INDIA ಕೂಟಕ್ಕೆ ಬೇರೆ ಹೆಸರು ಕೊಡಿ ಎಂದಿದ್ದೆ; ಜಾತಿ ಗಣತಿ ಕ್ರೆಡಿಟ್ ಪಡೆಯಲು ರಾಹುಲ್ ಗಾಂಧಿ ನೋಡುತ್ತಿದ್ದಾರೆ: ನಿತೀಶ್ ಕುಮಾರ್

ಇಂಡಿಯಾ ಮೈತ್ರಿಕೂಟಕ್ಕೆ ಬೇರೆ ಹೆಸರನ್ನಿಡಲು ನಾನು ಒತ್ತಾಯಿಸಿದ್ದೆ. ಆದರೆ ಅವರು ಆಗಲೇ ಹೆಸರನ್ನು ಅಂತಿಮಗೊಳಿಸಿದ್ದರು. ಹೆಸರು ಬದಲಾಯಿಸಲು ನಾನು ಬಹಳ ಪ್ರಯತ್ನಪಟ್ಟೆ. ಅವರು ಏನೂ ಕೆಲಸ ಮಾಡಿಲ್ಲ, ಇವತ್ತಿನವರೆಗೆ ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂದು ಅವರು ತೀರ್ಮಾನಿಸಿಲ್ಲ.
ಬಿಹಾರ ಸಿಎಂ ನಿತೀಶ್ ಕುಮಾರ್
ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಇಂಡಿಯಾ ಮೈತ್ರಿಕೂಟಕ್ಕೆ ಬೇರೆ ಹೆಸರನ್ನಿಡಲು ನಾನು ಒತ್ತಾಯಿಸಿದ್ದೆ. ಆದರೆ ಅವರು ಆಗಲೇ ಹೆಸರನ್ನು ಅಂತಿಮಗೊಳಿಸಿದ್ದರು. ಹೆಸರು ಬದಲಾಯಿಸಲು ನಾನು ಬಹಳ ಪ್ರಯತ್ನಪಟ್ಟೆ. ಅವರು ಏನೂ ಕೆಲಸ ಮಾಡಿಲ್ಲ, ಇವತ್ತಿನವರೆಗೆ ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂದು ಅವರು ತೀರ್ಮಾನಿಸಿಲ್ಲ. ಹೀಗಾಗಿ ನಾನು ಆ ಮೈತ್ರಿಕೂಟದಿಂದ ಹೊರಬಂದು ಆರಂಭದಲ್ಲಿ ನನ್ನ ಜೊತೆಗಿದ್ದವರ ಒಟ್ಟಿಗೆ ಸೇರಿಕೊಂಡೆ. ನಾನು ಬಿಹಾರ ಜನತೆ ಪರವಾಗಿ ಕೆಲಸ ಮುಂದುವರಿಸುತ್ತೇನೆ ಎಂದು ಇಂಡಿಯಾ ಮೈತ್ರಿಕೂಟದಿಂದ ಹೊರಬಂದು ಎನ್ ಡಿಎ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಇಂದು ಪಾಟ್ನಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಹಾರದಲ್ಲಿ ಜಾತಿ ಗಣತಿಯ ಕ್ರೆಡಿಟ್ ನ್ನು ರಾಹುಲ್ ಗಾಂಧಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಜಾತಿ ಗಣತಿ ಯಾವಾಗ ನಡೆಯಿತು ಎಂದು ಅವರು ಮರೆತಿದ್ದಾರೆಯೇ, ನಾನು ಅದನ್ನು 9 ಪಕ್ಷಗಳ ಸಮ್ಮುಖದಲ್ಲಿ ನಡೆಸಿದ್ದೇನೆ. 2019-2020 ರಲ್ಲಿ, ನಾನು ಅಸೆಂಬ್ಲಿಯಿಂದ ಹಿಡಿದು ಸಾರ್ವಜನಿಕ ಸಭೆಗಳವರೆಗೆ ಎಲ್ಲೆಂದರಲ್ಲಿ ಜಾತಿ ಗಣತಿ ನಡೆಸುವ ಬಗ್ಗೆ ಮಾತನಾಡುತ್ತಿದ್ದೆ. ಈಗ ಅದರ ಸುಳ್ಳು ಕ್ರೆಡಿಟ್ ನ್ನು ರಾಹುಲ್ ಗಾಂಧಿ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೆ ನಾನು ಏನು ಮಾಡಬೇಕು, ಅವರು ಏನು ಬೇಕಾದರೂ ಹೇಳಿಕೊಳ್ಳಲಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com