ಅಸ್ಸಾಂ: ದೇವಾಲಯ ಪ್ರವೇಶಿಸದಂತೆ ತಡೆ! ಯಾರು, ಯಾವಾಗ ಭೇಟಿ ನೀಡಬೇಕೆಂದು ಪ್ರಧಾನಿ ನಿರ್ಧರಿಸುತ್ತಾರೆಯೇ- ರಾಹುಲ್ 

ಅಸ್ಸಾಂನ ಹೈಬೋರಗಾಂವ್‌ನಲ್ಲಿ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶಂಕರ ದೇವ ಸತ್ರ ದೇವಸ್ಥಾನಕ್ಕೆ ಭೇಟಿ ನೀಡಲು ಅಧಿಕಾರಿಗಳು ಅನುಮತಿ ನೀಡದ ನಂತರ ಹೈ ಡ್ರಾಮಾ ನಡೆಯಿತು. ಗಾಂಧಿ ಮತ್ತಿತರರನ್ನು ಮುಂದಿನ ಯಾವುದೇ ಪ್ರಕ್ರಿಯೆ ನಡೆಯದಂತೆ ಅಲ್ಲಿಯೇ ತಡೆಯಲಾಯಿತು.
ಧರಣಿಯಲ್ಲಿ ರಾಹುಲ್ ಗಾಂಧಿ
ಧರಣಿಯಲ್ಲಿ ರಾಹುಲ್ ಗಾಂಧಿ

ನಾಗಾಂವ್: ಅಸ್ಸಾಂನ ಹೈಬೋರಗಾಂವ್‌ನಲ್ಲಿ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶಂಕರ ದೇವ ಸತ್ರ ದೇವಸ್ಥಾನಕ್ಕೆ ಭೇಟಿ ನೀಡಲು ಅಧಿಕಾರಿಗಳು ಅನುಮತಿ ನೀಡದ ನಂತರ ಹೈ ಡ್ರಾಮಾ ನಡೆಯಿತು. ಗಾಂಧಿ ಮತ್ತಿತರರನ್ನು ಮುಂದಿನ ಯಾವುದೇ ಪ್ರಕ್ರಿಯೆ ನಡೆಯದಂತೆ ಅಲ್ಲಿಯೇ ತಡೆಯಲಾಯಿತು.

ಭಾರತ್ ಜೋಡೋ ನ್ಯಾಯ ಯಾತ್ರೆ ಪ್ರಾರಂಭಿಸುವ ಮುನ್ನಾ ಸ್ಥಳೀಯ ದೇವರಿಗೆ ಪೂಜೆ ಸಲ್ಲಿಸಲು ನಿರ್ಧರಿಸಲಾಗಿತ್ತು.  ನಂತರ ದೇವಸ್ಥಾನಕ್ಕೆ ಭೇಟಿ ನೀಡಲು ಗಾಂಧಿಗೆ ಅನುಮತಿ ನಿರಾಕರಿಸಿದ್ದನ್ನು ವಿರೋಧಿಸಿ ಮಹಿಳಾ ಕಾಂಗ್ರೆಸ್ ಮುಖಂಡರು ಧರಣಿ ಕುಳಿತರು. ರಾಹುಲ್ ಕೂಡಾ ಇದರಲ್ಲಿ ಪಾಲ್ಗೊಂಡರು. 

ಈ ಮಧ್ಯೆ ಮಧ್ಯಾಹ್ನ 3 ಗಂಟೆಗೆ ಮಾತ್ರ ದೇವಾಲಯಕ್ಕೆ ಭೇಟಿ ನೀಡಲು ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಗುಲಕ್ಕೆ ಭೇಟಿ ನೀಡದಂತೆ ತಮ್ಮನ್ನು ಏಕೆ ತಡೆದಿದ್ದಾರೆ ಎಂದು ಗಾಂಧಿ ಪೊಲೀಸರನ್ನು ಪ್ರಶ್ನಿಸಿದ್ದಾರೆ. ದೇವಸ್ಥಾನಕ್ಕೆ ಯಾವಾಗ, ಯಾರು ಭೇಟಿ ನೀಡಬೇಕು ಎಂದು ಪ್ರಧಾನಿ ನಿರ್ಧರಿಸುತ್ತಾರೆಯೇ ಎಂದು ರಾಹುಲ್ ಕಿಡಿಕಾರಿದ್ದಾರೆ. ನಾವು ಯಾವುದೇ ಸಮಸ್ಯೆಗಳನ್ನು ಸೃಷ್ಟಿಸಲು ಬಯಸುವುದಿಲ್ಲ, ಕೇವಲ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ಗಾಂಧಿ ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದಾರೆ.

ಶಂಕರದೇವ ಸತ್ರ ದೇವಸ್ಥಾನದ ಸುತ್ತ ಬಿಗಿ ಭದ್ರತೆ, ಭಾರೀ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ರಸ್ತೆ ಬಂದ್ ಮಾಡಲಾಗಿದೆ. ದೇವಸ್ಥಾನದ ಸ್ಥಳದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಹೈಬೋರಗಾಂವ್‌ನ ಆಚೆಗೆ ಸ್ಥಳೀಯ ಸಂಸದ ಮತ್ತು ಶಾಸಕರನ್ನು ಹೊರತುಪಡಿಸಿ ಯಾವುದೇ ಕಾಂಗ್ರೆಸ್ ನಾಯಕರಿಗೆ ಪ್ರಯಾಣಿಸಲು ಅವಕಾಶ ನೀಡಿಲ್ಲ. ಮಾಧ್ಯಮ ತಂಡಕ್ಕೂ ಹೈಬೋರಗಾಂವ್‌ನಿಂದ ಆಚೆಗೆ ಪ್ರಯಾಣಿಸಲು ಬಿಡಲಿಲ್ಲ.

ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರಧಾನಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಅವಕಾಶ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಸೇವಾದಳದ ಮುಖ್ಯಸ್ಥ ಲಾಲ್ಜಿ ದೇಸಾಯಿ ಹೇಳಿದ್ದಾರೆ. ಇದು ಘೋರವಾಗಿದೆ. ದೇಶದಲ್ಲಿ ಯಾರು ಯಾವ ಸಮಯದಲ್ಲಿ ಪ್ರಾರ್ಥನೆ ಮಾಡಬೇಕೆಂದು ಪ್ರಧಾನಿ ನಿರ್ಧರಿಸುವುದು ದುರದೃಷ್ಟಕರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com