Ananth Ambani wedding-'ಅನ್ನಸೇವೆ'ಯೊಂದಿಗೆ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಕಾರ್ಯಕ್ರಮ ಆರಂಭ

ಗುಜರಾತ್ ನ ಜಮ್ನಾಗರದಲ್ಲಿ ಗ್ರಾಮಸ್ಥರಿಗೆ ಉಣಬಡಿಸಿದ ನೂತನ ಜೋಡಿ
ಗ್ರಾಮಸ್ಥರಿಗೆ ಉಣಬಡಿಸಿದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್
ಗ್ರಾಮಸ್ಥರಿಗೆ ಉಣಬಡಿಸಿದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್

ಜಾಮ್ನಗರ(ಗುಜರಾತ್): ದೇಶದ ಪ್ರತಿಷ್ಠಿತ ಕುಟುಂಬದಲ್ಲಿ ವಿವಾಹ ಕಾರ್ಯಕ್ರಮ ಸಂಭ್ರಮಾಚರಣೆ ಆರಂಭವಾಗಿದೆ. ಅದು ಖ್ಯಾತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹ. ಅನಂತ್ ಕೈಹಿಡಿಯುತ್ತಿರುವ ಹುಡುಗಿ ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್.

ವಿವಾಹ ಕಾರ್ಯಕ್ರಮ ನಾಳೆ ಮಾರ್ಚ್ 1ರಂದು ಆರಂಭವಾಗಿ 3ನೇ ತಾರೀಖಿನವರೆಗೆ ಸಾಗಲಿದೆ. ಅದರ ಪೂರ್ವಭಾವಿಯಾಗಿ ನಿನ್ನೆ ಬುಧವಾರ ಮುಕೇಶ್ ಅಂಬಾನಿಯವರ ತವರೂರು ಗುಜರಾತ್ ರಾಜ್ಯದ ಜಾಮ್ನಗರ ನಗರದ ರಿಲಯನ್ಸ್ ಟೌನ್‌ಶಿಪ್ ಬಳಿಯ ಜೋಗ್ವಾಡ್ ಗ್ರಾಮದಲ್ಲಿ ವಿವಾಹ ಪೂರ್ವ ಅಂಗವಾಗಿ ಗ್ರಾಮಸ್ಥರಿಗೆ ಸಾಂಪ್ರದಾಯಿಕ ಗುಜರಾತಿ ಆಹಾರವನ್ನು ವಿತರಿಸಿ 'ಅನ್ನ ಸೇವೆ'ಯೊಂದಿಗೆ ಶುಭ ಸಮಾರಂಭ ಆರಂಭವಾಗಿದೆ. ಅನ್ನಸೇವೆ ಕಾರ್ಯಕ್ರಮದಲ್ಲಿ ಸ್ವತಃ ಮುಕೇಶ್ ಅಂಬಾನಿ, ನವ ವಧೂ-ವರರು ಭಾಗವಹಿಸಿ ಗ್ರಾಮಸ್ಥರಿಗೆ ಸ್ವತಃ ಕೈಯಾರೆ ಬಡಿಸಿದರು.

ಜಾಗತಿಕ ನಾಯಕರಿಗೆ ಆಹ್ವಾನ: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಕಾರ್ಯಕ್ರಮಕ್ಕೆ ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಸ್ಸಿಮ್ ಅಲ್ ಥಾನಿ, ಭೂತಾನ್ ರಾಣಿ ಜೆಟ್ಸನ್ ಪೆಮಾ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಅಡೋಬ್ ಸಿಇಒ ಶಂತನು ನಾರಾಯಣ್ ಮತ್ತು ಸೌದಿ ಅರಾಮ್ಕೊ ಅಧ್ಯಕ್ಷ ಯಾಸಿರ್ ಅಲ್ ರುಮಯ್ಯನ್ ಅವರನ್ನು ಆಹ್ವಾನಿಸಲಾಗಿದೆ.

ಅತಿಥಿಗಳ ಪಟ್ಟಿಯಲ್ಲಿ ಸ್ವೀಡನ್‌ನ ಮಾಜಿ ಪ್ರಧಾನಿ ಕಾರ್ಲ್ ಬಿಲ್ಡ್ಟ್, ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್, ಗೂಗಲ್ ಅಧ್ಯಕ್ಷ ಡೊನಾಲ್ಡ್ ಹ್ಯಾರಿಸನ್, ಬೊಲಿವಿಯಾ ಮಾಜಿ ಅಧ್ಯಕ್ಷ ಜಾರ್ಜ್ ಕ್ವಿರೋಗಾ, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್ ಮತ್ತು ವಿಶ್ವ ಆರ್ಥಿಕ ವೇದಿಕೆಯ ಅಧ್ಯಕ್ಷ ಕ್ಲಾಸ್ ಶ್ವಾಬ್ ಕೂಡ ಇದ್ದಾರೆ.

ಭೋಜನದ ನಂತರ ನೆರೆದಿದ್ದವರು ಸಾಂಪ್ರದಾಯಿಕ ಜಾನಪದ ಸಂಗೀತವನ್ನು ಆನಂದಿಸಿದರು. ಪ್ರಸಿದ್ಧ ಗುಜರಾತಿ ಗಾಯಕ ಕೀರ್ತಿದನ್ ಗಧ್ವಿ ಅವರು ತಮ್ಮ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.ಅಂಬಾನಿ ಕುಟುಂಬದಲ್ಲಿ ಆಹಾರವನ್ನು ಹಂಚಿಕೊಳ್ಳುವುದು ಹಳೆಯ ಸಂಪ್ರದಾಯವಾಗಿದೆ.

ಈ ಸಂದರ್ಭದಲ್ಲಿ ಅತಿಥಿಗಳು ಗುಜರಾತ್‌ನ ಕಚ್ಛ್ ಮತ್ತು ಲಾಲ್‌ಪುರದ ಮಹಿಳಾ ಕುಶಲಕರ್ಮಿಗಳು ತಯಾರಿಸಿದ ಸಾಂಪ್ರದಾಯಿಕ ಸ್ಕಾರ್ಫ್‌ಗಳನ್ನು ಬಂದವರಿಗೆ ವಿತರಿಸಲಾಯಿತು.

ಜನವರಿ 2023ರಲ್ಲಿ ನಿಶ್ಚಿತಾರ್ಥ: ಅನಂತ್ ಮತ್ತು ರಾಧಿಕಾ ಜನವರಿ 2023 ರಲ್ಲಿ ಮುಂಬೈಯ ನಿವಾಸ ಆಂಟಿಲಿಯಾದಲ್ಲಿ ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಖೇಶ್-ನೀತಾ ಅಂಬಾನಿಯವರ ಮೂವರು ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರು ಕಳೆದ ಕೆಲವು ವರ್ಷಗಳಿಂದ ರಿಟೇಲ್, ಡಿಜಿಟಲ್ ಸೇವೆಗಳು, ಇಂಧನ ಮತ್ತು ವಸ್ತುಗಳ ವ್ಯವಹಾರಗಳು ಸೇರಿದಂತೆ RIL ನ ಪ್ರಮುಖ ವ್ಯವಹಾರಗಳೊಂದಿಗೆ ನಿಕಟವಾಗಿ ತೊಡಗಿಸಿಕೊಂಡು ಮುನ್ನಡೆಸುತ್ತಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಪ್ರಮುಖ ಅಂಗಸಂಸ್ಥೆಗಳ ಮಂಡಳಿಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇಶಾ ಎಂ. ಅಂಬಾನಿ ಅವರು ರಿಲಯನ್ಸ್ ರಿಟೇಲ್‌ನ ವಿಸ್ತರಣೆಗೆ ಚಾಲನೆ ನೀಡುತ್ತಿದ್ದರೆ, ಆಕಾಶ್ ಎಂ. ಅಂಬಾನಿ ಅವರು ಜೂನ್ 2022 ರಿಂದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (RJIL) ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನಂತ್ ಎಂ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಇಂಧನ ಮತ್ತು ವಸ್ತುಗಳ ವ್ಯವಹಾರಗಳ ವಿಸ್ತರಣೆಗೆ ಚಾಲನೆ ನೀಡುತ್ತಿದ್ದಾರೆ. ಇಶಾ ಮತ್ತು ಆಕಾಶ್ 2018 ಮತ್ತು 2019 ರಲ್ಲಿ ವಿವಾಹವಾಗಿದ್ದರು.

ಗ್ರಾಮಸ್ಥರಿಗೆ ಬಡಿಸಿದ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ
ಗ್ರಾಮಸ್ಥರಿಗೆ ಬಡಿಸಿದ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ

ಅನಂತ್ ಅಂಬಾನಿ ಅಪಾಯದಲ್ಲಿರುವ ಪ್ರಾಣಿಗಳನ್ನು ಪುನರ್ವಸತಿ ಮಾಡಲು ಮತ್ತು ಅವುಗಳ ಉಳಿದ ಜೀವನದಲ್ಲಿ ಕಾಳಜಿ ಮತ್ತು ಘನತೆಯನ್ನು ಒದಗಿಸಲು ಹಲವಾರು ಸಹಾನುಭೂತಿಯ ಉಪಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ವಂತರಾ: ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಶನ್ ಗುಜರಾತ್‌ನ ಹಸಿರು ಪ್ರದೇಶದ ಹೃದಯಭಾಗದಲ್ಲಿ ಪ್ರಾಣಿ ಕಲ್ಯಾಣಕ್ಕಾಗಿ ಒಂದು ಮಾದರಿ ಬದಲಾವಣೆಯ ಉಪಕ್ರಮವಾದ ವಂತರಾವನ್ನು ಪ್ರಾರಂಭಿಸಿದೆ. ವಂತರಾ (ಸ್ಟಾರ್ ಆಫ್ ದಿ ಫಾರೆಸ್ಟ್), ಮಹತ್ವಾಕಾಂಕ್ಷೆಯ ಕಾರ್ಯಕ್ರಮವು ಅಗತ್ಯವಿರುವ ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿ ಕಾರ್ಯವನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com