ThinkEdu: ಉಚಿತ ಪಡಿತರ ನೀಡುವುದರಿಂದ ಬಡತನ ನಿರ್ಮೂಲನೆ ಸಂಕಲ್ಪದ ಮೇಲೆ ಪರಿಣಾಮ ಬೀರುವುದಿಲ್ಲ- ಹರ್ದೀಪ್ ಸಿಂಗ್ ಪುರಿ

ಕೇಂದ್ರ ವಸತಿ, ನಗರ ವ್ಯವಹಾರಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಚೆನ್ನೈಯಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸುದ್ದಿ ಸಂಸ್ಥೆ ಆಯೋಜಿಸಿರುವ 13 ನೇ ಥಿಂಕ್‌ಎಡು ಸಮ್ಮೇಳನದ ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸಿ ಹಲವು ವಿಚಾರಗಳ ಕುರಿತು ಮಾತನಾಡಿದರು.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಚೆನ್ನೈ: ಕೇಂದ್ರ ವಸತಿ, ನಗರ ವ್ಯವಹಾರಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಚೆನ್ನೈಯಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸುದ್ದಿ ಸಂಸ್ಥೆ ಆಯೋಜಿಸಿರುವ 13 ನೇ ಥಿಂಕ್‌ಎಡು ಸಮ್ಮೇಳನದ ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸಿ ಹಲವು ವಿಚಾರಗಳ ಕುರಿತು ಮಾತನಾಡಿದರು.

2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ವಿವರಿಸಿದರು. ಅಧಿವೇಶನ - 'ದಿ ಪ್ರಾಮಿಸ್ ಆಫ್ ಗ್ಯಾನ್: ವಿಕ್ಷಿತ್ ಭಾರತ್' - ಲೇಖಕ ಮತ್ತು ವಿಶ್ಲೇಷಕ ಶಂಕರ್ ಅಯ್ಯರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೀವು ಶೌಚಾಲಯಗಳನ್ನು ನಿರ್ಮಿಸಿದಾಗ, ಒಟ್ಟು 11 ಕೋಟಿಗೂ ಅಧಿಕ ಮೊತ್ತವನ್ನು ಒದಗಿಸಿ, ಅದು ಹೆಣ್ಣು ಮಗುವಿನ ಘನತೆಯನ್ನು ಹೆಚ್ಚಿಸುತ್ತದೆ. ಅಂತೆಯೇ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ನಾವು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೈಗೆಟುಕುವ ಮನೆಗಳನ್ನು ನೀಡುತ್ತೇವೆ. ಮುಖ್ಯವಾಗಿ, ಆಸ್ತಿಯ ಟೈಟಲ್ ಮನೆಯ ಮಹಿಳೆಯ ಹೆಸರಿನಲ್ಲಿದೆ. ಇದು ಮೂಲಭೂತ ವ್ಯತ್ಯಾಸವನ್ನು ಸೂಚಿಸುತ್ತದೆ ಎಂದು ಅವರು ಮೋದಿ ಸರ್ಕಾರದ ಯೋಜನೆಗಳನ್ನು ವಿವರಿಸುತ್ತಾ ಹೇಳಿದರು.

ಬೀದಿಬದಿ ವ್ಯಾಪಾರಿಗಳಿಗೆ ಸ್ವಾನಿಧಿ ಯೋಜನೆಯ ಯಶಸ್ಸನ್ನು ಎತ್ತಿ ತೋರಿಸಿದರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡದವರು ಸೇರಿದಂತೆ ಶೇಕಡಾ 43ರಷ್ಟು ಫಲಾನುಭವಿಗಳು ಮಹಿಳೆಯರಾಗಿದ್ದಾರೆ ಎಂದರು. 

ಆರ್ಥಿಕ ಬೆಳವಣಿಗೆಯೊಂದಿಗೆ ಬಡತನ ನಿರ್ಮೂಲನೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಪುರಿ, ಶಿಕ್ಷಣಕ್ಕೆ ಸರ್ಕಾರದ ಬದ್ಧತೆಯನ್ನು ವಿವರಿಸಿದರು. ಜ್ಞಾನ-ಆಧಾರಿತ ಸಮಾಜದ ಕಡೆಗೆ ಭಾರತದ ಪರಿವರ್ತನೆಗೆ ಒತ್ತು ನೀಡಿದರು. ದಿನಕ್ಕೆ ಮೂರು ಹೊತ್ತಿನ ಊಟಕ್ಕೆ 80 ಕೋಟಿ ಜನತೆಗೆ ಪಡಿತರವನ್ನು ಒದಗಿಸುವುದರಿಂದ ಬಡತನ ನಿರ್ಮೂಲನೆ ಪ್ರಯತ್ನಗಳನ್ನು ದುರ್ಬಲಗೊಳಿಸುವುದಿಲ್ಲ ಎಂದು ಅವರು ಸಾಮಾಜಿಕ ಕಲ್ಯಾಣ ಕ್ರಮಗಳನ್ನು ಸಮರ್ಥಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com