ರಾಯಗಢ ಕೋಟೆಯಲ್ಲಿ ಶರದ್ ಪವಾರ್ NCP ಬಣದ ಚಿಹ್ನೆ ಅನಾವರಣ

ಅಜಿತ್ ಪವಾರ್ ಬಣಕ್ಕೆ ಎನ್‌ಸಿಪಿ ಹೆಸರು ಮತ್ತು 'ಗಡಿಯಾರ' ಚಿಹ್ನೆಯನ್ನು ನೀಡಿದ ಕೆಲವು ದಿನಗಳ ನಂತರ, ಚುನಾವಣಾ ಆಯೋಗವು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ನೇತೃತ್ವದ ಪಾಳಯಕ್ಕೆ ಹೊಸ ಚಿಹ್ನೆಯನ್ನು ನೀಡಿದೆ. ಶರದ್ ಪವಾರ್ ಅವರು ಶನಿವಾರ 'ವ್ಯಕ್ತಿಯೊಬ್ಬ ಕಹಳೆ ಊದುವ' ಪಕ್ಷದ ಚಿಹ್ನೆಯನ್ನು ಅನಾವರಣಗೊಳಿಸಿದ್ದಾರೆ.
ಶರದ್ ಪವಾರ್ ಅವರು ರಾಯಗಢ ಜಿಲ್ಲೆಯ ರಾಯಗಢ ಕೋಟೆಯಲ್ಲಿ ಪಕ್ಷದ ಹೊಸ ಚಿಹ್ನೆಯನ್ನು ಅನಾವರಣಗೊಳಿಸಿದರು.
ಶರದ್ ಪವಾರ್ ಅವರು ರಾಯಗಢ ಜಿಲ್ಲೆಯ ರಾಯಗಢ ಕೋಟೆಯಲ್ಲಿ ಪಕ್ಷದ ಹೊಸ ಚಿಹ್ನೆಯನ್ನು ಅನಾವರಣಗೊಳಿಸಿದರು.
Updated on

ಮುಂಬೈ: ಅಜಿತ್ ಪವಾರ್ ಬಣಕ್ಕೆ ಎನ್‌ಸಿಪಿ ಹೆಸರು ಮತ್ತು 'ಗಡಿಯಾರ' ಚಿಹ್ನೆಯನ್ನು ನೀಡಿದ ಕೆಲವು ದಿನಗಳ ನಂತರ, ಚುನಾವಣಾ ಆಯೋಗವು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ನೇತೃತ್ವದ ಪಾಳಯಕ್ಕೆ ಹೊಸ ಚಿಹ್ನೆಯನ್ನು ನೀಡಿದೆ. ಶರದ್ ಪವಾರ್ ಅವರು ಶನಿವಾರ 'ಕಹಳೆ ಊದುತ್ತಿರುವ ವ್ಯಕ್ತಿ' ಪಕ್ಷದ ಚಿಹ್ನೆಯನ್ನು ಅನಾವರಣಗೊಳಿಸಿದ್ದಾರೆ.

ಇದು ಜನರ ಕಲ್ಯಾಣಕ್ಕಾಗಿ ಹೊಸ ಹೋರಾಟವನ್ನು ಪ್ರಾರಂಭಿಸಲು ಮತ್ತು ಅವರ ಉನ್ನತಿಗಾಗಿ ಕೆಲಸ ಮಾಡುವ ಸರ್ಕಾರಕ್ಕೆ ಸ್ಫೂರ್ತಿ ಎಂದು ಕರೆದಿದ್ದಾರೆ.

ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ಸೇರಲು ಅಜಿತ್ ಪವಾರ್ ಪಕ್ಷದಿಂದ ಬೇರ್ಪಟ್ಟ ತಿಂಗಳುಗಳ ನಂತರ, ಚುನಾವಣಾ ಆಯೋಗವು ಇತ್ತೀಚೆಗೆ ಅವರ ಬಣವನ್ನೇ ನಿಜವಾದ ಎನ್‌ಸಿಪಿ ಎಂದು ಮಾನ್ಯ ಮಾಡಿದೆ ಮತ್ತು ಅದರ ಚಿಹ್ನೆಯಾದ ಗೋಡೆ ಗಡಿಯಾರವನ್ನು ಆ ಪಾಳಯಕ್ಕೆ ನೀಡಿತ್ತು.

ನಂತರ, ಚುನಾವಣಾ ಆಯೋಗವು ಶರದ್ ಪವಾರ್ ಅವರ ಬಣಕ್ಕೆ 'ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್‌ಚಂದ್ರ ಪವಾರ್' ಎಂದು ಹೆಸರು ನೀಡಿತು. ಗುರುವಾರ ತುರ್ಹಾ (ಸಾಂಪ್ರದಾಯಿಕ ಕಹಳೆ) ಊದುತ್ತಿರುವ ವ್ಯಕ್ತಿಯ ಚಿಹ್ನೆಯನ್ನು ನಿಗದಿಪಡಿಸಿತು.

ಚಿಹ್ನೆಯನ್ನು ಅನಾವರಣಗೊಳಿಸಿದ ನಂತರ ರಾಯಗಢ ಕೋಟೆಯಲ್ಲಿ ಮಾತನಾಡಿದ ಪವಾರ್, ಏರುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗದಿಂದ ಸಂಕಷ್ಟದಲ್ಲಿರುವ ಜನರಿಗೆ ಕಹಳೆ ಸಂತೋಷವನ್ನು ತರುತ್ತದೆ. ಜನಪರ ಸರ್ಕಾರವನ್ನು ಸ್ಥಾಪಿಸಲು, ನಾವು ಹೋರಾಟ ಮಾಡಬೇಕಾಗಿದೆ ಮತ್ತು ಆದ್ದರಿಂದ ನಾವು ಕಹಳೆ ಚಿಹ್ನೆಯನ್ನು ಬಲಪಡಿಸಬೇಕಾಗಿದೆ ಎಂದು ಹೇಳಿದರು.

ಶರದ್ ಪವಾರ್ ಅವರು ರಾಯಗಢ ಜಿಲ್ಲೆಯ ರಾಯಗಢ ಕೋಟೆಯಲ್ಲಿ ಪಕ್ಷದ ಹೊಸ ಚಿಹ್ನೆಯನ್ನು ಅನಾವರಣಗೊಳಿಸಿದರು.
NCP ಪಕ್ಷವನ್ನು ಅದರ ಸಂಸ್ಥಾಪಕರಿಂದ ಚುನಾವಣಾ ಆಯೋಗ ಕಸಿದುಕೊಂಡಿತು: ಶರದ್ ಪವಾರ್

ಜನರ ಶ್ರೇಯೋಭಿವೃದ್ಧಿಗಾಗಿ ಮತ್ತು ಅವರ ಉನ್ನತಿಗಾಗಿ ಶ್ರಮಿಸುವ ಸರ್ಕಾರವನ್ನು ತರಲು ಹೊಸ ಹೋರಾಟವನ್ನು ಪ್ರಾರಂಭಿಸಲು ಇದು ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದರು.

ಸಾಮಾನ್ಯ ಜನರ ಕಲ್ಯಾಣ ಮತ್ತು ಪ್ರಗತಿಗಾಗಿ ಕೆಲಸ ಮಾಡುವ ಸರ್ಕಾರವನ್ನು ಅಧಿಕಾರಕ್ಕೆ ತರಲು ತಮ್ಮ ಪಕ್ಷದ ಕಾರ್ಯಕರ್ತರ ಬೆಂಬಲವನ್ನು ಪವಾರ್ ಕೋರಿದರು.

ಕಹಳೆ ಶೌರ್ಯ, ವಿಜಯ ಮತ್ತು ಹೋರಾಟದ ಸ್ಫೂರ್ತಿಯ ಸಂಕೇತವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ನಡೆದ ಕೋಟೆ, ತಮ್ಮ ಜೀವನದ ಕೊನೆಯ ವರ್ಷಗಳನ್ನು ಕಳೆದ ಮತ್ತು ಅವರ ಸಮಾಧಿ ಇರುವ ಸ್ಥಳದಿಂದ ನಾವು ಆಶೀರ್ವಾದವನ್ನು ಪಡೆಯುತ್ತೇವೆ ಎಂದು ರಾಜ್ಯ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com