ರಾಮಮಂದಿರ ಉದ್ಘಾಟನೆ: 'ನಮ್ಮೆಲ್ಲರಿಗೂ ಅತ್ಯಂತ ಭಾವನಾತ್ಮಕ ಕ್ಷಣ, 500 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯ'- ಯೋಗಿ ಆದಿತ್ಯಾನಾಥ್

ರಾಮಮಂದಿರ ಉದ್ಘಾಟನೆ ನಮ್ಮೆಲ್ಲರಿಗೂ ಅತ್ಯಂತ ಭಾವನಾತ್ಮಕ ಕ್ಷಣವಾಗಿದ್ದು, 500 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಸಿಎಂ ಯೋಗಿ ಆದಿತ್ಯಾನಾಥ್
ಅಯೋಧ್ಯೆಯಲ್ಲಿ ಸಿಎಂ ಯೋಗಿ ಆದಿತ್ಯಾನಾಥ್

ಅಯೋಧ್ಯೆ: ರಾಮಮಂದಿರ ಉದ್ಘಾಟನೆ ನಮ್ಮೆಲ್ಲರಿಗೂ ಅತ್ಯಂತ ಭಾವನಾತ್ಮಕ ಕ್ಷಣವಾಗಿದ್ದು, 500 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯಾನಾಥ್, ನಮ್ಮೆಲ್ಲರಿಗೂ ಇದು ಭಾವನಾತ್ಮಕ ಕ್ಷಣವಾಗಿದೆ. ಇದು 500 ವರ್ಷಗಳ ಕಾಯುವಿಕೆಯ ನಂತರ ಬಂದಿದ್ದು, ಪ್ರಭು ಶ್ರೀರಾಮರು ಮತ್ತೆ ಅಯೋಧ್ಯೆಯಲ್ಲಿ ವಿರಾಜಮಾನರಾಗಿದ್ದಾರೆ ಎಂದರು.

ಅಂತೆಯೇ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡ ನನಗೆ ನನ್ನ ಹೃದಯದಲ್ಲಿ ವ್ಯಕ್ತಪಡಿಸಲು ಪದಗಳಿಲ್ಲದ ಕೆಲವು ಭಾವನೆಗಳಿವೆ. ಪ್ರತಿಯೊಬ್ಬರೂ ಭಾವನಾತ್ಮಕ ಮತ್ತು ಸಂತೋಷದಿಂದಿದ್ದಾರೆ. ಈ ಐತಿಹಾಸಿಕ ಕ್ಷಣದಲ್ಲಿ, ದೇಶದ ಪ್ರತಿಯೊಂದು ನಗರ ಮತ್ತು ಹಳ್ಳಿಗಳು ಅಯೋಧ್ಯೆಯಾಗಿ ಮಾರ್ಪಟ್ಟಿವೆ ಮತ್ತು ಪ್ರತಿ ಹಾದಿಯು ರಾಮ ಜನ್ಮಭೂಮಿಯತ್ತ ಸಾಗುತ್ತಿದೆ. ಇಡೀ ದೇಶವು ಭಗವಾನ್ ರಾಮನ ಭಕ್ತಿಯಲ್ಲಿ ಮುಳುಗಿದೆ. "ನಾವು 'ತ್ರೇತಾ ಯುಗ'ಕ್ಕೆ ಬಂದಿದ್ದೇವೆ ಎಂದು ತೋರುತ್ತಿದೆ" ಎಂದು ಅವರು ಹೇಳಿದರು.

ಸಪ್ತಪುರಿಗಳಲ್ಲಿ ಶ್ರೇಷ್ಠವಾದ ಭಗವಾನ್ ಶ್ರೀರಾಮನ ದ್ಯೋತಕ ಸ್ಥಳವಾದ ಶ್ರೀ ಅಯೋಧ್ಯಾ ಧಾಮದಲ್ಲಿ ಶ್ರೀ ರಾಮಲಲ್ಲಾರ ನೂತನ ಮೂರ್ತಿಯ ಪ್ರಾಣ ಪ್ರತಿಷ್ಠೆಯ ಶುಭ ಸಂದರ್ಭವನ್ನು ವೀಕ್ಷಿಸಲು ಆಗಮಿಸಿರುವ ಎಲ್ಲಾ ಅತಿಥಿ ಗಣ್ಯರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಮತ್ತು ಅಭಿನಂದಿಸುತ್ತೇವೆ. ಜೈ ಸಿಯಾ ರಾಮ್! ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com