ಆಹಾರಕ್ಕಿಂತ ತಂಬಾಕು ಪದಾರ್ಥಗಳ ಮೇಲೆ ಹೆಚ್ಚು ಖರ್ಚು ಮಾಡುವಲ್ಲಿ ಭಾರತೀಯರು ಮುಂದು: ಸಮೀಕ್ಷೆಯಿಂದ ಬಹಿರಂಗ!

ಭಾರತೀಯ ಕುಟುಂಬಗಳ ಮಾಸಿಕ ಖರ್ಚು ಹಾಗೂ ಬಳಕೆಯ ಮಾದರಿ ಬದಲಾಗುತ್ತಿದೆ ಎಂದು ರಾಷ್ಟ್ರೀಯ ಅಂಕಿ ಅಂಶಗಳ ಸಂಸ್ಥೆಯ ಇತ್ತೀಚಿನ ವರದಿ ಬಹಿರಂಗ ಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ಕುಟುಂಬಗಳ ಮಾಸಿಕ ಖರ್ಚು ಹಾಗೂ ಬಳಕೆಯ ಮಾದರಿ ಬದಲಾಗುತ್ತಿದೆ ಎಂದು ರಾಷ್ಟ್ರೀಯ ಅಂಕಿ ಅಂಶಗಳ ಸಂಸ್ಥೆಯ ಇತ್ತೀಚಿನ ವರದಿ ಬಹಿರಂಗ ಪಡಿಸಿದೆ.

ಆಹಾರ ಪದಾರ್ಥಗಳು ಮತ್ತು ಶಿಕ್ಷಣದ ಮೇಲಿನ ಖರ್ಚು ಕಡಿಮೆಯಾಗಿದ್ದರೂ, ವೈದ್ಯಕೀಯ ವೆಚ್ಚಗಳು, ಸಾಗಣೆ, ಬಾಡಿಗೆ ಮತ್ತು ಅನಾರೋಗ್ಯಕರ ವಸ್ತುಗಳಾದ ಪಾನ್, ತಂಬಾಕು, ಅಮಲು ಪದಾರ್ಥಗಳ ವೆಚ್ಚವು ಏರಿಕೆಯಾಗಿದೆ.ಗ್ರಾಮೀಣ ಮತ್ತು ನಗರಗಳ ಎರಡೂ ಕುಟುಂಬಗಳ ಖರ್ಚು ಮತ್ತು ಬಳಕೆಯ ಮಾದರಿ ಬಹುತೇಕ ಹೋಲುತ್ತವೆ.

ಗ್ರಾಮೀಣ ಕುಟುಂಬಗಳಿಗೆ ಹೋಲಿಸಿದರೆ ನಗರ ಪ್ರದೇಶದ ಕುಟುಂಬಗಳಲ್ಲಿ ಮೊಟ್ಟೆ, ಮೀನು ಮತ್ತು ಮಾಂಸದ ಮೇಲೆ ಖರ್ಚು ಮಾಡುವ ಪ್ರವೃತ್ತಿ ಕಡಿಮೆಯಾಗಿದೆ, ಗ್ರಾಮೀಣ ಪ್ರದೇಶಗಳಲ್ಲಿ ಸ್ವಲ್ಪ ಹೆಚ್ಚಾಗಿದೆ.ಆಗಸ್ಟ್ 2022 ರಿಂದ ಜುಲೈ 2023 ರ ಅವಧಿಯಲ್ಲಿ ನಡೆಸಲಾದ ಗೃಹ ಬಳಕೆ ವೆಚ್ಚ ಸಮೀಕ್ಷೆಯ ವಿವರವಾದ ವರದಿಯನ್ನು ಸರ್ಕಾರವು ಇನ್ನೂ ಬಿಡುಗಡೆ ಮಾಡಿಲ್ಲ. ಸುಮಾರು ಒಂದು ದಶಕದ ನಂತರ ಅಂತಹ ಸಮೀಕ್ಷೆ ಮಾಡಲಾಗಿದ್ದು ವರದಿ ಶೀಘ್ರವೇ ಬಿಡುಗಡೆಯಾಗಲಿದೆ.

ಸಾಂದರ್ಭಿಕ ಚಿತ್ರ
ನಮ್ಮ ಆಹಾರ, ಗಾಳಿ, ನೀರು, ಮನಸ್ಸಿನ ಮಾಲಿನ್ಯದಿಂದ ಕ್ಯಾನ್ಸರ್ ಗೆ ಕಾರಣವಾಗುವ ವರ್ತುಲ ಸೃಷ್ಟಿ!

ಡೇಟಾ ಗುಣಮಟ್ಟದ ಕೊರತೆಯನ್ನು ಉಲ್ಲೇಖಿಸಿ ಸರ್ಕಾರವು ಈ ಹಿಂದೆ 2017-18 ರ NSO ಯ ವರದಿಯನ್ನು ಬಿಡುಗಡೆ ಮಾಡಿರಲಿಲ್ಲ ಎಂದು ಹೇಳಲಾಗಿದೆ, ಆದರೆ ಪ್ರತಿಕೂಲ ಸಂಶೋಧನೆಗಳಿಂದಾಗಿ ಅದನ್ನು ಬಹಿರಂಗ ಪಡಿಸಿಲ್ಲ ಎಂದು ವಿಮರ್ಶಕರು ತಿಳಿಸಿದ್ದಾರೆ.

ಹಿಂದಿನ ವರದಿಯು ಕಳೆದ ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಮನೆಯ ಖರ್ಚು ಕಡಿಮೆಯಾಗಿದೆ ಎಂದು ತೋರಿಸಿದೆ. ಆದರೆ ಇತ್ತೀಚಿನ NSO ವರದಿಯಲ್ಲಿ ಕಳೆದ ಒಂದು ದಶಕದಲ್ಲಿ ಭಾರತದ ಗ್ರಾಮೀಣ ಮತ್ತು ನಗರಗಳೆರಡೂ ಆಹಾರ ಸೇವನೆಯ ಮೇಲಿನ ವೆಚ್ಚವನ್ನು ಕಡಿಮೆ ಮಾಡಿದೆ . ಹಾಗೂ ಆಹಾರೇತರ ವಸ್ತುಗಳ ಮೇಲಿನ ವೆಚ್ಚವನ್ನು ಹೆಚ್ಚಿಸಿದೆ ಎಂದು ತೋರಿಸುತ್ತದೆ. 2011 ರಲ್ಲಿ, ನಗರ ಭಾರತವು ತನ್ನ ಮಾಸಿಕ ವೆಚ್ಚದ ಶೇ. 42.6% ರಷ್ಟನ್ನು ಆಹಾರಕ್ಕಾಗಿ ಖರ್ಚು ಮಾಡುತ್ತಿತ್ತು, ಈಗ ಅದು ಶೇ. 39% ಕ್ಕೆ ಇಳಿದಿದೆ. ಗ್ರಾಮೀಣ ಭಾರತದಲ್ಲಿ, ಆಹಾರದ ಮೇಲಿನ ವೆಚ್ಚವು ಶೇ. 52.8 ರಿಂದ ಶೇ. 46.38ಕ್ಕೆ ಇಳಿಸಲಾಗಿದೆ.

ಬೇಳೆಕಾಳುಗಳು, ತರಕಾರಿಗಳು, ಖಾದ್ಯ ತೈಲಗಳು, ಉಪ್ಪು ಮತ್ತು ಸಕ್ಕರೆಯೊಂದಿಗೆ ಧಾನ್ಯಗಳ ಬಳಕೆ ತೀವ್ರವಾಗಿ ಕಡಿಮೆಯಾಗಿದೆ. ಶಿಕ್ಷಣ, ಇಂಧನ ಮತ್ತು ಬೆಳಕು, ಬಟ್ಟೆ ಮತ್ತು ಪಾದರಕ್ಷೆಗಳ ಮೇಲಿನ ವೆಚ್ಚದಲ್ಲಿ ಇದೇ ರೀತಿಯ ಕುಸಿತವಿದೆ. ಸರ್ಕಾರದ ಕಲ್ಯಾಣ ಯೋಜನೆಗಳಿಂದ ಸಿರಿಧಾನ್ಯಗಳ ಮೇಲಿನ ಖರ್ಚು ಕಡಿಮೆಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ಸಾಂದರ್ಭಿಕ ಚಿತ್ರ
ಮಕ್ಕಳ ಬೆಳವಣಿಗೆಗೆ ಆಹಾರ ಕ್ರಮ ಅತಿಮುಖ್ಯ: ಜೀವನಶೈಲಿ ಹೇಗಿರಬೇಕು? ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರ, ಹಾಗೆಯೇ ಅನೇಕ ರಾಜ್ಯ ಸರ್ಕಾರಗಳು, PMGKY ಯಂತಹ ವಿವಿಧ ಯೋಜನೆಗಳ ಅಡಿಯಲ್ಲಿ ಉಚಿತ ಧಾನ್ಯಗಳನ್ನು ಒದಗಿಸುತ್ತದೆ, ಇದು ಗ್ರಾಹಕರನ್ನು ಕಡಿಮೆ ಖರ್ಚು ಮಾಡಲು ಪ್ರೇರೇಪಿಸುತ್ತದೆ" ಎಂದು ಭಾರತದ ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪಿಸಿ ಮೋಹನನ್ ಹೇಳಿದರು.

ಹಣದುಬ್ಬರವು ಬಳಕೆಯ ಮಾದರಿಗಳ ಮೇಲೂ ಪರಿಣಾಮ ಬೀರಿದೆ. "ಕಳೆದ ಕೆಲವು ವರ್ಷಗಳಲ್ಲಿ ಬೇಳೆಕಾಳುಗಳು, ತರಕಾರಿಗಳು ಮತ್ತು ಖಾದ್ಯ ತೈಲಗಳ ಹೆಚ್ಚಿನ ಬೆಲೆಗಳು ದೇಶಾದ್ಯಂತ ಗ್ರಾಹಕರ ಮೇಲೆ ಪರಿಣಾಮ ಬೀರಿದೆ" ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬೆಲೆ ನಿಯಂತ್ರಣಕ್ಕೆ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಉಜ್ವಲಾ ಯೋಜನೆ ಮತ್ತು ಅಗ್ಗದ ಇಂಧನ ಮೂಲಗಳನ್ನು ಒದಗಿಸುವ ಸೌರ ಯೋಜನೆಗಳ ಕಾರಣದಿಂದಾಗಿ ಇಂಧನ ಮತ್ತು ಬೆಳಕಿನ ಮೇಲೆ ಕಡಿಮೆ ಖರ್ಚು ಮಾಡಲಾಗುತ್ತಿದೆ ಎಂದು ಮೋಹನನ್ ಹೇಳಿದರು.

ಆದಾಗ್ಯೂ, ಶಿಕ್ಷಣ, ಬಟ್ಟೆ ಮತ್ತು ಪಾದರಕ್ಷೆಗಳಂತಹ ಆಹಾರೇತರ ವಸ್ತುಗಳ ಮೇಲೆ ಜನರು ಏಕೆ ಕಡಿಮೆ ಖರ್ಚು ಮಾಡಲು ಪ್ರಾರಂಭಿಸಿದ್ದಾರೆ ಎಂಬುದರ ಕುರಿತು ಉದ್ಯಮ ತಜ್ಞರಿಗೆ ಸುಳಿವು ಸಿಕ್ಕಿಲ್ಲ.

ಪಾನ್, ತಂಬಾಕು ಮತ್ತು ಇತರ ಅಮಲು ಪದಾರ್ಥಗಳಂತಹ ಅನಾರೋಗ್ಯಕರ ವಸ್ತುಗಳ ಸೇವನೆ ಹೆಚ್ಚುತ್ತಿರುವುದನ್ನು ವರದಿಯು ಸೂಚಿಸುತ್ತದೆ. ವೈದ್ಯಕೀಯ ವೆಚ್ಚಗಳು ಮತ್ತು ಬಾಡಿಗೆ ಮತ್ತು ಸಾಗಣೆಯ ವೆಚ್ಚವೂ ಹೆಚ್ಚಾಗಿದೆ. ಹಾಲು ಮತ್ತು ಹಾಲು-ಸಂಬಂಧಿತ ಉತ್ಪನ್ನಗಳ ಮೇಲಿನ ಖರ್ಚು ಕನಿಷ್ಠ ಏರಿಕೆ ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com