ಉತ್ತರಾಖಂಡ: ಮದರಸಾಗಳಲ್ಲಿ ಶ್ರೀರಾಮನ ಕುರಿತ ಅಧ್ಯಯನಕ್ಕೆ ಅವಕಾಶ

ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ದೇಶಾದ್ಯಂತ ರಾಮನ ಕುರಿತ ವಿಚಾರಗಳು ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವಂತೆಯೇ ಅತ್ತ ಉತ್ತರಾಖಂಡದಲ್ಲಿ ಮದರಸಾಗಳಲ್ಲಿ ರಾಮ ದೇವರ ಕುರಿತ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಮದರಸಾದಲ್ಲಿ ರಾಮನ ಅಧ್ಯಯನ
ಮದರಸಾದಲ್ಲಿ ರಾಮನ ಅಧ್ಯಯನ
Updated on

ಡೆಹ್ರಾಡೂನ್: ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ದೇಶಾದ್ಯಂತ ರಾಮನ ಕುರಿತ ವಿಚಾರಗಳು ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವಂತೆಯೇ ಅತ್ತ ಉತ್ತರಾಖಂಡದಲ್ಲಿ ಮದರಸಾಗಳಲ್ಲಿ ರಾಮ ದೇವರ ಕುರಿತ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಹೌದು.. ಉತ್ತರಾಖಂಡದ ಮದರಸಾಗಳಲ್ಲೂ (Uttarakhand Madrasa) ಶ್ರೀರಾಮನ (Lord Ram) ಕುರಿತು ಅಧ್ಯಯನ ನಡೆಯಬೇಕು ಎಂದು ಹೊಸ ಪಠ್ಯವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಆ ಮೂಲಕ ಇನ್ನು ಮುಸ್ಲಿಂ ವಿದ್ಯಾರ್ಥಿಗಳು ಕೂಡ ರಾಮನ ಕುರಿತು ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. 

ಈ ಕುರಿತು ಉತ್ತರಾಖಂಡ ವಕ್ಫ್‌ ಬೋರ್ಡ್‌ ಚೇರ್ಮನ್‌ ಆಗಿರುವ ಶಾದಾಬ್‌ ಶಾಮ್ಸ್‌ ಅವರೇ ಮಾಹಿತಿ ನೀಡಿದ್ದು, “ಮದ್ರಸಾ ಆಧುನೀಕರಣ ಯೋಜನೆಯ ಭಾಗವಾಗಿ ಇನ್ನು ಮುಂದೆ ಉತ್ತರಾಖಂಡದ ಮದರಸಾಗಳಲ್ಲೂ ಶ್ರೀರಾಮನ ಕುರಿತ ಪಠ್ಯಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಮಾರ್ಚ್‌ನಿಂದ ಮುಸ್ಲಿಂ ವಿದ್ಯಾರ್ಥಿಗಳು ಪ್ರವಾದಿ ಮೊಹಮ್ಮದರ ಜತೆಗೆ ಶ್ರೀರಾಮನ ಕುರಿತು ಕೂಡ ಅಧ್ಯಯನ ಮಾಡಲಿದ್ದಾರೆ” ಎಂದು ತಿಳಿಸಿದ್ದಾರೆ. 

ಶಾದಾಬ್‌ ಶಾಮ್ಸ್‌ ಅವರು ಬಿಜೆಪಿ ಮುಖಂಡರೂ ಆಗಿದ್ದು, ಅವರು ಮದರಸಾಗಳಲ್ಲಿ ಬೋಧನೆ ಮಾಡುವ ಮೌಲ್ವಿಗಳನ್ನೂ ಒಪ್ಪಿಸಿದ್ದಾರೆ. ಧರ್ಮ, ಜಾತಿಯ ಸಂಕೋಲೆಗಳು ಇಲ್ಲದೆಯೇ ರಾಮನನ್ನು ಆರಾಧಿಸಬಹುದು. ಆತನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂಬ ಮನೋಭಾವದಿಂದ ಶಾದಾಬ್‌ ಶಾಮ್ಸ್‌ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. 

ಅಂದಹಾಗೆ ಉತ್ತರಾಖಂಡದ ವಕ್ಫ್‌ ಬೋರ್ಡ್‌ ವ್ಯಾಪ್ತಿಗೆ ಸುಮಾರು 117 ಮದರಸಾಗಳು ಬರುತ್ತವೆ. ಡೆಹ್ರಾಡೂನ್, ಹರಿದ್ವಾರ, ಉಧಾಮ್‌ ಸಿಂಗ್‌ ನಗರ ಹಾಗೂ ನೈನಿತಾಲ್‌ ಜಿಲ್ಲೆ ಸೇರಿ ಹಲವೆಡೆ ವಕ್ಫ್‌ ಬೋರ್ಡ್‌ ವ್ಯಾಪ್ತಿಯ ಮದರಸಾಗಳಲ್ಲಿ ರಾಮನ ಕುರಿತ ಅಧ್ಯಾಯಗಳನ್ನು ಸೇರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಶಾದಾಬ್‌ ಶಾಮ್ಸ್‌ ಅವರ ಈ ನಿರ್ಧಾರ ಧಾರ್ಮಿಕ ಸೌಹಾರ್ದತೆಯ ಸಂಕೇತವೂ ಆಗಿದೆ ಎನ್ನಲಾಗುತ್ತಿದೆ.

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆಗೊಂಡಿದೆ. ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ತೆರಳುತ್ತಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com