
ವಿಜಯವಾಡ: ರಾಜ್ಯದಲ್ಲಿ ‘ಅಣ್ಣಾ ಕ್ಯಾಂಟೀನ್’ಗಳನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.
ಈ ಹಿಂದೆ ತಾನು ಮುಖ್ಯಮಂತ್ರಿಯಾಗಿದ್ದಾಗ 203 ಅಣ್ಣಾ ಕ್ಯಾಂಟೀನ್‌ಗಳನ್ನು ಸರ್ಕಾರ ನಡೆಸುತಿತ್ತು. ಅವುಗಳಿಗೆ ಅಕ್ಷಯಪಾತ್ರದಿಂದ ಉತ್ತಮ ಗುಣಮಟ್ಟದ ಆಹಾರ ಒದಗಿಸಲಾಗುತಿತ್ತು. ಆದರೆ ಕಳೆದ ಜಗನ್ ಸರ್ಕಾರ ಈ ಕ್ಯಾಂಟೀನ್ ಗಳನ್ನು ಮುಚ್ಚಿತ್ತು ಎಂದು ಅವರು ತಿಳಿಸಿದರು.
ವಿಜಯವಾಡ-ಗುಂಟೂರು ಹೆದ್ದಾರಿಯ ತಾಡೇಪಲ್ಲಿ ಸಮೀಪದ ಕೊಳನುಕೊಂಡದ ಹರೇಕೃಷ್ಣ ಗೋಕುಲ ಕ್ಷೇತ್ರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ರಾಜ್ಯವನ್ನು ಬಡತನ ರಹಿತ ರಾಜ್ಯವನ್ನಾಗಿ ಅಭಿವೃದ್ಧಿಪಡಿಸುವುದು ತಮ್ಮ ಮಹತ್ವಾಕಾಂಕ್ಷೆಯಾಗಿದೆ ಎಂದು ಹೇಳಿದರು.
ಧರ್ಮದ ಸಂರಕ್ಷಣೆಯಲ್ಲಿ ನಂಬಿಕೆ ಮೂಡಿಸುವಲ್ಲಿ ದತ್ತಿ ಸಂಸ್ಥೆಗಳ ಮಹತ್ವವನ್ನು ಒತ್ತಿ ಹೇಳಿದ ಮುಖ್ಯಮಂತ್ರಿ, ಈ ಜಗತ್ತನ್ನು ಮುನ್ನಡೆಸುವುದು ನಂಬಿಕೆ ಮಾತ್ರ. ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಏಕೈಕ ಶಕ್ತಿ ದೇವರು" ಎಂದು ಅವರು ಹೇಳಿದರು.
Advertisement