
ಬದ್ರಿನಾಥ್: ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯ ಭಾಗವೊಂದು ಕುಸಿತವಾಗಿದೆ.
ರುದ್ರಪ್ರಯಾಗ ಸಮೀಪದ ನಾರ್ಕೋಟಾ ಪ್ರದೇಶದಲ್ಲಿ ಸಂಭವಿಸಿದ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಕಾರ್ಮಿಕರು ಚೌಕಟ್ಟು ಕುಸಿಯುತ್ತಿರುವುದನ್ನು ಅರಿತು ಓಡಿ ಹೋಗಿದ್ದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಸೇತುವೆಯ ಚೌಕಟ್ಟಿನ ಒಂದು ಭಾಗ ಕುಸಿದಿದೆ ಎಂದು ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಎಂಜಿನಿಯರ್ ತನುಜ್ ಕಾಂಬೋಜ್ ಹೇಳಿದ್ದಾರೆ.
ಚಾರ್‌ಧಾಮ್ ರಸ್ತೆ ಯೋಜನೆಯಡಿ ಸುಮಾರು 67 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆಯು ಕಳೆದ ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲಿದೆ.
ಅದೃಷ್ಟವಶಾತ್, ಸೇತುವೆಯ ಚೌಕಟ್ಟು ಕುಸಿದಾಗ, ಅಲ್ಲಿ ಕಾರ್ಮಿಕರು ಇರಲಿಲ್ಲ, ಇದರಿಂದಾಗಿ ಘಟನೆಯಲ್ಲಿ ಪ್ರಾಣಹಾನಿ ತಪ್ಪಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವಿಪತ್ತು ನಿರ್ವಹಣಾ ತಂಡವು ಸ್ಥಳಕ್ಕೆ ಆಗಮಿಸಿ ಆರ್‌ಸಿಸಿ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ರೂಪೇಶ್ ಮಿಶ್ರಾ ಅವರಿಂದ ಮಾಹಿತಿ ಪಡೆದಿದೆ. ವಿಪತ್ತು ನಿರ್ವಹಣಾ ತಂಡವು ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದೆ.
Advertisement