ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಪುನಶ್ಚೇತನಕ್ಕೆ ಪಾಕ್ ಯೋಜನೆ: ಕಾರ್ಯಾಚರಣೆ ಆರಂಭಿಸಿದ ಸೇನೆ!

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಪುನಶ್ಚೇತನಕ್ಕೆ ಪಾಕ್ ಯೋಜನೆ ರೂಪಿಸುತ್ತಿದ್ದು, ಇದನ್ನು ನಿಗ್ರಹಿಸಲು ಭಾರತೀಯ ಸೇನೆ ಆಪರೇಷನ್ ಸರ್ವಶಕ್ತಿ ಕಾರ್ಯಾಚರಣೆಯನ್ನು ಆರಂಭಿಸಿದೆ. 
ಭಾರತೀಯ ಸೇನೆ
ಭಾರತೀಯ ಸೇನೆ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಪುನಶ್ಚೇತನಕ್ಕೆ ಪಾಕ್ ಯೋಜನೆ ರೂಪಿಸುತ್ತಿದ್ದು, ಇದನ್ನು ನಿಗ್ರಹಿಸಲು ಭಾರತೀಯ ಸೇನೆ ಆಪರೇಷನ್ ಸರ್ವಶಕ್ತಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಕೇಂದ್ರಾಡಳಿತ ಪ್ರದೇಶದ ಪೀರ್ ಪಂಜಾಲ್ ಪರ್ವತ ಶ್ರೇಣಿಗಳ ಎರಡೂ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರನ್ನು ಸೇನೆ ಟಾರ್ಗೆಟ್ ಮಾಡಲಿದೆ. 

ಇತ್ತೀಚಿನ ದಿನಗಳಲ್ಲಿ, ಪಾಕಿಸ್ತಾನಿ ಛದ್ಮ ಭಯೋತ್ಪಾದಕ ಗುಂಪುಗಳು ದಕ್ಷಿಣ ಪೀರ್ ಪಂಜಾಲ್ ಶ್ರೇಣಿಗಳಲ್ಲಿ ವಿಶೇಷವಾಗಿ ರಜೌರಿ ಪೂಂಚ್ ಸೆಕ್ಟರ್‌ನಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿವೆ. ಅಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಸುಮಾರು 20 ಸೈನಿಕರು ಸಾವನ್ನಪ್ಪಿದ್ದಾರೆ. ಡಿಸೆಂಬರ್ 21 ರಂದು 4 ಸೈನಿಕರು ಸಾವನ್ನಪ್ಪಿದ್ದರು. ಡೇರಾ ಕಿ ಗಲಿ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೇನೆಯ ಯೋಧರು ಹತರಾಗಿದ್ದರು.

"ಆಪರೇಷನ್ ಸರ್ವಶಕ್ತಿಯು ಪೀರ್ ಪಂಜಾಲ್ ಶ್ರೇಣಿಗಳ ಎರಡೂ ಬದಿಗಳಿಂದ ಸಂಯೋಜಿತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ನಡೆಸುವುದು, ಅಲ್ಲಿ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಮತ್ತು ನಗ್ರೋಟಾ ಪ್ರಧಾನ ಕಛೇರಿಯ ವೈಟ್ ನೈಟ್ ಕಾರ್ಪ್ಸ್ ಏಕಕಾಲದಲ್ಲಿ ಕಾರ್ಯಾಚರಣೆಗಳನ್ನು ನಡೆಸುತ್ತದೆ" ಎಂದು ಭದ್ರತಾ ಪಡೆಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸಿಆರ್‌ಪಿಎಫ್, ವಿಶೇಷ ಕಾರ್ಯಾಚರಣೆ ಗುಂಪು ಮತ್ತು ಗುಪ್ತಚರ ಸಂಸ್ಥೆಗಳು ಕೇಂದ್ರಾಡಳಿತ ಪ್ರದೇಶದಲ್ಲಿ, ವಿಶೇಷವಾಗಿ ರಜೌರಿ ಪೂಂಚ್ ಸೆಕ್ಟರ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಪಾಕಿಸ್ತಾನದ ಯೋಜನೆಗಳನ್ನು ತಡೆಯಲು ನಿಕಟ ಸಮನ್ವಯದಲ್ಲಿ ಕೆಲಸ ಮಾಡುತ್ತವೆ ಎಂದು ಸೇನಾಧಿಕಾರಿಗಳು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com