ಕೇರಳ ರಾಜ್ಯಪಾಲ ಖಾನ್ ಪ್ರತಿಕೃತಿ ದಹಿಸಿದ ಎಸ್‌ಎಫ್‌ಐ ಅಧ್ಯಕ್ಷೆ, ಸದಸ್ಯರ ವಿರುದ್ಧ ಕೇಸ್ ದಾಖಲು

ಪಯ್ಯಂಬಲಂ ಬೀಚ್‌ನಲ್ಲಿ ಭಾನುವಾರ ಸಂಜೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಬೃಹತ್ ಪ್ರತಿಕೃತಿಯನ್ನು ಪೆಟ್ರೋಲ್ ಹಾಕಿ ದಹಿಸಿದ ‘ಅಪಾಯಕಾರಿ ಕೃತ್ಯ’ಕ್ಕೆ ಸಂಬಂಧಿಸಿದಂತೆ ಎಸ್‌ಎಫ್‌ಐ ರಾಜ್ಯಾಧ್ಯಕ್ಷೆ ಕೆ ಅನುಶ್ರೀ
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಕಣ್ಣೂರು: ಪಯ್ಯಂಬಲಂ ಬೀಚ್‌ನಲ್ಲಿ ಭಾನುವಾರ ಸಂಜೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಬೃಹತ್ ಪ್ರತಿಕೃತಿಯನ್ನು ಪೆಟ್ರೋಲ್ ಹಾಕಿ ದಹಿಸಿದ ‘ಅಪಾಯಕಾರಿ ಕೃತ್ಯ’ಕ್ಕೆ ಸಂಬಂಧಿಸಿದಂತೆ ಎಸ್‌ಎಫ್‌ಐ ರಾಜ್ಯಾಧ್ಯಕ್ಷೆ ಕೆ ಅನುಶ್ರೀ ಮತ್ತು ಇತರ ಎಂಟು ಮಂದಿ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಸ್‌ಎಫ್‌ಐ ನಾಯಕರ ವಿರುದ್ಧ ಭಾರತೀಯ ದಂಡ ಸಂಹಿತೆಯ(ಐಪಿಸಿ) 143(ಕಾನೂನುಬಾಹಿರ ಸಭೆ), 147 (ಗಲಭೆಗೆ ಶಿಕ್ಷೆ) ಮತ್ತು 285 (ಬೆಂಕಿ ಅಥವಾ ದಹನಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಹೊಸ ವರ್ಷದ ಮುನ್ನಾದಿನದಂದು ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಕೋಮುವಾದ ಮಾಡುತ್ತಿದ್ದಾರೆ ಎಂದು ಆರೋಪಿಸಿ ಎಸ್‌ಎಫ್‌ಐ, ರಾಜ್ಯಪಾಲರ 30 ಅಡಿ ಎತ್ತರದ ಪ್ರತಿಕೃತಿಯನ್ನು ಕಡಲತೀರದಲ್ಲಿ ದಹಿಸಿದ ನಂತರ ಕಣ್ಣೂರು ಪಟ್ಟಣ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯಾರ್ಥಿ ಸಂಘಟನೆಯ ಸಹ ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದಂತೆಯೇ 30 ಅಡಿ ಎತ್ತರದ ಖಾನ್ ಅವರ ಪ್ರತಿಕೃತಿಯನ್ನು ಅನುಶ್ರೀ ಅವರು ಸುಟ್ಟು ಹಾಕಿದ್ದರು.

ರಾಜ್ಯಪಾಲ ಖಾನ್ ಅವರು ರಾಜ್ಯದಲ್ಲಿ ಹಿಂದೂ ಬಲಪಂಥೀಯ ಕಾರ್ಯಕರ್ತರನ್ನು ವಿಶ್ವವಿದ್ಯಾಲಯಗಳ ಸೆನೆಟ್‌ಗಳಿಗೆ ನಾಮನಿರ್ದೇಶನ ಮಾಡುವುದರ ವಿರುದ್ಧ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಎಸ್‌ಎಫ್‌ಐ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com