ಚೀನಾ-ಭಾರತ ಸೇನಾ ಸಿಬ್ಬಂದಿಗಳ ನಡುವಿನ ಚಕಮಕಿಗಳ ಹೆಚ್ಚು ಪ್ರಕರಣಗಳು ಬೆಳಕಿಗೆ

ಗಡಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಭಾರತ- ಚೀನಾ ನಡುವೆ ಚಕಮಕಿ ನಡೆದಿರುವ ಕನಿಷ್ಟ ಎರಡು ಹಳೆಯ ಪ್ರಕರಣಗಳು ಈಗ ಬೆಳಕಿಗೆ ಬಂದಿದೆ.
ಚೀನಾ- ಭಾರತ ಗಡಿ (ಸಾಂಕೇತಿಕ ಚಿತ್ರ)
ಚೀನಾ- ಭಾರತ ಗಡಿ (ಸಾಂಕೇತಿಕ ಚಿತ್ರ)
Updated on

ನವದೆಹಲಿ: ಗಡಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಭಾರತ- ಚೀನಾ ನಡುವೆ ಚಕಮಕಿ ನಡೆದಿರುವ ಕನಿಷ್ಟ ಎರಡು ಹಳೆಯ ಪ್ರಕರಣಗಳು ಈಗ ಬೆಳಕಿಗೆ ಬಂದಿದೆ.

ಭಾರತೀಯ ಸೇನಾ ಸಿಬ್ಬಂದಿಗಳು ಶೌರ್ಯ ಪ್ರಶಸ್ತಿಗಳಿಗಾಗಿ ಉಲ್ಲೇಖಿಸಿರುವುದರಿಂದ ಈ ಮಾಹಿತಿ ಬಹಿರಂಗವಾಗಿದೆ.

ಕಳೆದ ವಾರ ಸೇನೆಯ ವೆಸ್ಟರ್ನ್ ಕಮಾಂಡ್‌ನ ನ ಸಮಾರಂಭವೊಂದರಲ್ಲ ಆದ ಉಲ್ಲೇಖಗಳು, LAC ಉದ್ದಕ್ಕೂ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಸೈನಿಕರ ಆಕ್ರಮಣಕಾರಿ ವರ್ತನೆಗೆ ಭಾರತೀಯ ಪಡೆಗಳು ಹೇಗೆ ದೃಢವಾಗಿ ಪ್ರತಿಕ್ರಿಯಿಸಿದವು ಎಂಬುದರ ಸಂಕ್ಷಿಪ್ತ ವಿವರಗಳನ್ನು ಒದಗಿಸಿದೆ.

ಚಂಡಿಮಂದಿರದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ಸೇನೆಯ ವೆಸ್ಟರ್ನ್ ಕಮಾಂಡ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಶೌರ್ಯ ಪ್ರಶಸ್ತಿಯ ವ್ಯಾಖ್ಯಾನವನ್ನು ಒಳಗೊಂಡ ಜನವರಿ 13 ಸಮಾರಂಭದ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ ಆದರೆ ಸೋಮವಾರ ಅದನ್ನು ನಿಷ್ಕ್ರಿಯಗೊಳಿಸಿದೆ.

ಉಲ್ಲೇಖಗಳಲ್ಲಿ ಉಲ್ಲೇಖಿಸಲಾದ ಘಟನೆಗಳು ಸೆಪ್ಟೆಂಬರ್ 2021 ಮತ್ತು ನವೆಂಬರ್ 20 ರ ನಡುವೆ ನಡೆದಿವೆ. ಈ ಬಗ್ಗೆ ಸೇನೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com