'ಶ್ರೀರಾಮನ ಆಡಳಿತವು ಸಂವಿಧಾನ ರಚನೆಕಾರರಿಗೆ ಸ್ಫೂರ್ತಿಯ ಮೂಲವಾಗಿತ್ತು': ಪ್ರಧಾನಿ ಮೋದಿ ಮನದ ಮಾತು

ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮವು ಭಾರತ ದೇಶದ ಕೋಟ್ಯಂತರ ಜನರನ್ನು ಒಟ್ಟುಗೂಡಿಸಿತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅಯೋಧ್ಯೆ ರಾಮಮಂದಿರ ಕಾರ್ಯಕ್ರಮದ ಸಮಯದಲ್ಲಿ ದೇಶದ ಸಾಮೂಹಿಕ ಶಕ್ತಿಯ ಗೋಚರವಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವ ದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮವು ಭಾರತ ದೇಶದ ಕೋಟ್ಯಂತರ ಜನರನ್ನು ಒಟ್ಟುಗೂಡಿಸಿತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅಯೋಧ್ಯೆ ರಾಮಮಂದಿರ ಕಾರ್ಯಕ್ರಮದ ಸಮಯದಲ್ಲಿ ದೇಶದ ಸಾಮೂಹಿಕ ಶಕ್ತಿಯ ಗೋಚರವಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. 

ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಾನ್ ರಾಮನ ಆಡಳಿತವು ಸಂವಿಧಾನ ತಯಾರಕರಿಗೆ ಸ್ಫೂರ್ತಿಯ ಮೂಲವಾಗಿದೆ. ಅದಕ್ಕಾಗಿಯೇ ಜನವರಿ 22 ರಂದು ಅಯೋಧ್ಯೆಯಲ್ಲಿ ನಾನು 'ದೇವರಿಂದ ದೇಶ' ಮತ್ತು 'ರಾಮನಿಂದ ರಾಷ್ಟ್ರ' ಬಗ್ಗೆ ಮಾತನಾಡಿದ್ದೆ ಎಂದು ಹೇಳಿದರು. 

ಅಯೋಧ್ಯೆ ಕಾರ್ಯಕ್ರಮದಿಂದ ತಿಳಿದುಬಂದ ವಿಷಯವೆಂದರೆ ಎಲ್ಲರ ಭಾವನೆಯೂ ಒಂದೇ, ಎಲ್ಲರ ಭಕ್ತಿಯೂ ಒಂದೇ, ಎಲ್ಲರ ಮಾತಿನಲ್ಲೂ ರಾಮ, ಎಲ್ಲರ ಹೃದಯದಲ್ಲೂ ರಾಮ ಇದ್ದಾನೆ ಎಂದು ಗೊತ್ತಾಗಿದೆ ಎಂದರು. 

ಈ ಅವಧಿಯಲ್ಲಿ, ಅನೇಕ ಜನರು ರಾಮ ಭಜನೆಗಳನ್ನು ಹಾಡಿ ಭಗವಾನ್ ರಾಮನಿಗೆ ಅರ್ಪಿಸಿದರು. ಜನವರಿ 22 ರ ಸಂಜೆ ಇಡೀ ದೇಶವು 'ರಾಮ ಜ್ಯೋತಿ'ಯನ್ನು ಬೆಳಗಿಸಿ ದೀಪಾವಳಿಯನ್ನು ಆಚರಿಸಿತು. ಈ ಸಮಯದಲ್ಲಿ, ದೇಶದ ಸಾಮೂಹಿಕ ಶಕ್ತಿಯು ಗೋಚರಿಸುತ್ತದೆ, ಇದು ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಪ್ರತಿಜ್ಞೆಯ ಆಧಾರವಾಗಿದೆ ಎಂದು ಅವರು ಹೇಳಿದರು.ಇತ್ತೀಚೆಗೆ ಪದ್ಮ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟ ಅನೇಕರು ತಳಮಟ್ಟದಲ್ಲಿ ಕೆಲಸ ಮಾಡಿದವರು. ಆದರೆ ದೊಡ್ಡ ಬದಲಾವಣೆಗಳನ್ನು ಮಾಡಲು ಪ್ರಚಾರದಿಂದ ದೂರವಿದ್ದಾರೆ ಎಂದರು. 

ಕಳೆದ ದಶಕದಲ್ಲಿ ಪದ್ಮ ಪ್ರಶಸ್ತಿಗಳ ವ್ಯವಸ್ಥೆ ಸಂಪೂರ್ಣ ಬದಲಾಗಿದ್ದು, ಈಗ ಜನರ ಪದ್ಮವಾಗಿ ಮಾರ್ಪಟ್ಟಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದರು.

ಈ ಬಾರಿ 13 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡು ಗೌರವಿಸಲಾಗಿದೆ. ಬದಲಾಗುತ್ತಿರುವ ಭಾರತದಲ್ಲಿ ನಮ್ಮ ಹೆಣ್ಣುಮಕ್ಕಳು ಮತ್ತು ದೇಶದ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಸಾಧನೆ ಮಾಡುತ್ತಿದ್ದಾರೆ. ಮೂರು ದಿನಗಳ ಹಿಂದೆ ದೇಶವು ಪದ್ಮ ಪ್ರಶಸ್ತಿಯನ್ನು ಘೋಷಿಸಿದೆ, ಇದರಲ್ಲಿ ತಳಮಟ್ಟದ ಜನರೊಂದಿಗೆ ಬೆರೆಯುವ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರಲು ಶ್ರಮಿಸಿದವರಿಗೆ ಪದ್ಮ ಗೌರವವನ್ನು ನೀಡಲಾಯಿತು.

ಈ ಬಾರಿಯ ಗಣರಾಜ್ಯೋತ್ಸವ ಪರೇಡ್​ ತುಂಬಾ ಅದ್ಭುತವಾಗಿತ್ತು, ಕೇಂದ್ರ ಭದ್ರತಾ ಪಡೆಗಳು,ದೆಹಲಿ ಪೊಲೀಸರ ಮಹಿಳಾ ತುಕಡಿಗಳು ಕರ್ತವ್ಯದ ಹಾದಿಯಲ್ಲಿ ಸಾಗಲು ಪ್ರಾರಂಭಿಸದಾಗ ಎಲ್ಲರ ಮನಸ್ಸಿನಲ್ಲೂ ಹೆಮ್ಮೆ ಮೂಡಿತ್ತು.ಮಕರ ಸಂಕ್ರಾಂತಿಯಿಂದ ಜನವರಿ 22 ರವರೆಗೆ ಸ್ವಚ್ಛತಾ ಅಭಿಯಾನವನ್ನು ನಡೆಸುವಂತೆ ನಾನು ದೇಶದ ಜನರನ್ನು ವಿನಂತಿಸಿದ್ದೆ. ಲಕ್ಷಗಟ್ಟಲೆ ಜನರು ಭಕ್ತಿಯಿಂದ ಕೂಡಿ ತಮ್ಮ ಪ್ರದೇಶದ ಧಾರ್ಮಿಕ ಸ್ಥಳಗಳನ್ನು ಸ್ವಚ್ಛಗೊಳಿಸಿದ್ದು ನನಗೆ ಸಂತಸ ತಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com