ಉತ್ತರ ಪ್ರದೇಶ: ರಾತ್ರಿ ಊಟ ಮಾಡಿ ನಿದ್ರಿಸಲು ಹೋದ 7 ಮಂದಿಯಲ್ಲಿ ಐವರು ಬೆಳಗ್ಗೆ ಹೆಣವಾಗಿ ಪತ್ತೆ!

ರಾತ್ರಿ ಊಟ ಮಾಡಿ ಮಲಗಿದ ಐವರು ಬೆಳಗ್ಗೆ ಹೆಣವಾಗಿದ್ದಾರೆ. ಒಂದೇ ಕುಟುಂಬದ ಏಳು ಜನರ ಪೈಕಿ ನಾಲ್ವರು ಬಾಲಕರು ಸೇರಿ ಐವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ನಡೆದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ
ಘಟನೆ ನಡೆದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ
Updated on

ಲಕ್ನೋ: ರಾತ್ರಿ ಊಟ ಮಾಡಿ ಮಲಗಿದ ಐವರು ಬೆಳಗ್ಗೆ ಹೆಣವಾಗಿದ್ದಾರೆ. ಒಂದೇ ಕುಟುಂಬದ ಏಳು ಜನರ ಪೈಕಿ ನಾಲ್ವರು ಬಾಲಕರು ಸೇರಿ ಐವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ನಡೆದಿದೆ.

ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರು ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಏಳು ಜನ ಮನೆಯಲ್ಲಿ ಮಲಗಿದ್ದರು. ಅವರು ಮಲಗಿದ ಕೋಣೆಯಲ್ಲಿ ಕಲ್ಲಿದ್ದಲು ಸುಟ್ಟಿದ್ದರು. ರಾತ್ರಿ ಎಲ್ಲರೂ ಮಲಗಿದ್ದಾಗ ಕಲ್ಲಿದ್ದಿಲಿನ ಹೊಗೆ ಆವರಿಸಿದೆ. ಇದೇ ವೇಳೆ ಮಲಗಿದವರು ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ಸಾವಿಗೆ ನಿಖರ ಕಾರಣ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರನೇ ದಿನ ಸಂಜೆಯಾದರೂ ಕುಟುಂಬಸ್ಥರು ಹೊರಗೆ ಬರದಿರುವುದನ್ನು ಕಂಡು ಅಕ್ಕಪಕ್ಕದ ಮನೆಯವರು ಬಾಗಿಲು ಬಡಿದಿದ್ದಾರೆ. ಎಷ್ಟು ಬಾಗಿಲು ಬಡಿದರೂ ಯಾರೂ ಹೊರಗೆ ಬರದ ಕಾರಣ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆಗ ಮನೆಯಲ್ಲಿದ್ದ ಎಲ್ಲರೂ ಪ್ರಜ್ಞೆ ಇಲ್ಲದೆ ಮಲಗಿದ್ದನ್ನು ನೋಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ ಬಳಿಕವೇ ಐವರು ಮೃತಪಟ್ಟಿರುವುದು ಗೊತ್ತಾಗಿದೆ.

ರಹೀಜುದ್ದೀನ್‌ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಇವರ ಮೂವರು ಮಕ್ಕಳು ಹಾಗೂ ಸಂಬಂಧಿಕರ ಇಬ್ಬರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮೃತರನ್ನು ಸೋನಮ್‌ (19), ವಾರಿಸ್‌ (17), ಮೇಹಕ್‌ (16), ಜೈದ್‌ (15) ಹಾಗೂ ಮಹೀರ್‌ (12) ಎಂದು ಗುರುತಿಸಲಾಗಿದೆ. ರಹೀಜುದ್ದೀನ್‌ ಅವರ ಪತ್ನಿ ಹಾಗೂ ಸಹೋದರನ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಇಂಗಾಲದ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮುಂತಾದ ಆಂಜಿತಿ ಅಥವಾ ಕಲ್ಲಿದ್ದಲು ಒಲೆಯಲ್ಲಿ ಹಾನಿಕಾರಕ ಅನಿಲಗಳನ್ನು ಸುಡುವುದು ಕೋಣೆಯನ್ನು ಮುಚ್ಚಿದರೆ, ಹೆಚ್ಚಿನ ಗಾಳಿಯು ಕೋಣೆಗೆ ಪ್ರವೇಶಿಸುವುದಿಲ್ಲ. ಈ ಅನಿಲಗಳ ನಿರಂತರ ವಿಸರ್ಜನೆಯು ಮುಚ್ಚಿದ ಕೋಣೆಯಲ್ಲಿ ಆಮ್ಲಜನಕದ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಉಸಿರುಗಟ್ಟುವಿಕೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com