ಒಂದು ಕೋಟಿ ಕುಟುಂಬಗಳಿಗೆ 300 ಯುನಿಟ್ ಉಚಿತ ವಿದ್ಯುತ್ ನೀಡುವ ಪಿಎಂ ಸೂರ್ಯ ಘರ್ ಯೋಜನೆಗೆ ಸಂಪುಟ ಒಪ್ಪಿಗೆ

ನವೀಕರಿಸಬಹುದಾದ ಶಕ್ತಿಗೆ ಹೆಚ್ಚಿನ ಒತ್ತು ನೀಡುವುದರ ಭಾಗವಾಗಿ, 1 ಕೋಟಿ ಕುಟುಂಬಗಳಿಗೆ 300 ಯುನಿಟ್ ಉಚಿತ ವಿದ್ಯುತ್ ನೀಡುವ ಪಿಎಂ ಸೂರ್ಯ ಘರ್ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
 ಸೋಲಾರ್ ಘಟಕ
ಸೋಲಾರ್ ಘಟಕonline desk

ನವದೆಹಲಿ: ನವೀಕರಿಸಬಹುದಾದ ಶಕ್ತಿಗೆ ಹೆಚ್ಚಿನ ಒತ್ತು ನೀಡುವುದರ ಭಾಗವಾಗಿ, 1 ಕೋಟಿ ಕುಟುಂಬಗಳಿಗೆ 300 ಯುನಿಟ್ ಉಚಿತ ವಿದ್ಯುತ್ ನೀಡುವ ಪಿಎಂ ಸೂರ್ಯ ಘರ್ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.

ಈ ಯೋಜನೆಗೆ ಪಿಎಂ ಸೂರ್ಯ ಘರ್ ಯೋಜನೆ ಎಂದು ನಾಮಕರಣ ಮಾಡಲಾಗಿದ್ದು, 1 ಕೋಟಿ ಕುಟುಂಬಗಳಿಗೆ ಚಾವಣಿ ಮೇಲೆ ಸೋಲಾರ್ ಘಟಕಗಳನ್ನು ಸ್ಥಾಪಿಸುವುದಕ್ಕಾಗಿ 78,000 ರೂಪಾಯಿ ನೆರವು ಸಿಗಲಿದ್ದು ಈ ಕುಟುಂಬಗಳಿಗೆ ಮಾಸಿಕ 300 ಯುನಿಟ್ ಉಚಿತ ವಿದ್ಯುತ್ ಲಭ್ಯವಾಗಲಿದೆ.

ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಪ್ರಧಾನಿ ನರೇಂದ್ರ ಮೋದಿ ಅವರು ಫೆ.13 ರಂದು ಚಾಲನೆ ನೀಡಿದ್ದ ಪಿಎಂ ಸೂರ್ಯ ಘರ್; ಉಚಿತ ವಿದ್ಯುತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಇದಕ್ಕಾಗಿ 75,021 ಕೋಟಿ ರೂಪಾಯಿ ಮೀಸಲಿಡಲಾಗೆ ಎಂದು ಹೇಳಿದ್ದಾರೆ.

 ಸೋಲಾರ್ ಘಟಕ
'ಸೂರ್ಯೋದಯ ಯೋಜನೆ' ಘೋಷಿಸಿದ ಪ್ರಧಾನಿ ಮೋದಿ; 1 ಕೋಟಿ ಮನೆಗಳಿಗೆ ಸೋಲಾರ್ ಪ್ಯಾನೆಲ್ ಅಳವಡಿಕೆ

ಈ ಯೋಜನೆಯು ಕುಟುಂಬಗಳಿಗೆ ಸಹಾಯ ಮಾಡುತ್ತದೆ ಮತ್ತು ಸೌರಶಕ್ತಿ ಘಟಕಗಳ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದಲ್ಲದೆ, 17 ಲಕ್ಷ ಜನರಿಗೆ ನೇರ ಉದ್ಯೋಗವನ್ನು ನೀಡುತ್ತದೆ ಎಂದು ಸಚಿವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com