1993 ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅಬ್ದುಲ್ ತುಂಡಾ ನಿರ್ದೋಷಿ: ಟಿಎಡಿಎ ಕೋರ್ಟ್

1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಅಬ್ದುಲ್ ತುಂಡಾ ನಿರ್ದೋಷಿ ಎಂದು ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ ಕಾಯ್ದೆ (TADA) ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.
ಎಲ್ ಇಟಿ ಉಗ್ರ ಅಬ್ದುಲ್ ಕರೀಂ ತುಂಡಾ (ಸಂಗ್ರಹ ಚಿತ್ರ)
ಎಲ್ ಇಟಿ ಉಗ್ರ ಅಬ್ದುಲ್ ಕರೀಂ ತುಂಡಾ (ಸಂಗ್ರಹ ಚಿತ್ರ)

ಮುಂಬೈ: 1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಅಬ್ದುಲ್ ತುಂಡಾ ನಿರ್ದೋಷಿ ಎಂದು ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ ಕಾಯ್ದೆ (TADA) ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಕೋರ್ಟ್ ಹೇಳಿದೆ.

ಅಬ್ದುಲ್ ಕರಿಮ್ ತುಂಡಾ ವಿರುದ್ಧ ಸ್ಪಷ್ಟ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಸಿಬಿಐ ವಿಫಲವಾಗಿದೆ ಎಂದು ಅಡ್ವೊಕೇಟ್ ಶಫಾಕ್ ಸುಲ್ತಾನಿ ಹೇಳಿದ್ದಾರೆ. "ಅಬ್ದುಲ್ ಕರೀಂ ತುಂಡಾ ನಿರಪರಾಧಿ ಎಂದು ಇಂದು ಕೋರ್ಟ್ ಈ ತೀರ್ಪು ನೀಡಿದೆ. ಅಬ್ದುಲ್ ಕರೀಂ ತುಂಡಾ ಎಲ್ಲಾ ಸೆಕ್ಷನ್‌ಗಳಲ್ಲಿ ಮತ್ತು ಎಲ್ಲಾ ಕೃತ್ಯಗಳಲ್ಲಿ ಖುಲಾಸೆಗೊಂಡಿದ್ದಾರೆ. ಸಿಬಿಐ ಪ್ರಾಸಿಕ್ಯೂಷನ್ ಗೆ ಟಾಡಾ, ಐಪಿಸಿ, ರೈಲ್ವೇ ಕಾಯಿದೆಗಳು, ಶಸ್ತ್ರಾಸ್ತ್ರ ಕಾಯ್ದೆಗಳಲ್ಲಿ, ಅಥವಾ ಸ್ಫೋಟಕ ವಸ್ತುಗಳ ಕಾಯಿದೆಯಲ್ಲಿ ಯಾವುದೇ ಸ್ಪಷ್ಟ ಪುರಾವೆಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ವಕೀಲ ಸುಲ್ತಾನಿ ಸುದ್ದಿಗಾರರಿಗೆ ತಿಳಿಸಿದರು.

ಎಲ್ ಇಟಿ ಉಗ್ರ ಅಬ್ದುಲ್ ಕರೀಂ ತುಂಡಾ (ಸಂಗ್ರಹ ಚಿತ್ರ)
ಎಲ್ ಇಟಿ ಉಗ್ರ ಕರೀಂ ತುಂಡಾ ದೋಷಮುಕ್ತ

1992ರ ಬಾಬರಿ ಮಸೀದಿ ಧ್ವಂಸದ ವಾರ್ಷಿಕ ದಿನದಂದು ನಾಲ್ಕು ರೈಲುಗಳಲ್ಲಿ ಸಂಭವಿಸಿದ ಸ್ಫೋಟದ ಹಿಂದಿನ ಮಾಸ್ಟರ್ ಮೈಂಡ್ ತುಂಡಾ ಎಂದು ಸಿಬಿಐ ಆರೋಪಿಸಿತ್ತು.

ಕೋರ್ಟ್ ಆವರಣದಲ್ಲೇ ತುಂಡಾ ಮೇಲೆ ಹಲ್ಲೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com