ರಾಹುಲ್ ಗಾಂಧಿ ಭೇಟಿ ಬಳಿಕ ಅಗ್ನಿ ವೀರ್ ಯೋಜನೆಯನ್ನು ವಿರೋಧಿಸಿದ ಹುತಾತ್ಮ ಯೋಧನ ತಾಯಿ

ಅಗ್ನಿವೀರ್ ಬಗ್ಗೆ ಮತ್ತಷ್ಟು ಮಾತನಾಡಿದ ಮಂಜು ಸಿಂಗ್, ನಾಲ್ಕು ವರ್ಷಗಳ ಉದ್ಯೋಗ ಸೂಕ್ತವಲ್ಲ, ನಾಲ್ಕು ವರ್ಷಗಳ ಬಳಿಕ ಅಗ್ನಿವೀರ್ ಯೋಜನೆಯಿಂದ ಹೊರಬಂದವರು ಮತ್ತೊಂದು ಸೂಕ್ತವಾದ ವೃತ್ತಿಯನ್ನು ಹುಡುಕಲು ಹೆಣಗಾಡುತ್ತಾರೆ ಎಂದು ಹೇಳಿದ್ದಾರೆ.
Kirti Chakra recipient Captain Anshuman Singh's mother Manju Singh meeting Rahul Gandhi
ಹುತಾತ್ಮ ಯೋಧನ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ
Updated on

ಲಖನೌ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕೀರ್ತಿ ಚಕ್ರ ಪುರಸ್ಕೃತ, ಹುತಾತ್ಮ ಯೋಧ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಕುಟುಂಬ ಸದಸ್ಯರನ್ನು ಇಂದು ರಾಯ್ ಬರೇಲಿಯಲ್ಲಿ ಭೇಟಿ ಮಾಡಿ ಮಾತನಾಡಿದರು.

ರಾಹುಲ್ ಗಾಂಧಿ ಭೇಟಿ ಬಳಿಕ ಹುತಾತ್ಮ ಯೋಧನ ತಾಯಿ ಮಂಜು ಸಿಂಗ್ ಮಾತನಾಡಿದ್ದು, ಅಗ್ನಿ ವೀರ್ ಯೋಜನೆ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದು, “ಸೇನೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸದಂತೆ ನಾನು ಸರ್ಕಾರವನ್ನು ವಿನಂತಿಸುತ್ತೇನೆ"ಎಂದು ಹೇಳಿದ್ದಾರೆ.

ಯೋಧರ ಅಲ್ಪಾವಧಿಯ ನೇಮಕಾತಿಗಾಗಿ 2022 ರಲ್ಲಿ ಪ್ರಾರಂಭಿಸಲಾದ ಸೇನಾ ಯೋಜನೆಯಾದ ಅಗ್ನಿವೀರ್ ಬಗ್ಗೆ ಮತ್ತಷ್ಟು ಮಾತನಾಡಿದ ಮಂಜು ಸಿಂಗ್, ನಾಲ್ಕು ವರ್ಷಗಳ ಉದ್ಯೋಗ ಸೂಕ್ತವಲ್ಲ, ನಾಲ್ಕು ವರ್ಷಗಳ ಬಳಿಕ ಅಗ್ನಿವೀರ್ ಯೋಜನೆಯಿಂದ ಹೊರಬಂದವರು ಮತ್ತೊಂದು ಸೂಕ್ತವಾದ ವೃತ್ತಿಯನ್ನು ಹುಡುಕಲು ಹೆಣಗಾಡುತ್ತಾರೆ.

Kirti Chakra recipient Captain Anshuman Singh's mother Manju Singh meeting Rahul Gandhi
ಹುತಾತ್ಮ ಅಗ್ನಿವೀರ್ ಪರಿಹಾರ ವಿಚಾರವಾಗಿ ಸಂಸತ್ತಿನಲ್ಲಿ ರಾಜನಾಥ್ ಸುಳ್ಳು ಹೇಳಿಕೆ: ರಾಹುಲ್ ಆರೋಪ ನಿರಾಕರಿಸಿದ ಸೇನೆ

"ಅವರು (ಅಗ್ನಿವೀರ್ ಯೋಧರು) 4 ವರ್ಷಗಳ ನಂತರ ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಲರಾಗುತ್ತಾರೆ, ನಂತರ ಅವರು ತಮ್ಮ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ, ಇದು ಒಳ್ಳೆಯದಲ್ಲ" ಎಂದು ಹುತಾತ್ಮ ಯೋಧರ ತಾಯಿ ಹೇಳಿದ್ದಾರೆ.

ಹುತಾತ್ಮ ಯೋಧ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರಿಗೆ ಮರಣೋತ್ತರವಾಗಿ ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜುಲೈ 5 ರಂದು ಸಮಾರಂಭದಲ್ಲಿ ಪ್ರದಾನ ಮಾಡಿದರು.

ಕಳೆದ ವರ್ಷ ಜುಲೈನಲ್ಲಿ ಸಂಭವಿಸಿದ ದೊಡ್ಡ ಅಗ್ನಿ ಅವಗಢದಲ್ಲಿ ಜನರನ್ನು ರಕ್ಷಿಸುವ ಸಂದರ್ಭದಲ್ಲಿ ಕ್ಯಾಪ್ಟನ್ ಸಿಂಗ್ ಸಾವನ್ನಪ್ಪಿದ್ದರು.

ರಾಹುಲ್ ಗಾಂಧಿ ಲಕ್ನೋದಲ್ಲಿ ನೆಲೆಸಿರುವ ಹುತಾತ್ಮರ ಕುಟುಂಬವನ್ನು ಭೇಟಿಯಾಗಲು ಅತಿಥಿ ಗೃಹಕ್ಕೆ ಆಹ್ವಾನಿಸಿದ್ದರು.

ಕಾಂಗ್ರೆಸ್ ನಾಯಕನನ್ನು ಭೇಟಿಯಾದ ನಂತರ, ಮೃತ ಅಧಿಕಾರಿಯ ತಾಯಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅವರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ಗಾಂಧಿಯವರು ಭರವಸೆ ನೀಡಿದರು.

"ಅಗ್ನಿವೀರ್ ಯೋಜನೆಯು ಸೇನೆಗೆ ಸೂಕ್ತವಲ್ಲದ ಕಾರಣ ಅದನ್ನು ಕೊನೆಗೊಳಿಸುವಂತೆ ನಾನು ಸರ್ಕಾರವನ್ನು ವಿನಂತಿಸಿದ್ದೇನೆ" ಎಂದು ರಾಹುಲ್ ಗಾಂಧಿ ಹೇಳಿದ್ದು, ನಮ್ಮ ಕುಟುಂಬಕ್ಕೆ ಎಲ್ಲಾ ರೀತಿಯ ಸಾಧ್ಯ ನೆರವನ್ನು ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ ಎಂದು ಹುತಾತ್ಮ ಯೋಧರ ತಾಯಿ ಹೇಳಿದ್ದಾರೆ.

ಗಾಂಧಿಯವರು ಲಾಲ್‌ಗಂಜ್‌ನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿದರು ಮತ್ತು ಅಲ್ಲಿ ಪುಷ್ಪಗುಚ್ಛವನ್ನು ಹಾಕಿದರು ಮತ್ತು ಸಸಿಯನ್ನು ನೆಟ್ಟರು. ಅವರು ಏಮ್ಸ್-ರಾಯಬರೇಲಿಗೆ ಭೇಟಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com