ಮಹಾರಾಷ್ಟ್ರದಲ್ಲಿ ಅಟಲ್ ಸೇತು ಇಂದು ಉದ್ಘಾಟನೆ: ಭಾರತದ ಅತಿ ಉದ್ದ ಸಮುದ್ರ ಸೇತುವೆ ಬಗ್ಗೆ ಇಲ್ಲಿದೆ ಮಾಹಿತಿ...

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶುಕ್ರವಾರ ಮಹಾರಾಷ್ಟ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತುವನ್ನು ಉದ್ಘಾಟಿಸಲಿದ್ದಾರೆ. ಸುಮಾರು 17,840 ಕೋಟಿ ರೂಪಯಿ ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಸೇತು ದೇಶದ ಅತಿ ಉದ್ದದ ಸೇತುವೆ ಮತ್ತು ಉದ್ದದ ಸಮುದ್ರ ಸೇತುವೆಯಾಗಿದೆ.
ಅಟಲ್ ಸೇತು
ಅಟಲ್ ಸೇತು
Updated on

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶುಕ್ರವಾರ ಮಹಾರಾಷ್ಟ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತುವನ್ನು ಉದ್ಘಾಟಿಸಲಿದ್ದಾರೆ. ಸುಮಾರು 17,840 ಕೋಟಿ ರೂಪಯಿ ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಸೇತು ದೇಶದ ಅತಿ ಉದ್ದದ ಸೇತುವೆ ಮತ್ತು ಉದ್ದದ ಸಮುದ್ರ ಸೇತುವೆಯಾಗಿದೆ.

ಅಟಲ್ ಸೇತು ಬಗ್ಗೆ ಪ್ರಮುಖ ವಿಷಯಗಳು: ನಗರ ಸಾರಿಗೆ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಬಲಪಡಿಸುವ ಮೂಲಕ ನಾಗರಿಕರ ಚಲನಶೀಲತೆಯ ಸುಲಭತೆಯನ್ನು ಸುಧಾರಿಸುವುದು ಪ್ರಧಾನ ಮಂತ್ರಿ ಮೋದಿಯವರ ದೃಷ್ಟಿಕೋನವಾಗಿದೆ. ಇದಕ್ಕೆ ಅನುಗುಣವಾಗಿ ಮುಂಬೈ ಟ್ರಾನ್ಸ್‌ಹಾರ್ಬರ್ ಲಿಂಕ್ (MTHL) ನ್ನು ಈಗ 'ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು' ಎಂದು ಹೆಸರಿಸಲಾಗಿದೆ.

ಸೇತುವೆಗೆ ಶಂಕುಸ್ಥಾಪನೆಯನ್ನು ಪ್ರಧಾನಿಯವರು ಡಿಸೆಂಬರ್ 2016 ರಲ್ಲಿ ನೆರವೇರಿಸಿದ್ದರು. 17,840 ಕೋಟಿ ರೂಪಾಯಿ ವೆಚ್ಚದಲ್ಲಿ ಅಟಲ್ ಸೇತು ನಿರ್ಮಾಣ ಮಾಡಲಾಗಿದೆ. ಇದು 21.8 ಕಿಮೀ ಉದ್ದದ ಆರು ಪಥದ ಸೇತುವೆಯಾಗಿದ್ದು, ಸಮುದ್ರದ ಮೇಲೆ 16.5 ಕಿಮೀ ಉದ್ದ ಮತ್ತು ಭೂಮಿಯಲ್ಲಿ ಸುಮಾರು 5.5 ಕಿಮೀ ಉದ್ದವಿದೆ.

ಇದು ಭಾರತದ ಅತಿ ಉದ್ದದ ಸೇತುವೆ ಮತ್ತು ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಇದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗದ ಸಂಪರ್ಕವನ್ನು ಒದಗಿಸುತ್ತದೆ.ಇದು ಮುಂಬೈ ಮತ್ತು ನವಿ ಮುಂಬೈ ನಡುವಿನ ಪ್ರಯಾಣ ಅಂತರವನ್ನು ಕೇವಲ 20 ನಿಮಿಷಗಳಿಗೆ ಕಡಿಮೆ ಮಾಡಿದೆ, ಮೊದಲು ಪ್ರಯಾಣಕ್ಕೆ 2 ಗಂಟೆ ತೆಗೆದುಕೊಳ್ಳುತ್ತಿತ್ತು. 

ಇದು ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಇದು ಮುಂಬೈ ಬಂದರು ಮತ್ತು ಜವಾಹರಲಾಲ್ ನೆಹರು ಬಂದರು ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ.

ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತು ಕಾರುಗಳಿಗೆ ಏಕಮುಖ ಸಂಚಾರಕ್ಕೆ 250 ರೂಪಾಯಿ ಶುಲ್ಕ ವಿಧಿಸುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ. ಈಗಿರುವ ಟೋಲ್ ಸಂಗ್ರಹದ ನಿಯಮಗಳ ಪ್ರಕಾರ ಅರ್ಧದಷ್ಟು ಮೊತ್ತವನ್ನು ಮಾತ್ರ ವಿಧಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಂಪುಟ ನಿರ್ಧರಿಸಿದೆ. 

ಪ್ರಯಾಣಿಕ ಕಾರಿಗೆ ಏಕಮುಖ ಟೋಲ್ ಆಗಿ 250 ರೂಪಾಯಿ ವಿಧಿಸಲಾಗುತ್ತದೆ, ಹಿಂದಿರುಗುವ ಪ್ರಯಾಣಕ್ಕೆ ಮತ್ತು ದೈನಂದಿನ ಮತ್ತು ಆಗಾಗ್ಗೆ ಸಂಚರಿಸುವ ಪ್ರಯಾಣಿಕರಿಗೆ ಶುಲ್ಕಗಳು ವಿಭಿನ್ನವಾಗಿರುತ್ತದೆ. 17,840 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದ್ದು, 15 ಸಾವಿರ ಕೋಟಿ ರೂಪಾಯಿ ಸಾಲವಾಗಿದೆ.

ಕ್ಯಾಬಿನೆಟ್ ಪ್ರಸ್ತಾವನೆಯಲ್ಲಿ ರಾಯಗಡ ಜಿಲ್ಲೆಯ ಪನ್ವೇಲ್‌ನಿಂದ ದಕ್ಷಿಣ ಮಧ್ಯ ಮುಂಬೈನ ಸೆವ್ರಿ ನಡುವಿನ ಅಂತರವು 15 ಕಿಲೋಮೀಟರ್‌ಗಳಷ್ಟು ಕಡಿಮೆಯಾಗಲಿದೆ, ಪ್ರಯಾಣದ ಸಮಯವು ಸುಮಾರು ಎರಡು ಗಂಟೆಗಳಿಂದ 15 ರಿಂದ 20 ನಿಮಿಷಗಳಿಗೆ ಇಳಿಯುತ್ತದೆ.

ಪ್ರತಿ ಪ್ರಯಾಣಕ್ಕೆ ಇಂಧನ ವೆಚ್ಚದಲ್ಲಿ ಸುಮಾರು 500 ರೂಪಾಯಿ ಉಳಿತಾಯವಾಗಲಿದೆ. ನವಿ ಮುಂಬೈನಲ್ಲಿ 12,700 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ. ಈಸ್ಟರ್ನ್ ಫ್ರೀವೇ ಆರೆಂಜ್ ಗೇಟ್‌ನಿಂದ ಮರೈನ್ ಡ್ರೈವ್‌ಗೆ ಸಂಪರ್ಕ ಕಲ್ಪಿಸುವ ಭೂಗತ ರಸ್ತೆ ಸುರಂಗಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 9.2 ಕಿ.ಮೀ ಸುರಂಗವನ್ನು 8,700 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುವುದು.

ಮುಂಬೈನಲ್ಲಿ ಮಹತ್ವದ ಮೂಲಸೌಕರ್ಯ ಅಭಿವೃದ್ಧಿಯಾಗಲಿದ್ದು, ಆರೆಂಜ್ ಗೇಟ್ ಮತ್ತು ಮರೈನ್ ಡ್ರೈವ್ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.

ಅಟಲ್ ಸೇತು ಕುರಿತು ಇನ್ನಷ್ಟು ವಿವರಗಳು: ಇಂಜಿನಿಯರಿಂಗ್‌ ಲೋಕದ ಒಂದು ಅದ್ಭುತ ಕಲ್ಪನೆಯಾಗಿದ್ದು, 500 ಬೋಯಿಂಗ್ ವಿಮಾನಗಳ ತೂಕಕ್ಕೆ ಸಮನಾದ ಉಕ್ಕನ್ನು ಮತ್ತು ಐಫೆಲ್ ಟವರ್‌ನ ತೂಕದ 17 ಪಟ್ಟು ತೂಕವನ್ನು ನಿರ್ಮಾಣಕ್ಕೆ ಬಳಸಲಾಗಿದೆ. ಇದರ ನಿರ್ಮಾಣದಲ್ಲಿ 177,903 ಮೆಟ್ರಿಕ್ ಟನ್ ಉಕ್ಕು ಮತ್ತು 504,253 ಮೆಟ್ರಿಕ್ ಟನ್ ಸಿಮೆಂಟ್ ಬಳಸಲಾಗಿದೆ.

ಸೇತುವೆಯು ಮುಂಬೈ ಮತ್ತು ಪುಣೆ ಎಕ್ಸ್‌ಪ್ರೆಸ್‌ವೇ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಇದು ನಿರ್ಮಾಣ ಹಂತದಲ್ಲಿರುವ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. ಪ್ರತಿದಿನ 70,000 ವಾಹನಗಳು ಸೇತುವೆಯನ್ನು ಬಳಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com