ಮಹಾರಾಷ್ಟ್ರ: ಪ್ರವಾಸಿಗರ ಎದುರೇ ಒಂದೇ ಕುಟುಂಬದ ಐವರು ಜಲಸಮಾಧಿ, ಭಯಾನಕ Video

ಮಳೆಗಾಲದಲ್ಲಿ ಜನರು ಜಲಸಮಾಧಿಯಾಗುವ ದುರ್ಘಟನೆಗಳು ಮುಂದುವರಿದಿದೆ. ಮಹಾರಾಷ್ಟ್ರ ರಾಜ್ಯದ ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಹಿಂಭಾಗದ ಜಲಪಾತದಲ್ಲಿ ಮುಳುಗಿ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ಜಲಸಮಾಧಿಯಾಗಿದ್ದಾರೆ.
ಐವರು ಜಲಸಮಾಧಿ
ಐವರು ಜಲಸಮಾಧಿ
Updated on

ಪುಣೆ: ಮಳೆಗಾಲದಲ್ಲಿ ಜನರು ಜಲಸಮಾಧಿಯಾಗುವ ದುರ್ಘಟನೆಗಳು ಮುಂದುವರಿದಿದೆ. ಮಹಾರಾಷ್ಟ್ರ ರಾಜ್ಯದ ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಹಿಂಭಾಗದ ಜಲಪಾತದಲ್ಲಿ ಮುಳುಗಿ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ಜಲಸಮಾಧಿಯಾಗಿದ್ದಾರೆ.

ನಿನ್ನೆ ಭಾನುವಾರ ಮಧ್ಯಾಹ್ನ 12:30 ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತರನ್ನು ಶಹಿಸ್ತಾ ಅನ್ಸಾರಿ (36), ಅಮಿಮಾ ಅನ್ಸಾರಿ (13) ಮತ್ತು ಉಮೇರಾ ಅನ್ಸಾರಿ (8) ಅದ್ನಾನ್ ಅನ್ಸಾರಿ (4) ಮತ್ತು ಮರಿಯಾ ಸಯ್ಯದ್ (9) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಪುಣೆ ನಗರದ ಸಯ್ಯದ್ ನಗರ ಪ್ರದೇಶದಿಂದ ಬಂದಿದೆ.

ಪುಣೆ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಪಂಕಜ್ ದೇಶಮುಖ್ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಒಬ್ಬ ಮಹಿಳೆ ಮತ್ತು ನಾಲ್ಕು ಮಕ್ಕಳು ಲೋನಾವಾಲಾದ ಭೂಶಿ ಅಣೆಕಟ್ಟಿನ ಬಳಿಯ ಜಲಪಾತಕ್ಕೆ ಹೋಗಿದ್ದರು. ಇಂದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಕೊನೆಯಲ್ಲಿ ಮೂರು ದೇಹಗಳು ಸಿಕ್ಕಿವೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಎಲ್ಲಾ ಐದು ಮಂದಿ ಒಂದೇ ಕುಟುಂಬದವರಾಗಿದ್ದಾರೆ ಎಂದರು.

ಶಾಹಿಸ್ತಾ ಅನ್ಸಾರಿ (36), ಅಮಿಮಾ ಅನ್ಸಾರಿ (13), ಮತ್ತು ಉಮೇರಾ ಅನ್ಸಾರಿ (8) ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ, ಆದರೆ ಅದ್ನಾನ್ ಅನ್ಸಾರಿ (4) ಮತ್ತು ಮರಿಯಾ ಸಯ್ಯದ್ (9) ನಾಪತ್ತೆಯಾಗಿದ್ದಾರೆ ಎಂದು ಸೂಪರಿಂಟೆಂಡೆಂಟ್ ದೇಶಮುಖ್ ಹೇಳಿದ್ದಾರೆ.

ಜಲಪಾತದ ಮಧ್ಯದಲ್ಲಿ 9 ಜನರು ನಿಂತಿರುವುದು ಕಂಡುಬರುತ್ತದೆ. ಗುಂಪಿನಲ್ಲಿ ಒಂದು ಮಗು ಇದೆ. ಸ್ವಲ್ಪ ಹಿಂದೆಯೇ ನೀರು ಘರ್ಜಿಸುವುದನ್ನು ನೋಡಬಹುದು. ಅವರು ಯಾವುದೇ ಸುರಕ್ಷತಾ ಮಾನದಂಡಗಳಿಲ್ಲದೆ ಜಲಪಾತಕ್ಕೆ ಇಳಿದರು. ಈ ಸ್ಥಳಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.

ಮಳೆಗಾಲದಲ್ಲಿ ಭೋರ್ಗರೆದು ಹರಿಯುತ್ತಿರುವ ಜಲಪಾತದ ಪ್ರಕೃತಿ ಸೌಂದರ್ಯವನ್ನು ಸವಿಯಲು ಇವರು ಬಂದಿದ್ದರು. ರಭಸವಾಗಿ ಹರಿಯುವ ನೀರಿನಲ್ಲಿ ನಿಂತು ಫೋಟೋ-ವಿಡಿಯೊ ಮಾಡುತ್ತಿದ್ದರು. ಆಗ ಬಲವಾದ ಪ್ರವಾಹ ಬಂದು ಕೊಚ್ಚಿಹೋದರು ಎಂದು ದೇಶಮುಖ್ ಅವರನ್ನು ಉಲ್ಲೇಖಿಸಿ ANI ವರದಿ ಮಾಡಿದೆ.

ಲೋನಾವಾಲಾ ಪೊಲೀಸರು ಮತ್ತು ತುರ್ತು ಸೇವೆಗಳು ಮುಳುಗುಗಾರರು ಮತ್ತು ರಕ್ಷಣಾ ತಂಡಗಳನ್ನು ಒಳಗೊಂಡ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ನಾಪತ್ತೆಯಾಗಿರುವ ಮಕ್ಕಳ ಪತ್ತೆಗೆ ಇಂದು ಕೂಡ ಶೋಧ ಮುಂದುವರಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com