ಗುಜರಾತ್ ಕರಾವಳಿಯಲ್ಲಿ ದಾಖಲೆ ಪ್ರಮಾಣದ 3,300 ಕೆ.ಜಿ ಮಾದಕವಸ್ತು ವಶ: ಐವರು ವಿದೇಶಿಗರ ಬಂಧನ

ಗುಜರಾತ್ ಕರಾವಳಿಯಲ್ಲಿ ದಾಖಲೆ ಪ್ರಮಾಣದ 3,300 ಕೆಜಿ ನಿಷೇಧಿತ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇರಾನ್ ದೋಣಿಯಲ್ಲಿದ್ದ ಐವರು ವಿದೇಶಿಗರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಬುಧವಾರ ತಿಳಿಸಿದೆ.
ವಶಪಡಿಸಿಕೊಂಡು 3,300 ಕೆಜಿ ಮಾದಕವಸ್ತುವಿನೊಂದಿಗೆ ಭಾರತೀಯ ನೌಕಾಪಡೆ ಸಿಬ್ಬಂದಿ
ವಶಪಡಿಸಿಕೊಂಡು 3,300 ಕೆಜಿ ಮಾದಕವಸ್ತುವಿನೊಂದಿಗೆ ಭಾರತೀಯ ನೌಕಾಪಡೆ ಸಿಬ್ಬಂದಿ

ಪೋರಬಂದರ್: ಗುಜರಾತ್ ಕರಾವಳಿಯಲ್ಲಿ ದಾಖಲೆ ಪ್ರಮಾಣದ 3,300 ಕೆಜಿ ನಿಷೇಧಿತ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇರಾನ್ ದೋಣಿಯಲ್ಲಿದ್ದ ಐವರು ವಿದೇಶಿಗರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಬುಧವಾರ ತಿಳಿಸಿದೆ.

ನೌಕಾಪಡೆ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಜಂಟಿಯಾಗಿ ಇಂಟರ್‌ನ್ಯಾಷನಲ್ ಮ್ಯಾರಿಟೈಮ್ ಬೌಂಡರಿ ಲೈನ್ (IMBL) ಉದ್ದಕ್ಕೂ ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆಯನ್ನು ಕೈಗೊಂಡಿವೆ.

ವಶಪಡಿಸಿಕೊಂಡ ಮಾದಕವಸ್ತುವಿನಲ್ಲಿ ಚರಸ್, ಮೆಥಾಂಫೆಟಮೈನ್ ಮತ್ತು ಮಾರ್ಫಿನ್ ಇದೆ ಎಂದು ಶಂಕಿಸಲಾಗಿದೆ.

ವಶಪಡಿಸಿಕೊಂಡು 3,300 ಕೆಜಿ ಮಾದಕವಸ್ತುವಿನೊಂದಿಗೆ ಭಾರತೀಯ ನೌಕಾಪಡೆ ಸಿಬ್ಬಂದಿ
ಭಾರತೀಯ ನೌಕಾಪಡೆಯ ದೊಡ್ಡ ಬೇಟೆ: ಅರಬ್ಬೀ ಸಮುದ್ರದಲ್ಲಿ 3,000 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ

ಎನ್‌ಸಿಬಿ ಮತ್ತು ಇತರ ಸಂಸ್ಥೆಗಳು ಮತ್ತೊಂದು ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿವೆ ಮತ್ತು ದೇಶದಲ್ಲಿ ಇದು ಈವರೆಗಿನ ದಾಖಲೆ ಪ್ರಮಾಣದ ಮಾದಕವಸ್ತು ವಶಪಡಿಸಿಕೊಳ್ಳುವಿಕೆಯಾಗಿದೆ ಎಂದು ಎನ್‌ಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತ ಐವರನ್ನು ಇರಾನ್ ಅಥವಾ ಪಾಕಿಸ್ತಾನಿ ಪ್ರಜೆಗಳೆಂದು ಶಂಕಿಸಲಾಗಿದೆ. ಅವರಿಂದ ಯಾವುದೇ ರಾಷ್ಟ್ರೀಯತೆಯ ಕುರಿತಾದ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಕಳ್ಳಸಾಗಾಣಿಕೆ ಮಾಡುತ್ತಿದ್ದ ದೋಣಿ ಮತ್ತು ಸಿಬ್ಬಂದಿಯನ್ನು ಭಾರತೀಯ ಬಂದರಿನಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಭಾರತೀಯ ನೌಕಾಪಡೆಯು ಎನ್‌ಸಿಬಿಯೊಂದಿಗೆ ನಡೆಸಿದ ಜಂಠಿ ಕಾರ್ಯಾಚರಣೆಯಲ್ಲಿ, ಸುಮಾರು 3,300 ಕೆಜಿ ಮಾದಕವಸ್ತುವನ್ನು ಸಾಗಿಸುತ್ತಿದ್ದ ಅನುಮಾನಾಸ್ಪದ ದೋಣಿಯನ್ನು ವಶಪಡಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ವಶಪಡಿಸಿಕೊಂಡು ಅತಿ ಹೆಚ್ಚಿನ ಪ್ರಮಾಣದ ಮಾದಕವಸ್ತು ಇದಾಗಿದೆ' ಎಂದು ನೌಕಾಪಡೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ.

ನಿರ್ದಿಷ್ಟ ಸುಳಿವು ಆಧರಿಸಿ ಅರಬ್ಬಿ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ ಬಳಿ ಕಾರ್ಯಾಚರಣೆ ನಡೆಸಲಾಗಿದೆ. ಮಂಗಳವಾರ ರಾಜ್ಯ ಕರಾವಳಿಯ ಮಧ್ಯ ಸಮುದ್ರದ ಕಾರ್ಯಾಚರಣೆಯಲ್ಲಿ ದೋಣಿಯಿಂದ ಚರಸ್ (ಹಶಿಶ್) ಸೇರಿದಂತೆ ವಿವಿಧ ರೀತಿಯ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com