ಕೆನಡಾ ಮೂಲದ Khalistani ಭಯೋತ್ಪಾದಕ Lakhbir Singh Sandhu ಆಪ್ತನ ಬಂಧನ: NIA

ಪಂಜಾಬ್ ಮತ್ತು ಇತರ ಸ್ಥಳಗಳಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಯೋಜಿಸಿದ್ದವು. ಪಿತೂರಿಯ ಭಾಗವಾಗಿ ಬಲ್ಜೀತ್ ಸಿಂಗ್, ಸತ್‌ನಾಮ್‌ ಸಿಂಗ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾನೆ.
NIA arrests key aide of Canada-based wanted Khalistani terrorist Lakhbir Singh Sandhu
ಎನ್ಐಎ ಕಾರ್ಯಾಚರಣೆ
Updated on

ನವದೆಹಲಿ: ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾನ ಪ್ರಮುಖ ಸಹಚರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ‌) ಬಂಧಿಸಿದೆ ಎಂದು ತಿಳಿದುಬಂದಿದೆ.

ಬಂಧಿತನನ್ನು ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಬಲ್ಜೀತ್ ಸಿಂಗ್ ಅಲಿಯಾಸ್ ರಾಣಾ ಭಾಯ್ ಅಲಿಯಾಸ್ ಬಲ್ಲಿ ಎಂದು ಗುರುತಿಸಲಾಗಿದ್ದು, ಉದ್ಯಮಿಗಳಿಂದ ಸುಲಿಗೆ ಮಾಡಲು ಮಾರಕಾಸ್ತ್ರಗಳನ್ನು ಪೂರೈಸಿದ ಪ್ರಕರಣದಲ್ಲಿ ಈತನನ್ನು ಗುರುವಾರ ಬಂಧಿಸಲಾಗಿದೆ ಎಂದು NIA ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎನ್ಐಎ, 'ಪಂಜಾಬ್‌ನಲ್ಲಿ ಲಾಂಡಾನ ಏಜೆಂಟರಿಗೆ‌ ಬಲ್ಲಿ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ. ಉದ್ಯಮಿಗಳು ಮತ್ತು ಇತರರಿಂದ ಸುಲಿಗೆ ಸೇರಿದಂತೆ ದೊಡ್ಡ ಪ್ರಮಾಣದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಈ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತಿತ್ತು.

ಇದೇ ಪ್ರಕರಣದಲ್ಲಿ ಎನ್‌ಐಎ ಇನ್ನೊಬ್ಬ ಖಲಿಸ್ತಾನಿ ಭಯೋತ್ಪಾದಕ ಸತ್‌ನಾಮ್‌ ಸಿಂಗ್‌ ಸತ್ತಾ(Satnam Singh Satta)ನ ಸಹಚರ ಎನ್ನಲಾದ ಗುರುಪ್ರೀತ್ ಸಿಂಗ್ ಗೋಪಿ ಎಂಬಾತನನ್ನೂ ಬಂಧಿಸಿದೆ ಎಂದು ಮಾಹಿತಿ ನೀಡಿದೆ.

2023ರ ಜುಲೈ 10ರಂದು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಎನ್‌ಐಎ‌ ತನಿಖೆ ಆರಂಭಿಸಿತ್ತು. ಪಂಜಾಬ್ ಮತ್ತು ಇತರ ಸ್ಥಳಗಳಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಯೋಜಿಸಿದ್ದವು. ಪಿತೂರಿಯ ಭಾಗವಾಗಿ ಬಲ್ಜೀತ್ ಸಿಂಗ್, ಸತ್‌ನಾಮ್‌ ಸಿಂಗ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾನೆ.

ಭಾರತದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ಲಾಂಡಾ ಮತ್ತು ಸತ್‌ನಾಮ್‌ ಸಿಂಗ್‌ ಇಬ್ಬರೂ ಕೆನಡಾದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಎನ್ಐಎ ತನಿಖೆಯನ್ನು ಮುಂದುವರೆಸಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

NIA arrests key aide of Canada-based wanted Khalistani terrorist Lakhbir Singh Sandhu
ಕೆನಡಾ ಮೂಲದ ಉಗ್ರ ಲಾಂಡಾ ಗುಂಪಿನ ಐವರು ಸಹಚರರ ಬಂಧನ

"ಆಗ್ನೇಯ ಏಷ್ಯಾದ ಪ್ರದೇಶದ ಇತರ ಸ್ಥಳಗಳಲ್ಲಿ ಲಾವೋಸ್, ಗೋಲ್ಡನ್ ಟ್ರಯಾಂಗಲ್ ಎಸ್‌ಇಜೆಡ್‌ನಲ್ಲಿನ ನಕಲಿ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡಲು ಬಲವಂತವಾಗಿ ಕಳ್ಳಸಾಗಣೆಗೊಳಗಾದ ಯುವಕರನ್ನು ಒತ್ತಾಯಿಸಲಾಗುತ್ತಿತ್ತು. ಇದು ವಿದೇಶಿ ಪ್ರಜೆಗಳಿಂದ ಕಾರ್ಯಾಚರಣೆಯನ್ನು ಆಧರಿಸಿದೆ.

ನಂತರ ಯುವಕರನ್ನು ಈ ಕಾಲ್ ಸೆಂಟರ್‌ಗಳ ಮೂಲಕ ಆನ್‌ಲೈನ್ ವಂಚನೆ ಮಾಡಲು ಒತ್ತಾಯಿಸಲಾಯಿತು, ಯುವಕರನ್ನು ಅಕ್ರಮ ಆನ್‌ಲೈನ್ ಚಟುವಟಿಕೆಗಳನ್ನು ನಡೆಸುವಂತೆ ಒತ್ತಾಯಿಸಲಾಯಿತು. ಈ ವಂಚನೆಗಳು ಹೂಡಿಕೆ ಹಗರಣಗಳು, ಸಂಬಂಧದ ಹಗರಣಗಳು ಮತ್ತು ಕ್ರಿಪ್ಟೋಕರೆನ್ಸಿ ಹಗರಣಗಳನ್ನು ಒಳಗೊಂಡಿವೆ ಎಂದು ಎನ್ ಐಎ ಹೇಳಿಕೆಯಲ್ಲಿ ಉಲೇಖಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com