೂ ಭದ್ರತೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com