Hathras stampede: ಅನುಮತಿ ಪಡೆದಿದ್ದು 80 ಸಾವಿರ ಜನಕ್ಕೆ, ಸೇರಿದ್ದು 2 ಲಕ್ಷಕ್ಕೂ ಅಧಿಕ ಮಂದಿ!

'ಸತ್ಸಂಗ' ಸಂಚಾಲಕ ಜಗತ್ ಗುರು ಸಾಕರ್ ವಿಶ್ವಹಾರಿ ಅವರ ಹೆಸರು ದೂರಿನಲ್ಲಿದ್ದರೂ ಎಫ್‌ಐಆರ್‌ನಲ್ಲಿ ಹೆಸರಿಲ್ಲ.
ಸತ್ಸಂಗ ಬಳಿ ಮೃತರ ಕುಟುಂಬಸ್ಥರು ಅಳುತ್ತಿರುವುದು
ಸತ್ಸಂಗ ಬಳಿ ಮೃತರ ಕುಟುಂಬಸ್ಥರು ಅಳುತ್ತಿರುವುದು
Updated on

ಹತ್ರಾಸ್: ಕೇವಲ 80 ಸಾವಿರ ಜನರನ್ನು ಸೇರಿಸಲು ಮಾತ್ರ ಅನುಮತಿಯಿದ್ದ ಕಾರ್ಯಕ್ರಮಕ್ಕೆ 2.5 ಲಕ್ಷ ಜನರು ಸೇರುವ ಮೂಲಕ ಸಾಕ್ಷ್ಯಗಳನ್ನು ಮರೆಮಾಚಿದ್ದಾರೆ ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶ ಪೊಲೀಸರು ಬುಧವಾರ ಹತ್ರಾಸ್‌ನಲ್ಲಿ 121 ಜನರು ಕಾಲ್ತುಳಿತದಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಧಾರ್ಮಿಕ ಸಭೆಯ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಆದರೆ, ಸಭೆ ಅಥವಾ 'ಸತ್ಸಂಗ' ಸಂಚಾಲಕ ಜಗತ್ ಗುರು ಸಾಕರ್ ವಿಶ್ವಹಾರಿ ಅವರ ಹೆಸರು ದೂರಿನಲ್ಲಿದ್ದರೂ ಎಫ್‌ಐಆರ್‌ನಲ್ಲಿ ಹೆಸರಿಲ್ಲ. ಅನುಮತಿ ಕೋರುವಾಗ ಸತ್ಸಂಗಕ್ಕೆ ಬರುವ ಭಕ್ತರ ಸಂಖ್ಯೆಯನ್ನು ಸಂಘಟಕರು ಮರೆಮಾಚಿದ್ದರು. ಸಂಚಾರ ನಿರ್ವಹಣೆಗೆ ಸಹಕರಿಸಲಿಲ್ಲ ಮತ್ತು ಕಾಲ್ತುಳಿತದ ನಂತರ ಸಾಕ್ಷ್ಯವನ್ನು ಮರೆಮಾಚಿದರು, ಭಕ್ತರನ್ನು ಮಣ್ಣು ಸಂಗ್ರಹಿಸಲು ನಿಲ್ಲಿಸಿದ ನಂತರ ಉಂಟಾದ ನೂಕುನುಗ್ಗಲು ಕಾಲ್ತುಳಿತಕ್ಕೆ ಕಾರಣವಾಗಿ ಇಷ್ಟೊಂದು ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಈ ವೇಳೆ ಬಾಬಾರ ವಾಹನ ಹಾದು ಹೋಗುತ್ತಿತ್ತು ಎಂದು ಎಫ್ಐಆರ್ ನಲ್ಲಿ ನಮೂದಿಸಲಾಗಿದೆ.

ಎಫ್‌ಐಆರ್ ನಲ್ಲಿ ಪೊಲೀಸರು ಮತ್ತು ಸ್ಥಳೀಯ ಆಡಳಿತಕ್ಕೆ ಕ್ಲೀನ್ ಚಿಟ್ ನೀಡಿದ್ದು, ಲಭ್ಯವಿರುವ ಸಂಪನ್ಮೂಲಗಳಿಂದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ ತಡರಾತ್ರಿ ಸಿಕಂದರ ರಾವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) 'ಮುಖ್ಯ ಸೇವಾದಾರ' ದೇವಪ್ರಕಾಶ್ ಮಧುಕರ್ ಮತ್ತು ಇತರ ಸಂಘಟಕರನ್ನು ಹೆಸರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮ ಸಂಘಟಕರು ಸುಮಾರು 80,000 ಜನರಿಗೆ ಅನುಮತಿ ಕೋರಿದ್ದರು. ಇದಕ್ಕಾಗಿ ಪೊಲೀಸರು ಮತ್ತು ಆಡಳಿತ ವ್ಯವಸ್ಥೆ ಮಾಡಿತ್ತು. ಆದರೆ, ಈ ಕಾರ್ಯಕ್ರಮದಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಅನುಮತಿಯ ಷರತ್ತುಗಳನ್ನು ಅನುಸರಿಸದೆ, ಜಿಟಿ ರಸ್ತೆ ತೀವ್ರ ಸಂಚಾರ ದಟ್ಟಣೆಗೆ ಸಾಕ್ಷಿಯಾಗಿದೆ. ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ಅದನ್ನು ತೆರವುಗೊಳಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಎಫ್‌ಐಆರ್ ತಿಳಿಸಿದೆ.

ಸತ್ಸಂಗ ಬಳಿ ಮೃತರ ಕುಟುಂಬಸ್ಥರು ಅಳುತ್ತಿರುವುದು
ಹತ್ರಾಸ್ ಕಾಲ್ತುಳಿತ: ಸಾವಿನ ಸಂಖ್ಯೆ 122 ಕ್ಕೆ ಏರಿಕೆ, FIR ನಲ್ಲಿ ದೇವಮಾನವ ಭೋಲೆ ಬಾಬಾ ಹೆಸರಿಲ್ಲ!

ಕಾಲ್ತುಳಿತ ಹೇಗಾಯಿತು?: ಈ ಮಧ್ಯೆ, ಸತ್ಸಂಗದ ಮುಖ್ಯ ಭಾಷಣಕಾರರಾಗಿದ್ದ ಬಾಬಾ ಮಧ್ಯಾಹ್ನ 2 ಗಂಟೆಗೆ ತಮ್ಮ ವಾಹನದಲ್ಲಿ ಹೊರಬಂದರು, ಭಕ್ತರು ಅಲ್ಲಿಂದ ಮಣ್ಣು ಸಂಗ್ರಹಿಸಲು ಪ್ರಾರಂಭಿಸಿದರು. ಭಕ್ತಾದಿಗಳ ನೂಕುನುಗ್ಗಲಿನಿಂದಾಗಿ ಮಲಗಿದ್ದವರು (ಮಣ್ಣು ತೆಗೆದುಕೊಳ್ಳಲು) ತುಳಿತಕ್ಕೆ ಒಳಗಾದರು. ನೀರು ಮತ್ತು ಕೆಸರು ತುಂಬಿದ ಮೂರು ಅಡಿ ಆಳದ ಹೊಲದ ಇನ್ನೊಂದು ಬದಿಯಲ್ಲಿ ನಿಂತಿದ್ದ ಬಾಬಾನ ಸಹಾಯಕರು ಸ್ಥಳದಿಂದ ಹೊರಗೆ ಓಡಿಹೋದವರನ್ನು ತಡೆದರು, ಇದರಿಂದಾಗಿ ಮಹಿಳೆಯರು, ಮಕ್ಕಳು ಮತ್ತು ಪುರುಷರು ಜನಜಂಗುಳಿಯಲ್ಲಿ ನಜ್ಜುಗುಜ್ಜಾದರು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com