ಉತ್ತರ ಪ್ರದೇಶ: ಗೋರಕ್ಷಕ ಗುಂಪಿನ ಮುಖ್ಯಸ್ಥನ ವಿರುದ್ಧ ಗೋಹತ್ಯೆ ಪ್ರಕರಣ!

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತೆ ಪ್ರಭಾ ಅತ್ರೆ (92) ಪುಣೆಯಲ್ಲಿ ಇಂದು ನಿಧನರಾದರು. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಗೋರಕ್ಷಕ ಗುಂಪಿನ ಮುಖ್ಯಸ್ಥನೊಬ್ಬನ ವಿರುದ್ಧ ಗೋಹತ್ಯೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈತ ಗೋಹತ್ಯೆಯಲ್ಲಿ ತೊಡಗಿದ್ದ ಎಂದು ತಿಳಿದುಬಂದಿದೆ. ಶುಕ್ರವಾರದಂದು ಗೋ ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿದ ಬಳಿಕ ಬರೇಲಿಯಲ್ಲಿ ಗೋರಕ್ಷಕ ಗುಂಪಿನ ಮುಖ್ಯಸ್ಥನೊಬ್ಬ ಇದರಲ್ಲಿ ತೊಡಗಿದ್ದ ಮಾಹಿತಿ ಬಹಿರಂಗವಾಗಿದೆ. ಗೋರಕ್ಷಕ ಕರ್ಣಿ ಸೇನಾದ ಬರೇಲಿ ವಿಭಾಗದ ಮುಖ್ಯಸ್ಥ ರಾಹುಲ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈತ ಗೋ ಕಳ್ಳಸಾಗಣೆ ಮಾಡುತ್ತಿದ್ದ ಮೂವರ ಜೊತೆಗಿದ್ದ ಎಂದು ತಿಳಿದುಬಂದಿದೆ.

ಇಲ್ಲಿನ ಭೋಜಿಪುರದ ದೇವರನಿಯಾ ನದಿಯ ಬಳಿ ಸಿಂಗ್ ಇತರ ನಾಲ್ವರೊಂದಿಗೆ ಗೋಹತ್ಯೆ ಮಾಡುತ್ತಿದ್ದ ಎಂದು ಆರೋಪಿಸಿ ಪೊಲೀಸರು ಆ ಪ್ರದೇಶವನ್ನು ಮುತ್ತಿಗೆ ಹಾಕಿದರು ಎಂದು ಸರ್ಕಲ್ ಆಫೀಸರ್ ಹರ್ಷ್ ಮೋದಿ ತಿಳಿಸಿದ್ದಾರೆ.

ಆರೋಪಿಗಳು ಶರಣಾಗಲು ನಿರಾಕರಿಸಿ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಎನ್‌ಕೌಂಟರ್‌ನ ನಂತರ ಪೊಲೀಸರು ಪ್ರತಿದಾಳಿಗಾಗಿ ಗುಂಡು ಹಾರಿಸಿದ್ದು, ಮೊಹಮ್ಮದ್ ಸಯೀದ್ ಖಾನ್, ದೇವೇಂದ್ರ ಕುಮಾರ್ ಮತ್ತು ಅಕ್ರಮ್ ಎಂಬ ಮೂವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com