ಔತಣಕೂಟಕ್ಕೆ ಶಿಂಧೆ, ಫಡ್ನವೀಸ್, ಅಜಿತ್ ಗೆ ಶರದ್ ಪವಾರ್ ಆಹ್ವಾನ

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಪವಾರ್) ಅಧ್ಯಕ್ಷ ಶರದ್ ಪವಾರ್ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ಗಳಾದ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಅವರಿಗೆ ಔತಣ ಕೂಟಕ್ಕೆ ಆಹ್ವಾನ ನೀಡಿದ್ದಾರೆ.
ಶರದ್ ಪವಾರ್
ಶರದ್ ಪವಾರ್ online desk

ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಪವಾರ್) ಅಧ್ಯಕ್ಷ ಶರದ್ ಪವಾರ್ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ಗಳಾದ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಅವರಿಗೆ ಔತಣ ಕೂಟಕ್ಕೆ ಆಹ್ವಾನ ನೀಡಿದ್ದಾರೆ. ಮಾ.2 ರಂದು ಬಾರಮತಿಯಲ್ಲಿ ಔತಣಕೂಟ ಆಯೋಜನೆ ಮಾಡಲಾಗಿದ್ದು, ಈ ಕೂಟದಲ್ಲಿ ಭಾಗಿಯಾಗುವಂತೆ ಶರದ್ ಪವಾರ್ ಏಕನಾಥ್ ಶಿಂಧೆ, ಡಿಸಿಎಂಗಳಾದ ದೇವೇಂದ್ರ ಫಡ್ನವೀಸ್ ಅಜಿತ್ ಪವಾರ್ ಗೆ ಆಹ್ವಾನ ನೀಡಿದ್ದಾರೆ.

ಶರದ್ ಪವಾರ್
ರಾಯಗಢ ಕೋಟೆಯಲ್ಲಿ ಶರದ್ ಪವಾರ್ NCP ಬಣದ ಚಿಹ್ನೆ ಅನಾವರಣ

ಸಿಎಂ ಶಿಂಧೆ, ಡಿಸಿಎಂ ಫಡ್ನವೀಸ್ ಹಾಗೂ ಅಜಿತ್ ಪವಾರ್ ಪುಣೆಯ ಬರಮತಿಯಲ್ಲಿರುವ ವಿದ್ಯಾ ಪ್ರತಿಷ್ಠಾನ ಕಾಲೇಜಿನಲ್ಲಿ ನಮೋ ಮಹಾರೋಜ್ಗಾರ್ ಮೇಲವದಲ್ಲಿ ಭಾಗಿಯಾಗಲಿದ್ದಾರೆ. ರಾಜಕೀಯ ಎದುರಾಳಿಗಳಿಗೆ ಶರದ್ ಪವಾರ್ ಕಳಿಸಿರುವ ಈ ಆಹ್ವಾನ ಅಚ್ಚರಿ ಮೂಡಿಸಿದೆ.

ಲೋಕಸಭೆಯಲ್ಲಿ ಶರದ್ ಪವಾರ್ ಪುತ್ರಿ ಪ್ರತಿನಿಧಿಸುತ್ತಿರುವ ಬರಮತಿ ಕ್ಷೇತ್ರದಿಂದ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಅಜಿತ್ ಪವಾರ್ ಅವರೊಂದಿಗೆ ಚರ್ಚೆ ನಡೆಯುತ್ತಿದೆ. ಆಹ್ವಾನ ಪತ್ರದಲ್ಲಿ ಬರಮತಿಯಲ್ಲಿ ನಡೆಯುತ್ತಿರುವ ಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೆ ತಾವು ಹಾಗೂ ತಮ್ಮ ಪುತ್ರಿ ಸುಪ್ರಿಯಾ ಸುಲೆ ಆಸಕ್ತರಾಗಿರುವುದಾಗಿ ಪವಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com