ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಸರ್ಕಾರ "ಮುಂದಿನ ಬಾಗಿಲಿನ" ಮೂಲಕವೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಿದೆ ಎಂದು ಸೋಮವಾರ ವಿಧಾನಸಭೆಯಲ್ಲಿ ಹೇಳಿದ್ದಾರೆ. ಆದರೆ ಯುಸಿಸಿ ಸಾಂಪ್ರದಾಯ ಮತ್ತು ಆಚರಣೆಗಳಿಗೆ ಯಾವುದೇ ಅಡ್ಡಿಯಾವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
'ಅಸ್ಸಾಂ ಹೀಲಿಂಗ್(ಕೆಟ್ಟ ಅಭ್ಯಾಸಗಳ ತಡೆಗಟ್ಟುವಿಕೆ) ಅಭ್ಯಾಸಗಳ ಮಸೂದೆ 2024' ಕುರಿತ ಚರ್ಚೆಗೆ ಉತ್ತರಿಸಿದ ಶರ್ಮಾ, ದುರುದ್ದೇಶಪೂರಿತ ಉದ್ದೇಶದಿಂದ ವೈಯಕ್ತಿಕ ಆಚರಣೆಗಳನ್ನು ತಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ.
"UCC ಈಗ ಉತ್ತರಾಖಂಡದಲ್ಲಿ ಜಾರಿಯಾಗಿದೆ. UCC ಯು ಬಾಲ್ಯ ವಿವಾಹವನ್ನು ತಡೆಗಟ್ಟಲಿದೆ ಮತ್ತು ಬಹುಪತ್ನಿತ್ವವನ್ನು ನಿಷೇಧಿಸುವುದು, ಉತ್ತರಾಧಿಕಾರ ಕಾನೂನುಗಳು ಮತ್ತು ಲಿವ್-ಇನ್ ಸಂಬಂಧಗಳ ನೋಂದಣಿ ಅಂಶಗಳನ್ನು ಒಳಗೊಂಡಿದೆ" ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದರು.
ಉತ್ತರಾಖಂಡ ವಿಧಾನಸಭೆಯು ಫೆಬ್ರವರಿ 7 ರಂದು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಎಲ್ಲಾ ಸಮುದಾಯಗಳಿಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳ ಮೇಲೆ ಏಕರೂಪದ ನಿಯಮಗಳನ್ನು ಜಾರಿಗೊಳಿಸುವ ಮಸೂದೆ ಅಂಗೀಕರಿಸಿದೆ.
ಉತ್ತರಾಖಂಡ ಮತ್ತು ಗುಜರಾತ್ ನಂತರ ಅಸ್ಸಾಂ ಯುಸಿಸಿ ಜಾರಿ ಸಂಬಂಧ ಮಸೂದೆ ಮಂಡಿಸಿದ ಮೂರನೇ ರಾಜ್ಯವಾಗಿದೆ ಮತ್ತು ಇದು ಬುಡಕಟ್ಟು ಸಮುದಾಯಗಳಿಗೆ ಈ ಕಾನೂನಿನಿಂದ ವಿನಾಯಿತಿ ನೀಡಲಾಗಿದೆ ಎಂದು ಶರ್ಮಾ ಕಳೆದ ತಿಂಗಳು ಹೇಳಿದ್ದರು.
Advertisement