NEET ಅಕ್ರಮ: ಪರೀಕ್ಷಾ ಸುಧಾರಣಾ ಸಮಿತಿಗೆ 37,000 ಕ್ಕೂ ಅಧಿಕ ಸಲಹೆ; ಬಹುತೇಕ ವಿದ್ಯಾರ್ಥಿಗಳಿಂದ!

ಸಮಿತಿಯು ಜೂನ್ 27 ಮತ್ತು ಜುಲೈ 7 ರ ನಡುವೆ MyGov ಪ್ಲಾಟ್‌ಫಾರ್ಮ್ ಮೂಲಕ ಪ್ರತಿಕ್ರಿಯೆಯನ್ನು ಕೋರಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಗಳು (NEET) ಮತ್ತು ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ (NET) ಅಕ್ರಮಗಳ ಆರೋಪದ ನಂತರ ಈ ಪ್ಲಾಟ್ ಫಾರ್ಮ್ ತೆರೆಯಲಾಗಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ NEET ಫಲಿತಾಂಶ ಅಕ್ರಮಗಳ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿರುದ್ಧ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ ಸಂಗ್ರಹ ಚಿತ್ರ
ದೆಹಲಿಯ ಜಂತರ್ ಮಂತರ್‌ನಲ್ಲಿ NEET ಫಲಿತಾಂಶ ಅಕ್ರಮಗಳ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿರುದ್ಧ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ ಸಂಗ್ರಹ ಚಿತ್ರ
Updated on

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಯನ್ನು ಸುಧಾರಿಸುವ ಕುರಿತು ಇಸ್ರೋ ಮಾಜಿ ಮುಖ್ಯಸ್ಥ ಆರ್ ರಾಧಾಕೃಷ್ಣನ್ ನೇತೃತ್ವದ ಕೇಂದ್ರದ ಉನ್ನತ ಮಟ್ಟದ ಪರೀಕ್ಷಾ ಸುಧಾರಣಾ ಸಮಿತಿ ಆಹ್ವಾನಿಸಿದ ಪ್ರತಿಕ್ರಿಯೆಗೆ 37 ಸಾವಿರಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಿದೆ.

ಪರೀಕ್ಷಾ ಪ್ರಕ್ರಿಯೆ, ದಾಖಲೆಗಳ ಭದ್ರತೆ ಶಿಷ್ಟಾಚಾರಗಳು ಮತ್ತು ಎನ್ ಟಿಎಯ ಕಾರ್ಯಾಚರಣೆಗಳಿಗೆ ಸುಧಾರಣೆಗಳನ್ನು ಪರಿಶೀಲಿಸಲು ಮತ್ತು ಸೂಚಿಸಲು ಸ್ಥಾಪಿಸಲಾದ ಸಮಿತಿಯು ನಿರ್ದಿಷ್ಟವಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಕಳವಳಗಳನ್ನು ಪರಿಹರಿಸುವಲ್ಲಿ ಗಮನಹರಿಸುತ್ತಿದೆ.

ಪರೀಕ್ಷೆಯ ಪ್ರಕ್ರಿಯೆಯ ಹಲವಾರು ಅಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿದ್ಯಾರ್ಥಿಗಳಿಂದ ಹೆಚ್ಚಿನ ಸಲಹೆಗಳು ಬಂದಿವೆ. ಗ್ರೇಸ್ ಅಂಕಗಳು ಮತ್ತು ಪರೀಕ್ಷಾ ಕೇಂದ್ರದ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಬೇಕೆಂದು ಸಲಹೆ ನೀಡಲಾಗಿದೆ. ಕೆಲವು ಸಲಹೆಗಳು ಸಾಮಾನ್ಯೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಕರೆ ನೀಡಿದರೆ, ಇತರರು ಅಂಕ ಹೆಚ್ಚುಕಡಿಮೆಯಾಗುವುದು ಅಥವಾ ಅಂಕ ಕಡಿತವನ್ನು ತಡೆಗಟ್ಟಲು ಹೆಚ್ಚಿನ ಪಾರದರ್ಶಕತೆಯನ್ನು ನಿರೀಕ್ಷಿಸುತ್ತಿದ್ದಾರೆ.

ಸಮಿತಿಯು ಜೂನ್ 27 ಮತ್ತು ಜುಲೈ 7 ರ ನಡುವೆ MyGov ಪ್ಲಾಟ್‌ಫಾರ್ಮ್ ಮೂಲಕ ಪ್ರತಿಕ್ರಿಯೆಯನ್ನು ಕೋರಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಗಳು (NEET) ಮತ್ತು ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ (NET) ಅಕ್ರಮಗಳ ಆರೋಪದ ನಂತರ ಈ ಪ್ಲಾಟ್ ಫಾರ್ಮ್ ತೆರೆಯಲಾಗಿದೆ. ಇದರಲ್ಲಿ ಪರೀಕ್ಷೆಯ ಸೋರಿಕೆಗಳು ಮತ್ತು ಸಮಗ್ರತೆಯ ಸಮಸ್ಯೆಗಳು ಸೇರಿವೆ.

ದೆಹಲಿಯ ಜಂತರ್ ಮಂತರ್‌ನಲ್ಲಿ NEET ಫಲಿತಾಂಶ ಅಕ್ರಮಗಳ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿರುದ್ಧ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ ಸಂಗ್ರಹ ಚಿತ್ರ
ಪಶ್ಚಿಮ ಬಂಗಾಳ ಸರ್ಕಾರದಿಂದ NEET, ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧ ನಿರ್ಣಯ ಅಂಗೀಕಾರ

ಕೇಂದ್ರದ ಪ್ರತಿಕ್ರಿಯೆಯು ಮುಂಜಾಗ್ರತಾ ಕ್ರಮವಾಗಿ ಸಿಎಸ್ ಐಆರ್ -ಯುಜಿಸಿ ನೆಟ್(CSIR-UGC NET)ಮತ್ತು NEET ಪಿಜಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಕೇಂದ್ರೀಯ ತನಿಖಾ ದಳ (CBI) ಪ್ರಸ್ತುತ ಈ ವಿಷಯಗಳ ಬಗ್ಗೆ ತನಿಖೆ ನಡೆಸುತ್ತಿದೆ.

ಪರೀಕ್ಷಾ ಪ್ರಕ್ರಿಯೆಗಳನ್ನು ಪರಿಶೀಲಿಸುವುದರ ಜೊತೆಗೆ, ಪ್ರಶ್ನೆ ಪತ್ರಿಕೆ ಮತ್ತು ಇತರ ಪರೀಕ್ಷಾ ಕಾರ್ಯವಿಧಾನಗಳಿಗಾಗಿ ಈಗಿರುವ ಭದ್ರತಾ ಶಿಷ್ಟಾಚಾರಗಳನ್ನು ಮೌಲ್ಯಮಾಪನ ಮಾಡುವ ಕಾರ್ಯವನ್ನು ಸಮಿತಿಯು ಹೊಂದಿದೆ. ಇದು ಏಮ್ಸ್ ದೆಹಲಿಯ ಮಾಜಿ ನಿರ್ದೇಶಕ ರಣದೀಪ್ ಗುಲೇರಿಯಾ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಉಪ ಕುಲಪತಿ ಬಿಜೆ ರಾವ್, ಐಐಟಿ ಮದ್ರಾಸ್ ವಿಶ್ರಾಂತ ಪ್ರಾಧ್ಯಾಪಕ ಕೆ ರಾಮಮೂರ್ತಿ, ಪೀಪಲ್ ಸ್ಟ್ರಾಂಗ್ ಸಹ-ಸಂಸ್ಥಾಪಕ ಪಂಕಜ್ ಬನ್ಸಾಲ್, ಐಐಟಿ ದೆಹಲಿ ವಿದ್ಯಾರ್ಥಿ ವ್ಯವಹಾರಗಳ ಡೀನ್ ಆದಿತ್ಯ ಮಿತ್ತಲ್ ಮತ್ತು MoE ಸೇರಿದಂತೆ ಹಲವಾರು ಪ್ರಮುಖ ಸದಸ್ಯರನ್ನು ಒಳಗೊಂಡಿದೆ. ಜಂಟಿ ಕಾರ್ಯದರ್ಶಿ ಗೋವಿಂದ್ ಜೈಸ್ವಾಲ್ ಅವರಿದ್ದಾರೆ.

ಎನ್‌ಟಿಎಯಿಂದ ಪರೀಕ್ಷೆಗೆ ಸಂಬಂಧಿಸಿದ ಕಾರ್ಯಗಳ ಹೊರಗುತ್ತಿಗೆಯನ್ನು ಕಡಿಮೆ ಮಾಡುವುದು, ಶಿಕ್ಷಣ ಕಾರ್ಯಪಡೆ ಮತ್ತು ಅಕ್ರಮಗಳನ್ನು ವರದಿ ಮಾಡಲು ಸಹಾಯವಾಣಿಯನ್ನು ಸ್ಥಾಪಿಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಆವರ್ತನವನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲು ಕೋಚಿಂಗ್ ಫೆಡರೇಶನ್ ಆಫ್ ಇಂಡಿಯಾ ಶಿಫಾರಸು ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com