ಲಾಲು ಪ್ರಸಾದ್ ಯಾದವ್ ಕುಟುಂಬದ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ

ಉದ್ಯೋಗಕ್ಕಾಗಿ ಭೂಮಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ  ಒಟ್ಟು 4,751 ಪುಟಗಳ ಚಾರ್ಜ್ ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. 
ಮಿಸಾ ಭಾರ್ತಿ ಮತ್ತಿತರರ ಫೋಟೋಗಳು
ಮಿಸಾ ಭಾರ್ತಿ ಮತ್ತಿತರರ ಫೋಟೋಗಳು

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ  ಒಟ್ಟು 4,751 ಪುಟಗಳ ಚಾರ್ಜ್ ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. 

ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ, ಅವರ ಪುತ್ರಿಯರಾದ ಮಿಸಾ ಭಾರತಿ ಮತ್ತು ಹೇಮಾ ಯಾದವ್, ಹೃದಯಾನಂದ್ ಚೌಧರಿ ಮತ್ತು ಅಮಿತ್ ಕತ್ಯಾಲ್ ಅವರ ಹೆಸರನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಎಬಿ ಎಕ್ಸ್‌ಪೋರ್ಟ್ ಮತ್ತು ಎಕೆ ಇನ್ಫೋಸಿಸ್ಟಮ್ಸ್ ಎಂಬ ಎರಡು ಸಂಸ್ಥೆಗಳ ಮೇಲೂ ಆರೋಪ ಮಾಡಲಾಗಿದೆ.

 ಚಾರ್ಜ್ ಶೀಟ್ ಮತ್ತು ದಾಖಲೆಗಳ ಇ-ಪ್ರತಿಯನ್ನು ಇಂದೇ ಸಲ್ಲಿಸುವಂತೆ ವಿಶೇಷ ಸಿಬಿಐ ನ್ಯಾಯಾಧೀಶ ವಿಶಾಲ್ ಗೋಗ್ನೆ ಇಡಿಗೆ ಸೂಚಿಸಿದ್ದಾರೆ. ಈ ವಿಷಯವನ್ನು ಜನವರಿ 16, 2024 ರಂದು ಪರಿಗಣನೆಗೆ ಪಟ್ಟಿ ಮಾಡಲಾಗಿದೆ.

ಇಡಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮನೀಶ್ ಜೈನ್ ಮತ್ತು ವಕೀಲ ಇಶಾನ್ ಬೈಸ್ಲಾ ಅವರು ಯಾದವ್ ಕುಟುಂಬದ ಸದಸ್ಯರು ಅಪರಾಧದ ಆದಾಯದ ಫಲಾನುಭವಿಗಳು ಎಂದು ನ್ಯಾಯಾಲಯಕ್ಕೆ ತಿಳಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com