ಸಿಕ್ಕಿಮ್ ನ ಏಕೈಕ ವಿಪಕ್ಷ ಶಾಸಕ ಆಡಳಿತ ಪಕ್ಷಕ್ಕೆ ಸೇರ್ಪಡೆ; ವಿಧಾನಸಭೆಯಲ್ಲಿ ವಿಪಕ್ಷವೇ ಇಲ್ಲ!

Lamtha SKM ಗೆ ಸೇರ್ಪಡೆಗೊಳ್ಳುವುದರೊಂದಿಗೆ, SKM ರಾಜ್ಯದ ಎಲ್ಲಾ 32 ಸ್ಥಾನಗಳನ್ನು ಹೊಂದಿರುವುದರಿಂದ ಸಿಕ್ಕಿಮ್ ವಿಧಾನಸಭೆಯಲ್ಲಿ ಯಾವುದೇ ವಿರೋಧ ಪಕ್ಷ ಇರುವುದಿಲ್ಲ.
Tenzing Norbu Lamtha, the lone Sikkim Democratic Front MLA on Wednesday joined the ruling Sikkim Krantikari Morcha
ಆಡಳಿತಾರೂಢ ಪಕ್ಷಕ್ಕೆ ಸೇರ್ಪಡೆಯಾದ ಶಾಸಕ ತೇನ್ಸಿಂಗ್ ನಾರ್ಬು ಲಮ್ತಾ online desk
Updated on

ಸಿಕ್ಕಿಮ್: ಸಿಕ್ಕಿಮ್ ಡೆಮಾಕ್ರೆಟಿಕ್ ಫ್ರಂಟ್ ನ ಶಾಸಕ ತೇನ್ಸಿಂಗ್ ನಾರ್ಬು ಲಮ್ತಾ ಆಡಳಿತಾರೂಢ ಸಿಕ್ಕಿಮ್ ಕ್ರಾಂತಿಕಾರಿ ಮೋರ್ಚಾಗೆ ಸೇರ್ಪಡೆಯಾಗಿದ್ದಾರೆ.

ಲಮ್ತಾ ವಿಪಕ್ಷ ಸಿಕ್ಕಿಮ್ ಡೆಮಾಕ್ರೆಟಿಕ್ ಫ್ರಂಟ್ ನ ಏಕೈಕ ಶಾಸಕರಾಗಿದ್ದರು. ಆಡಳಿತಾರೂಢ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿರುವ ತೇನ್ಸಿಂಗ್ ನಾರ್ಬು ಲಮ್ತಾ, ಸಾರ್ವಜನಿಕರ ಒಲವು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಎಸ್.ಕೆ.ಎಂ ಪರವಾಗಿದೆ ಎಂದು ಹೇಳಿದ್ದಾರೆ.

Lamtha SKM ಗೆ ಸೇರ್ಪಡೆಗೊಳ್ಳುವುದರೊಂದಿಗೆ, SKM ರಾಜ್ಯದ ಎಲ್ಲಾ 32 ಸ್ಥಾನಗಳನ್ನು ಹೊಂದಿರುವುದರಿಂದ ಸಿಕ್ಕಿಮ್ ವಿಧಾನಸಭೆಯಲ್ಲಿ ಯಾವುದೇ ವಿರೋಧ ಪಕ್ಷ ಇರುವುದಿಲ್ಲ.

ನಾನು ಮತದಾರರೊಂದಿಗೆ ಸಮಾಲೋಚನೆ ನಡೆಸಿ ಆಡಳಿತಾರೂಢ ಪಕ್ಷ ಸೇರ್ಪಡೆಯಾಗಲು ನಿರ್ಧರಿಸಿದ್ದೇನೆ ಎಂದು Lamtha ಮಾಧ್ಯಮಗಳಿಗೆ ತಿಳಿಸಿದ್ದಾರೆ.

Tenzing Norbu Lamtha, the lone Sikkim Democratic Front MLA on Wednesday joined the ruling Sikkim Krantikari Morcha
ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಸಿಕ್ಕಿಂ ಸಿಎಂ ಪತ್ನಿ ಕೃಷ್ಣ ಕುಮಾರಿ ಶಾಸಕಿ ಸ್ಥಾನಕ್ಕೆ ರಾಜೀನಾಮೆ

ತಮಾಂಗ್ ನಾಯಕತ್ವವನ್ನು ಶ್ಲಾಘಿಸಿದ ಲಮ್ತಾ, 'ರಾಜ್ಯದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಎಸ್‌ಕೆಎಂ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಮಹತ್ತರವಾದ ಕೆಲಸ ಮಾಡಿದೆ, ಅದರ ಕಾರ್ಯಕ್ಷಮತೆಯನ್ನು ಮೆಚ್ಚಿ ಆಡಳಿತ ಪಕ್ಷಕ್ಕೆ ಭರ್ಜರಿ ಜನಾದೇಶ ದೊರೆತಿದೆ' ಎಂದು ಲಮ್ತಾ ಹೇಳಿದ್ದಾರೆ.

ಜನಾದೇಶದಲ್ಲಿ ಪ್ರತಿಫಲಿಸಿದಂತೆ ಸಿಕ್ಕಿಮ್ ವಿಧಾನಸಭೆಯಲ್ಲಿ ಮತ್ತು ಹೊರಗೆ ಎಸ್‌ಕೆಎಂಗೆ ವಿರೋಧದ ಅಗತ್ಯವಿಲ್ಲ ಎಂಬ ಸಂದೇಶವನ್ನು ಜನರು ಸ್ಪಷ್ಟವಾಗಿ ನೀಡಿದ್ದಾರೆ ಎಂದು ಶ್ಯಾರಿ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದ ಶಾಸಕರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com