ರಾಹುಲ್ ಗಾಂಧಿ, ಶಶಿ ತರೂರ್ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಸಿಪಿಐ

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾಲ್ಕು ನಿರ್ಣಾಯಕ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಸೋಮವಾರ ಪ್ರಕಟಿಸಿದೆ.
"Big win for student power...": Rahul Gandhi after UP govt cancels police constable exams
"Big win for student power...": Rahul Gandhi after UP govt cancels police constable exams
Updated on

ತಿರುವನಂತಪುರಂ: ಕೇರಳದ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್‌ನ ಎರಡನೇ ಅತಿದೊಡ್ಡ ಮಿತ್ರ ಪಕ್ಷ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾಲ್ಕು ನಿರ್ಣಾಯಕ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಸೋಮವಾರ ಪ್ರಕಟಿಸಿದೆ.

ಪ್ರಮುಖವಾಗಿ, ಪ್ರಸ್ತುತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ವಯನಾಡ್ ಕ್ಷೇತ್ರದಿಂದ ಸಿಪಿಐ ಹಿರಿಯ ನಾಯಕ ಅನ್ನಿ ರಾಜಾ ಅವರು ಸ್ಪರ್ಧಿಸಲಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಪ್ರತಿನಿಧಿಸುವ ಮತ್ತೊಂದು ಪ್ರಮುಖ ಕ್ಷೇತ್ರ ತಿರುವನಂತಪುರಂನಿಂದ ಪಕ್ಷದ ಹಿರಿಯ ಮತ್ತು ಮಾಜಿ ಸಂಸದ ಪನ್ನಿಯನ್ ರವೀಂದ್ರನ್ ಅವರು ಕಣಕ್ಕಿಳಿಯಲಿದ್ದಾರೆ ಎಂದು ಸಿಪಿಐ ಹೇಳಿದೆ.

"Big win for student power...": Rahul Gandhi after UP govt cancels police constable exams
ಕೇರಳ: ದೇವಸ್ಥಾನದ ಆವರಣದಲ್ಲಿ ಸಿ‍ಪಿಐ(ಎಂ) ನಾಯಕನ ಕೊಚ್ಚಿ ಕೊಲೆ

ಸಿಬಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನ ಘೋಷಿಸಿದ್ದಾರೆ.

ಮಾಜಿ ಕೃಷಿ ಸಚಿವ ವಿ ಎಸ್ ಸುನೀಲ್ ಕುಮಾರ್ ಮತ್ತು ಪಕ್ಷದ ಯುವ ಘಟಕ ಎಐವೈಎಫ್ ನಾಯಕ ಸಿ ಎ ಅರುಣ್ ಕುಮಾರ್ ಕ್ರಮವಾಗಿ ತ್ರಿಶೂರ್ ಮತ್ತು ಮಾವೇಲಿಕ್ಕರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com