NDA meeting: 'ಭಾರತ್ ಮಾತಾ ಕಿ ಜೈ' ಘೋಷಣೆ ಮಧ್ಯೆ ಪ್ರಧಾನಿಗೆ ಸ್ವಾಗತ; ಲೋಕಸಭೆಯಲ್ಲಿ ಇಂದು ಮೋದಿ ಉತ್ತರ

ಪ್ರಧಾನಿಯವರು ಸಭೆಗೆ ಆಗಮಿಸುತ್ತಿದ್ದಂತೆ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದರು.
ಪ್ರಧಾನಿ ಮೋದಿಗೆ ಸ್ವಾಗತ
ಪ್ರಧಾನಿ ಮೋದಿಗೆ ಸ್ವಾಗತ
Updated on

ನವದೆಹಲಿ: ಇಂದು ಮಂಗಳವಾರದ ಸಂಸತ್ ಅಧಿವೇಶನದ ಕಲಾಪಕ್ಕೆ ಮುನ್ನ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ(NDA) ಸಂಸದರು ಸಂಸತ್ತಿನ ಆವರಣದಲ್ಲಿ ಸಭೆ ನಡೆಸಿದರು.

ಇಂದು ಬೆಳಗ್ಗೆ ಸಭೆಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಕೇಂದ್ರ ಸಚಿವರು ಹಾಗೂ ಸಂಸದರು ಆಗಮಿಸಿದರು. ಪ್ರಧಾನಿಯವರು ಸಭೆಗೆ ಆಗಮಿಸುತ್ತಿದ್ದಂತೆ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದರು. ಸಂಸತ್ತಿನ ಗ್ರಂಥಾಲಯ ಕಟ್ಟಡದ (PLB) ಜಿಎಂಸಿ ಬಾಲಯೋಗಿ ಸಭಾಂಗಣನಲ್ಲಿ NDA ಸಂಸದೀಯ ಪಕ್ಷದ ಸಭೆ ನಡೆಯುತ್ತಿದೆ.

ಸಭೆಯಲ್ಲಿ ಗಿರಿರಾಜ್ ಸಿಂಗ್, ಮಿಲಿಂದ್ ದಿಯೋರಾ, ಕಂಗನಾ ರಾನಾವತ್ ಮತ್ತು ಜಯಂತ್ ಚೌಧರಿ ಸೇರಿದಂತೆ ವಿವಿಧ ಎನ್‌ಡಿಎ ನಾಯಕರು ಸಭೆಗೆ ಆಗಮಿಸಿದ್ದಾರೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಆಡಳಿತ ಪಕ್ಷದ ಸಂಸದರನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಸಂಸದರನ್ನು ಉದ್ದೇಶಿಸಿ ಇಂದು ಮಾತನಾಡಲಿದ್ದಾರೆ.

ಪ್ರಧಾನಿ ಮೋದಿಗೆ ಸ್ವಾಗತ
ನೀವು ನನಗೆ ಹಸ್ತಲಾಘವ ಮಾತ್ರ ನೀಡದ್ರಿ, ಮೋದಿಗೆ ನಮಸ್ಕಾರ ಮಾಡಿದ್ರಿ ಯಾಕೆ?: ಓಂ ಬಿರ್ಲಾಗೆ ರಾಹುಲ್ ಗಾಂಧಿ ಪ್ರಶ್ನೆ!

ಇಂದು ರಾಹುಲ್ ಗಾಂಧಿ ಭಾಷಣಕ್ಕೆ ಪ್ರಧಾನಿ ಉತ್ತರ: ನಿನ್ನೆ ಸದನದಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭಾಷಣದ ಹಲವು ಭಾಗಗಳನ್ನು ತೆಗೆದುಹಾಕಲಾಗಿದೆ. ತೆಗೆದುಹಾಕಲಾದ ಭಾಗಗಳಲ್ಲಿ ಹಿಂದೂಗಳು ಮತ್ತು ಪಿಎಂ ನರೇಂದ್ರ ಮೋದಿ-ಬಿಜೆಪಿ-ಆರ್‌ಎಸ್‌ಎಸ್ ಇತರರ ಬಗ್ಗೆ ಹಲವು ಉಲ್ಲೇಖಗಳು ಸೇರಿವೆ.

ಸಂಸತ್ತಿನ ಕೆಳಮನೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ಮೋದಿ ಅವರು ತಮ್ಮ ಉತ್ತರವನ್ನು ನೀಡಲಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಭಾಷಣಕ್ಕೆ ಠಕ್ಕರ್ ಕೊಡುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com