
ಪಂಜಾಬ್: ಪಂಜಾಬ್ ನಲ್ಲಿ ಶಿವಸೇನೆ ನಾಯಕನ ಮೇಲೆ ಖಡ್ಗದಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ನಾಲ್ವರು ಅಪರಿಚಿತ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದು, ಖಡ್ಗಗಳಿಂದ ಹಾಡ ಹಗಲೇ ಈ ಕೃತ್ಯ ಎಸಗಿದ್ದಾರೆ.
ಸಿವಿಲ್ ಆಸ್ಪತ್ರೆಯಿಂದ ಬಳಿ ಇರುವ ಸಂವೇದನಾ ಟ್ರಸ್ಟ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊರಬರುತ್ತಿದ್ದ ಸಂದೀಪ್ ಥಾಪರ್ (58) ಮೇಲೆ ಈ ದಾಳಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸಂವೇದನಾ ಟ್ರಸ್ಟ್ ರೋಗಿಗಳಿಗೆ ಮತ್ತು ಶವ ವಾಹನಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ವೀಡಿಯೊದಲ್ಲಿ, ದಾಳಿಕೋರರು ನಿಹಾಂಗ್ಸ್ ವೇಷ ಧರಿಸಿದ್ದು ಸ್ಪಷ್ಟವಾಗಿ ಕಾಣುತ್ತಿದೆ. ಥಾಪರ್ ಅವರು ದಾಳಿಕೋರರೊಂದಿಗೆ ಕೈ ಜೋಡಿಸಿ ಮಾತನಾಡುತ್ತಿದ್ದಾಗ ಅವರಲ್ಲಿ ಒಬ್ಬ ಏಕಾಏಕಿ ಕತ್ತಿಯಿಂದ ದಾಳಿ ಮಾಡಿದ್ದಾನೆ. ಇನ್ನೊಬ್ಬ ಆಕ್ರಮಣಕಾರ ಥಾರ್ಪರ್‌ನ ಭದ್ರತಾ ಸಿಬ್ಬಂದಿಯನ್ನು ದೂರ ತಳ್ಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ನಂತರ ಇಬ್ಬರು ಆರೋಪಿಗಳು ಥಾಪರ್ ಅವರ ಸ್ಕೂಟರ್ ನಲ್ಲಿ ಪರಾರಿಯಾಗಿದ್ದಾರೆ.
Advertisement