ಮಕ್ಕಳ ಬೆಳವಣಿಗೆಗೆ ಆಹಾರ ಕ್ರಮ ಅತಿಮುಖ್ಯ: ಜೀವನಶೈಲಿ ಹೇಗಿರಬೇಕು? ಇಲ್ಲಿದೆ ಮಾಹಿತಿ

ಮಕ್ಕಳ ಬೆಳವಣಿಗೆಯಲ್ಲಿ 13-18 ವರ್ಷ ಅತ್ಯಂತ ಮುಖ್ಯವಾದ ಘಟ್ಟವಾಗಿದೆ. ಇದು ಹದಿಹರೆಯದ ವಯಸ್ಸಾಗಿದ್ದು, ಈ ಘಟ್ಟದಲ್ಲಿ ದೈಹಿಕ ಬದಲಾವಣೆ, ಹಾರ್ಮೋನುಗಳ ಏರಿಳಿತಗಳು ಕಂಡು ಬರುತ್ತವೆ. ಈ ಘಟ್ಟದಲ್ಲಿ ಮಕ್ಕಳ ದೇಹ ಆರೋಗ್ಯವಾಗಿರುವುದು ಬಹಳ ಮುಖ್ಯ. ಏಕೆಂದರೆ ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ದೇಹದ ಬೆಳವಣಿಗೆ ಕೂಡ ಉತ್ತಮವಾಗಿರುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಕ್ಕಳ ಬೆಳವಣಿಗೆಯಲ್ಲಿ 13-18 ವರ್ಷ ಅತ್ಯಂತ ಮುಖ್ಯವಾದ ಘಟ್ಟವಾಗಿದೆ. ಇದು ಹದಿಹರೆಯದ ವಯಸ್ಸಾಗಿದ್ದು, ಈ ಘಟ್ಟದಲ್ಲಿ ದೈಹಿಕ ಬದಲಾವಣೆ, ಹಾರ್ಮೋನುಗಳ ಏರಿಳಿತಗಳು ಕಂಡು ಬರುತ್ತವೆ. ಈ ಘಟ್ಟದಲ್ಲಿ ಮಕ್ಕಳ ದೇಹ ಆರೋಗ್ಯವಾಗಿರುವುದು ಬಹಳ ಮುಖ್ಯ. ಏಕೆಂದರೆ ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ದೇಹದ ಬೆಳವಣಿಗೆ ಕೂಡ ಉತ್ತಮವಾಗಿರುತ್ತದೆ.

ಅರೋಗ್ಯಕರ ದೇಹಕ್ಕಾಗಿ ಆರೋಗ್ಯಕರ ಆಹಾರ ಸೇವನೆ, ಉತ್ತಮ ರೀತಿಯ ಜೀವನಶೈಲಿ ಪಾಲಿಸುವುದು ಅತ್ಯಗತ್ಯವಾಗಿದೆ. ಸಮತೋಲನ ಆಹಾರ, ವ್ಯಾಯಾಮ ದೇಹದ ಆಂತರಿಕ ಅಗತ್ಯವನ್ನು ಪೂರೈಸುತ್ತದೆ. ದೇಹದ ಹೊರ ಭಾಗಗಳಿಗೆ ಪ್ರಯೋಜನ ನೀಡುತ್ತದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಆಹಾರ ಕ್ರಮ ಹಾಗೂ ಜೀವನ ಶೈಲಿ ತದ್ವಿರುದ್ಧವಾಗಿ ಹೋಗಿದೆ. ಆಹಾರ ಕ್ರಮ ಹಾಗೂ ದೈಹಿಕ ಚಟುವಟಿಕೆಗಳು ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಸ್ಥೂಲಕಾಯ ಸಮಸ್ಯೆ ಕಂಡು ಬರುತ್ತಿದೆ. ಅಲ್ಲದೆ, ಹದಿಹರೆಯದ ವಯಸ್ಸಿನಲ್ಲೇ ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ. ಹೀಗಾಗಿ ಮಕ್ಕಳು ಚಿಕ್ಕವರಿದ್ದಾಗಲೇ ಆರೋಗ್ಯಕರ ಜೀವನಶೈಲಿ ಅನುಸರಿಸುವಂತೆ ಮಾಡುವುದು ಅತ್ಯಗತ್ಯವಾಗಿರುತ್ತದೆ.

ಆರೋಗ್ಯಕರ ಜೀವನಶೈಲಿ ನಡೆಸುವುದು ಹೇಗೆ?

ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು...

ಹಣ್ಣು ಮತ್ತು ತರಕಾರಿಗಳು: ತರಕಾರಿ ಎಂದರೆ ಮಕ್ಕಳು ಸ್ವಲ್ಪ ದೂರ ಹೋಗುವುಂಟು. ಆದರೆ ಹಣ್ಣು ಮತ್ತು ತರಕಾರಿಗಳು ಮಕ್ಕಳ ಬೆಳವಣಿಗೆಗೆ ಪೂರಕ. ಹಣ್ಣು ಮತ್ತು ತರಕಾರಿಗಳಲ್ಲಿ ಮಕ್ಕಳಿಗೆ ಶಕ್ತಿ, ವಿಟಮಿನ್, ಆಂಟಿಆಕ್ಸಿಡೆಂಟ್, ನಾರಿನಾಂಶ ಮತ್ತು ನೀರಿನಾಂಶವು ಲಭ್ಯವಾಗುವುದು. ವಯಸ್ಸಾದ ವೇಳೆ ಕಾಡುವಂತಹ ಹೃದಯದ ಕಾಯಿಲೆ, ಪಾರ್ಶ್ವವಾಯು ಮತ್ತು ಕೆಲವು ರೀತಿಯ ಕ್ಯಾನ್ಸರ್ ನ್ನು ಇದು ತಡೆಯುವುದು. ಮಕ್ಕಳಿಗೆ ನೀವು ವಿವಿಧ ರೀತಿಯ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಲು ಪ್ರೋತ್ಸಾಹಿಸಿ. ನೀವು ತರಕಾರಿಗಳಿಂದ ವಿವಿಧ ಖಾದ್ಯಗಳನ್ನು ಮಾಡಿಕೊಳ್ಳಬಹುದು. ಬಣ್ಣ ಬಣ್ಣದ ತರಕಾರಿ ಹಾಗೂ ಹಣ್ಣುಗಳನ್ನು ಬಳಸಿ ಸಲಾಡ್ ತಯಾರಿಸಬಹುದು, ಇದು ತುಂಬಾ ರುಚಿಕರ. ತರಕಾರಿ ಹಾಗೂ ಹಣ್ಣುಗಳನ್ನು ಸರಿಯಾಗಿ ತೊಳೆಯಿರಿ. ಅದರಲ್ಲಿ ಇರುವಂತಹ ಧೂಳು ಮತ್ತು ರಾಸಾಯನಿಕವು ಇದರಿಂದ ದೂರವಾಗುವುದು. ತರಕಾರಿ ಸಿಪ್ಪೆ ಹಾಗೆ ಬಿಡಿ. ಯಾಕೆಂದರೆ ಇದರಲ್ಲಿ ಕೂಡ ಕೆಲವು ಪೋಷಕಾಂಶಗಳು ಇವೆ.

ಧಾನ್ಯಗಳ ಆಹಾರ

ಇಡೀ ಧಾನ್ಯಗಳ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೆ ಧಾನ್ಯಗಳಿಂದ ಮಾಡಿರುವಂತಹ ಬ್ರೆಡ್, ಪಾಸ್ತಾ, ಸೀರಲ್, ಅಕ್ಕಿ, ಜೋಳ, ಕ್ವಿನೋವಾ, ಓಟ್ಸ್ ಮತ್ತು ಬಾರ್ಲಿ ಒಳ್ಳೆಯದು. ಈ ಆಹಾರಗಳು ಮಕ್ಕಳ ಬೆಳವಣಿಗೆಯಲ್ಲಿ ನೆರವಾಗುವುದು ಮತ್ತು ಶಕ್ತಿ ನೀಡುವುದು. ಧಾನ್ಯಗಳಿಂದ ತಯಾರಿಸಿದ ಆಹಾರದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಇದೆ. ಅದೇ ಇಡೀ ಧಾನ್ಯಗಳಿಂದ ಮಾಡಿರುವಂತಹ ಆಹಾರ ಗಳಾಗಿರುವಂತ ಪಾಸ್ತಾ ಮತ್ತು ಬ್ರೆಡ್ ಮಕ್ಕಳಿಗೆ ದೀರ್ಘಕಾಲ ತನಕ ಶಕ್ತಿ ನೀಡುವುದು ಮತ್ತು ದೀರ್ಘಾವಧಿಗೆ ಹೊಟ್ಟೆ ತುಂಬಿರುವಂತೆ ಮಾಡುವುದು.

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು ಮಕ್ಕಳ ಬೆಳವಣಿಗೆಗೆ ತುಂಬಾ ಒಳ್ಳೆಯದು. ಇದರಲ್ಲಿ ಮುಖ್ಯವಾಗಿ ಹಾಲು, ಚೀಸ್ ಮತ್ತು ಮೊಸರು. ಈ ಹಾಲಿನ ಉತ್ಪನ್ನಗಳಲ್ಲಿ ಉನ್ನತ ಮಟ್ಟದ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಇದೆ. ಇದು ಮೂಳೆಗಳು ಹಾಗೂ ಹಲ್ಲುಗಳು ಬಲಶಾಲಿಯಾಗುವಂತೆ ಮಾಡುವುದು. ಪ್ರತಿನಿತ್ಯವು ನೀವು ಮಕ್ಕಳಿಗೆ ಒಂದು ರೀತಿಯ ಹಾಲಿನ ಉತ್ಪನ್ನವನ್ನು ನೀಡಿ. ಹಾಲು, ಮೊಸರು ಮತ್ತು ಚೀಸ್ ನೀಡಿ. ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಡಿಮೆ ಕೊಬ್ಬಿನಾಂಶವಿರುವ ಹಾಲಿನ ಉತ್ಪನ್ನಗಳನ್ನು ನೀಡಿ.

ಪ್ರೋಟೀನ್

ಮಾಂಸ, ಮೀನು, ಮೊಟ್ಟೆ, ಬೀನ್ಸ್, ಕಡಲೆ, ತೌಫು ಮತ್ತು ಬೀಜಗಳನ್ನು ಸೇರಿದಂತೆ ಪ್ರೋಟೀನ್ ಅಧಿಕವಾಗಿ ಇರುವಂತಹ ಆಹಾರವನ್ನು ಮಕ್ಕಳಿಗೆ ನೀಡಿ. ಇದು ಮಕ್ಕಳ ಬೆಳವಣಿಗೆ ಮತ್ತು ಸ್ನಾಯುಗಳ ಬೆಳವಣಿಗೆಗೆ ತುಂಬಾ ನೆರವಾಗಲಿದೆ. ಈ ಆಹಾದಲ್ಲಿ ಕೂಡ ಉತ್ತಮ ಮಟ್ಟದ ವಿಟಮಿನ್ ಗಳು ಹಾಗೂ ಖನಿಜಾಂಶಗಳಾಗಿರುವಂತಹ ಸತು, ಕಬ್ಬಿನಾಂಶ, ವಿಟಮಿನ್ ಬಿ12 ಹಾಗೂ ಒಮೆಗಾ 3 ಒಬ್ಬಿನಾಮ್ಲವಿದೆ. ಒಮೆಗಾ-3 ಕೊಬ್ಬಿನಾಮ್ಲ ಮತ್ತು ಕಬ್ಬಿನಾಂಶವು ಕೆಂಪು ಮಾಂಸ ಮತ್ತು ಎಣ್ಣೆಯುಕ್ತ ಮೀನಿನಲ್ಲಿದೆ.

ನೀರು

12 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀರು ಅತ್ಯುತ್ತಮ ಆರೋಗ್ಯಕಾರಿ ಪಾನೀಯ. ಇದು ತುಂಬಾ ಅಗ್ಗವಾಗಿ ಸಿಗುವುದು ಮತ್ತು ಇದು ಆರೋಗ್ಯಕ್ಕೂ ಒಳ್ಳೆಯದು.

ವ್ಯಾಯಾಮ

ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳು ವಯಸ್ಕರಿಗೆ ಮತ್ತು ಹಿರಿಯರಷ್ಟೇ ಮಾಡುವುದಲ್ಲ. ಮಕ್ಕಳಿಗೂ ದೈಹಿಕ ಚಟುವಟಿಕೆಗಳು ಅವಶ್ಯಕವಾಗಿರುತ್ತದೆ. ಬೆಳೆಯುವ ವಯಸ್ಸಿನಲ್ಲಿ ಮಾಂಸಖಂಡಗಳು, ಮೂಳೆಗಳು ದೃಢವಾಗುವುದಕ್ಕೆ ವ್ಯಾಯಾಮಗಳು ನೆರವಾಗುತ್ತವೆ.ಆ ರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ನಿತ್ಯ ಒಂದು ಗಂಟೆಯಾದರೂ ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದರೆ ಚಿಕ್ಕಂದಿನಿಂದಲೇ ಫಿಟ್‌ನೆಸ್ ಕಾಯ್ದುಕೊಳ್ಳಬಹುದು.

ವ್ಯಾಯಾಮಗಳೆಂದರೆ ಜಿಮ್‌ಗಳಲ್ಲಿ ಬೆವರು ಹರಿಸುವ ಅಗತ್ಯವಿಲ್ಲ. ಮಕ್ಕಳಿಗೆ ಆಟಗಳೆಂದರೆ ಹೆಚ್ಚು ಇಷ್ಟ. ದೈಹಿಕ ಶ್ರಮ ಬೇಡುವ ಆಟಗಳಲ್ಲಿ ಮಗ್ನರಾದರೂ ಸಾಕು. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಇಂತಹ ಅಭ್ಯಾಸಗಳನ್ನು ರೂಢಿಸುವುದರಿಂದ ದೊಡ್ಡವರಾದ ಮೇಲೂ ನಿತ್ಯ ಅಭ್ಯಾಸ ಮಾಡುವುದನ್ನು ಕಲಿಯುತ್ತಾರೆ. ಇದರಿಂದ ಜೀವನವಿಡೀ ಫಿಟ್‌ನೆಸ್‌ ಕಾಯ್ದುಕೊಳ್ಳಲು ನೆರವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com