ತಮಿಳುನಾಡು ಜಲ್ಲಿಕಟ್ಟು: ಗೂಳಿ ಹಿಡಿಯುವ ಸ್ಪರ್ಧೆಯಲ್ಲಿ 2 ಸಾವು, 70 ಮಂದಿಗೆ ಗಾಯ!

ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಬುಧವಾರ ನಡೆದ ಜಲ್ಲಿಕಟ್ಟು ಕ್ರೀಡೆಯ ಮಂಜುವಿರಾಟ್ಟು ವೇಳೆ ಇಬ್ಬರ ಪೈಕಿ ಅಪ್ರಾಪ್ತರೊಬ್ಬ ಸಾವನ್ನಪ್ಪಿದ್ದು, 70 ಮಂದಿ ಗಾಯಗೊಂಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಬುಧವಾರ ನಡೆದ ಜಲ್ಲಿಕಟ್ಟು ಕ್ರೀಡೆಯ ಮಂಜುವಿರಾಟ್ಟು ವೇಳೆ ಇಬ್ಬರ ಪೈಕಿ ಅಪ್ರಾಪ್ತರೊಬ್ಬ ಸಾವನ್ನಪ್ಪಿದ್ದು, 70 ಮಂದಿ ಗಾಯಗೊಂಡಿದ್ದಾರೆ. 

ಮೃತನನ್ನು ವಲೈಯಂಪಟ್ಟಿ ಮೂಲದ 11 ವರ್ಷದ ರವಿ ಮತ್ತು 35 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಆಶಾ ಅಜಿತ್, ಕ್ಷೇತ್ರದ ಸಂಸದ ಕಾರ್ತಿ ಪಿ.ಚಿದಂಬರಂ, ಡಿಎಂಕೆ ಸಚಿವ ಪೆರಿಯಕರುಪ್ಪನ್ ಅವರ ಸಮ್ಮುಖದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ 271 ಹೋರಿಗಳು ಮತ್ತು 81 ಗೂಳಿ ಹಿಡಿಯುವವರು ಭಾಗವಹಿಸಿದ್ದರು.

ಅಲಂಗನಲ್ಲೂರು ಜಲ್ಲಿಕಟ್ಟುನಲ್ಲಿ 3 ಮಂದಿ ಗಾಯ
ಮಧುರೈ ಜಿಲ್ಲೆಯ ಅಲಂಗನಲ್ಲೂರು ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಗೂಳಿ ಹಿಡಿಯುವವನು, ಓರ್ವ ಪೊಲೀಸ್ ಸಿಬ್ಬಂದಿ ಮತ್ತು ಓರ್ವ ಗೂಳಿಯ ಮಾಲೀಕ ಮೂವರು ಗಾಯಗೊಂಡಿದ್ದಾರೆ. ಒಟ್ಟು 1,200 ಹೋರಿಗಳು ಮತ್ತು 800 ಗೂಳಿ ಹಿಡಿಯುವವರು ಜಲ್ಲಿಕಟ್ಟು ಕಾರ್ಯಕ್ರಮದ ಭಾಗವಹಿಸಿದ್ದರು.

ಸುರಕ್ಷತೆಯ ದೃಷ್ಠಿಯಿಂದಾಗಿ 90 ಸಿಬ್ಬಂದಿಯನ್ನು ಒಳಗೊಂಡ ವೈದ್ಯಕೀಯ ತಂಡ, 70 ಸಿಬ್ಬಂದಿಯನ್ನು ಒಳಗೊಂಡ ಪಶುವೈದ್ಯರ ತಂಡ ಮತ್ತು ರೆಡ್‌ಕ್ರಾಸ್ ಸ್ವಯಂಸೇವಕರು ಆಂಬ್ಯುಲೆನ್ಸ್‌ಗಳೊಂದಿಗೆ ಸ್ಥಳದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com