ಜಾಗತಿಕ ತಾಪಮಾನ ಏರಿಕೆ: ಮೈನಸ್ 3 ಡಿಗ್ರಿ; ಹೆಪ್ಪುಗಟ್ಟಿದ ದಾಲ್ ಸರೋವರ, ಜಮ್ಮು-ಕಾಶ್ಮೀರದಲ್ಲಿ ಚಳಿ ವಾಡಿಕೆಗಿಂತ ಕಡಿಮೆ!

ಜಾಗತಿಕ ತಾಪಮಾನ ಏರಿಕೆ ಬಿಸಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೂ ತಾಗಿದ್ದು, ಅಲ್ಲಿ ತಾಪಮಾನ ಕುಸಿದಿದೆಯಾದರೂ ಸಾಮಾನ್ಯ ಋತುಗಳಿಗೆ ಹೋಲಿಕೆ ಮಾಡಿದರೆ ಇದು ತೀವ್ರ ಕಡಿಮೆ ಎಂದು ಹೇಳಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರ
ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರ

ಶ್ರೀನಗರ: ಜಾಗತಿಕ ತಾಪಮಾನ ಏರಿಕೆ ಬಿಸಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೂ ತಾಗಿದ್ದು, ಅಲ್ಲಿ ತಾಪಮಾನ ಕುಸಿದಿದೆಯಾದರೂ ಸಾಮಾನ್ಯ ಋತುಗಳಿಗೆ ಹೋಲಿಕೆ ಮಾಡಿದರೆ ಇದು ತೀವ್ರ ಕಡಿಮೆ ಎಂದು ಹೇಳಲಾಗುತ್ತಿದೆ.

ಹೌದು.. ಜಾಗತಿಕ ತಾಪಮಾನದ ಎಫೆಕ್ಟ್ ಈ ಬಾರಿ ಜಮ್ಮು ಮತ್ತು ಕಾಶ್ಮೀರವನ್ನೂ ಕಾಡುತ್ತಿದ್ದು ಸಾಮಾನ್ಯ ಈ ಋತುವಿನಲ್ಲಿ ಇರಬೇಕಿದ್ದ ತಾಪಮಾನ ಇಲ್ಲ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಲಿ ಪರಿಸ್ಥಿತಿಯಲ್ಲಿ ಕಣಿವೆರಾಜ್ಯ ಜಮ್ಮು ಮತ್ತು ಕಾಶ್ಮೀರ ತೀವ್ರವಾದ ಚಳಿಯಲ್ಲಿದೆಯಾದರೂ ಇದು ವಾಡಿಕೆಗಿಂತ ಕಡಿಮೆ ಎಂದು ಹೇಳಲಾಗಿದೆ. ಗುರುವಾರ ಶ್ರೀನಗರದಲ್ಲಿ-4.7ರಷ್ಟಿದ್ದ ತಾಪಮಾನ ಶುಕ್ರವಾರ -3 ಡಿಗ್ರಿಗೆ ಏರಿಕೆಯಾಗಿದೆ. ರಾಜಧಾನಿ ಶ್ರೀನಗರದ ಐತಿಹಾಸಿಕ ದಾಲ್ ಸರೋವರ ಚಳಿಯಿಂದಾಗಿ ಹೆಪ್ಪುಗಟ್ಟಿದ್ದು, ಈ ಹೆಪ್ಪುಗಟ್ಟುವಿಕೆ ಪ್ರಕ್ರಿಯೆ ಕೂಡ ನಿಧಾನವಾಗಿ ಸಾಗಿದೆ ಎಂದು ಹೇಳಲಾಗಿದೆ.

ಕಾಶ್ಮೀರದಾದ್ಯಂತ ಹೆಚ್ಚಿನ ಸ್ಥಳಗಳಲ್ಲಿ ತಾಪಮಾನ ಋತುವಿನ ಈ ಸಮಯದಲ್ಲಿ ಇನ್ನೂ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಮುಂದುವರಿದ ಉಪ-ಶೂನ್ಯ ತಾಪಮಾನವು ದಾಲ್ ಸರೋವರವನ್ನು ಒಳಗೊಂಡಂತೆ ಹಲವಾರು ಜಲಮೂಲಗಳ ಘನೀಕರಣಕ್ಕೆ ಕಾರಣವಾಗಿದೆ. ಅವುಗಳ ಮೇಲ್ಮೈಯಲ್ಲಿ ಮಂಜುಗಡ್ಡೆಯ ತೆಳುವಾದ ಪದರವು ರೂಪುಗೊಂಡಿದೆ. ಶ್ರೀನಗರ ನಗರದಲ್ಲಿ ಬುಧವಾರ ರಾತ್ರಿ ಕನಿಷ್ಠ ತಾಪಮಾನ ಮೈನಸ್ 3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಹಿಂದಿನ ರಾತ್ರಿ ಮೈನಸ್ 3.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತೆಯೇ ವಾರ್ಷಿಕ ಅಮರನಾಥ ಯಾತ್ರೆಯ ಬೇಸ್ ಕ್ಯಾಂಪ್‌ಗಳಲ್ಲಿ ಒಂದಾಗಿರುವ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಕನಿಷ್ಠ ಮೈನಸ್ 4.5 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಾಗಿದೆ. ಇದೇ ಜಾಗದಲ್ಲಿ ಹಿಂದಿನ ರಾತ್ರಿ ಮೈನಸ್ 5.1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.  ಅಂತೆಯೇ ಉತ್ತರ ಕಾಶ್ಮೀರದ ಗುಲ್ಮಾರ್ಗ್ ಸ್ಕೀಯಿಂಗ್ ರೆಸಾರ್ಟ್‌ನಲ್ಲಿ ಹಿಂದಿನ ರಾತ್ರಿಯ ಮೈನಸ್ 4.2 ಡಿಗ್ರಿ ಸೆಲ್ಸಿಯಸ್‌ನಿಂದ ಕನಿಷ್ಠ ಮೈನಸ್ 3.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಖಾಜಿಗುಂಡ್‌ನಲ್ಲಿ ಕನಿಷ್ಠ ಮೈನಸ್ 3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕೊಕರ್ನಾಗ್ ಪಟ್ಟಣದಲ್ಲಿ ಕನಿಷ್ಠ ಮೈನಸ್ 2 ಡಿಗ್ರಿ ಸೆಲ್ಸಿಯಸ್ ಮತ್ತು ಕುಪ್ವಾರದಲ್ಲಿ ಕನಿಷ್ಠ ಮೈನಸ್ 2.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಾಶ್ಮೀರವು ಸುದೀರ್ಘವಾದ ಒಣಹವೆಯನ್ನು ಅನುಭವಿಸುತ್ತಿದೆ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಮಳೆಯ ಮೇಲೆ ಶೇಕಡಾ 79 ರಷ್ಟು ತಾಪಮಾನ ಕೊರತೆಯಿದೆ. ಕಾಶ್ಮೀರದ ಬಹುತೇಕ ಬಯಲು ಪ್ರದೇಶಗಳಲ್ಲಿ ಹಿಮಪಾತವಾಗಿಲ್ಲ. ಆದರೆ ಕಣಿವೆಯ ಮೇಲಿನ ಭಾಗಗಳು ಡಿಸೆಂಬರ್ ಅಂತ್ಯದ ವೇಳೆಗೆ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಹಿಮವನ್ನು ಪಡೆದಿವೆ ಎಂದಿ ತಜ್ಞರು ಹೇಳಿದ್ದಾರೆ.

ಲಘು ಹಿಮಾಪಾತ ಸಾಧ್ಯತೆ
ಹವಾಮಾನ ಇಲಾಖೆಯು ಶುಕ್ರವಾರದಂದು ಪ್ರತ್ಯೇಕವಾದ ಅತಿ ಎತ್ತರದ ಪ್ರದೇಶಗಳ ಮೇಲೆ ಅತ್ಯಂತ ಲಘುವಾದ ಹಿಮದ ಸಾಧ್ಯತೆಯಿದೆ ಎಂದು ಹೇಳಿದೆ. ಜನವರಿ 7 ರ ಸಂಜೆಯವರೆಗೆ ಹವಾಮಾನವು ಮುಖ್ಯವಾಗಿ ಶುಷ್ಕ ವಾತಾವರಣದಲ್ಲಿ ಉಳಿಯುತ್ತದೆ, ಜನವರಿ 8-9 ರಂದು ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಪ್ರದೇಶಗಳಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ಲಘು ಹಿಮದ ಸಾಧ್ಯತೆಯಿದೆ ಎಂದು ಅದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com